ಎಂದು ದಿವ್ಯಾ ಉರುಡುಗ ಕೆಂಪು ಸೀರೆ ಉಟ್ಟು ಫೋಟೋ ಶೂಟ್ ಮಾಡಿಸಿ
ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಕೆಂಪು ರೇಷ್ಮೇ ಸೀರೆ..ಅಂಚಿಗೆ ಚಿನ್ನದ ಬಣ್ಣದ ಜರಿಯ ಬಾರ್ಡರ್, ಅದಕ್ಕೊಪ್ಪುವ ಹಳೆಯ ಕಾಲದ ಮಾವಿನ ಆಕಾರದ ನೆಕ್ಲೇಸ್, ಜುಮುಕಿ ಸಿಂಪಲ್ ಮೇಕಪ್ನಲ್ಲಿ ಪೋಸ್ ಕೊಟ್ಟಿದ್ದಾರೆ.
ಸೀರಿಯಲ್ ಲೋಕದ ಪಯಣ..
ದಿವ್ಯಾ ಚಿಟ್ಟೆ ಹೆಜ್ಜೆ, ಅಂಬಾರಿ, ಖುಷಿ, ಓಂ ಶಾಂತಿ ಓಂ ಶಕ್ತಿ ದಾರವಾಗಿಯ ಮೂಲಕ ಸಿನಿಮಾ ರಂಗಕ್ಕೆ ಹಾಗೂ ಸೀರಿಯಲ್ ಲೋಕಕ್ಕೆ ಕಾಲಿಟ್ಟಿದ್ದರು. ತೆಲು, ತಮಿಳು ಕಿರುತರೆಯಲ್ಲೂ ದಿವ್ಯಾ ನಟಿಸಿದ್ದಾರೆ.
ದಿವ್ಯಾ-ಅರವಿಂದ್ ಲವ್
ದಿವ್ಯಾ ಅವರು ಸಿನಿಮಾ ಸೀರಿಯಲ್ನಲ್ಲಿ ನಟಿಸಿದ್ದರು ಅವರು ಸದ್ದು ಮಾಡಿದ್ದು ಬಿಗ್ ಬಾಸ್ ಸೀಸನ್8ರಲ್ಲಿ. ದಿವ್ಯಾ ಉರುಡುಗ ಕಂಟೆಸ್ಟೆಂಟ್ ಆಗಿದ್ದರು. ಇಲ್ಲಿಯೇ ಕ್ರೀಡಾಪಟುವಾಗಿದ್ದ ಅರವಿಂದ್ ಕೆಪಿ ಜೊತೆಗಿನ ಸ್ನೇಹ ಸಾಕಷ್ಟು ಗಮನ ಸೆಳೆದಿತ್ತು.
ಮದುವೆ ಬಗ್ಗೆ ಪ್ಲೀಸ್ ಕೇಳ್ಬೇಡಿ
ದಿವ್ಯಾ ಉರುಡುಗ ಮತ್ತು ಅರವಿಂದ್ ಅರ್ಧಂಬರ್ಧ ಪ್ರೇಮಕತೆ ಎನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ. ಇಬ್ಬರು ಮದುವೆಯಾಗುವುದು ಕನ್ಫರ್ಮ್ ಆಗಿತ್ತು. ಆದರೆ, ವಿಳಂವಾಗುತ್ತಿರುವ ಬಗ್ಗೆ ಪ್ರಶ್ನೆ ಮಾಡುತ್ತಿರುವಾಗಲೇ, ಆ ಬಗ್ಗೆ ದಯವಿಟ್ಟು ಕೇಳಲೇ ಬೇಡಿ ಎಂದು ಅವಾಯ್ಡ್ ಮಾಡಿದ್ದರು. ನಿಮಗೆ ಹೇಳದೆ ಮದುವೆಯಾಗಲ್ಲ ಎಂದಿದ್ದರು.
ಶೀಘ್ರ ಎಂಡ್ ಆದ ನಿನಗಾಗಿ ಸೀರಿಯಲ್
ಬಿಗ್ಬಾಸ್, ಸಿನಿಮಾ ನಂತರ ಮತ್ತೆ ದಿವ್ಯಾ ಅವರು ಸೀರಿಯಲ್ ಲೋಕಕ್ಕೆ ಕಾಲಿಟ್ಟಿದ್ದರು. ನಿನಗಾಗಿ ಸೀರಿಯಲ್ನಲ್ಲಿ ನಟಿಸುತ್ತಿದ್ದರು. ಆದರೆ ಕಾರಣಾಂತರದಿಂದ ಈ ಸೀರಿಯಲ್ ಶೀಘ್ರವೇ ಅಂತ್ಯ ಕಂಡಿತ್ತು.