ಮತ್ತೆ ಹಾಟ್​ ಅವತಾರವೆತ್ತಿದ ದಿವ್ಯಾ!

ರಮೇಶ್​ ಕುಮಾರ್​​ ಬಿ ಎಡಮೋಳೆ

ಮತ್ತೆ ಹಾಟ್​ ಅವತಾರವೆತ್ತಿದ ದಿವ್ಯಾ!

ನಟಿ ದಿವ್ಯಾ ಸುರೇಶ್ ಚಿಕ್ಕಮಗಳೂರಿನ ಪ್ರವಾಸದಲ್ಲಿದ್ದು, ಅಲ್ಲಿನ ಸುಂದರ ತಾಣಗಳಲ್ಲಿ ಸುತ್ತಾಡುತ್ತಾ, ಹಾಟ್​ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಶೂಟಿಂಗ್​ಗೆ ಬ್ರೇಕ್​

ಶೂಟಿಂಗ್ ಮತ್ತು ಗ್ಲಾಮರ್ ಪ್ರಪಂಚದಲ್ಲಿ ಬಿಜಿಯಾಗಿರುವ ನಟಿ ದಿವ್ಯಾ ಸುರೇಶ್, ಪ್ರವಾಸಿಗ ಸ್ವರ್ಗ ಚಿಕ್ಕಮಗಳೂರಿನಲ್ಲಿ ಬೀಡುಬಿಟ್ಟಿದ್ದು ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದಾರೆ. ಈ ಹಿಂದೆ ಸೈಕಲ್​ ಸವಾರಿ ಫೋಟೋಗಳನ್ನು ಹಂಚಿಕೊಂಡಿದ್ದರು.

ಬಿಗ್ ಬಾಸ್' ತಂದುಕೊಟ್ಟ ಜನಪ್ರಿಯತೆ

ದಿವ್ಯಾ ಸುರೇಶ್ ಅವರು ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ ಸೀಸನ್ 8' ರಲ್ಲಿ ಸ್ಪರ್ಧಿಯಾಗಿ ಭಾಗವಹಿಸುವ ಮೂಲಕ ಕರ್ನಾಟಕದ ಮನೆಮಾತಾದರು. ಈ ಶೋ ಅವರ ವೃತ್ತಿಜೀವನಕ್ಕೆ ದೊಡ್ಡ ಬ್ರೇಕ್ ನೀಡಿತು.

ಮಾಡೆಲಿಂಗ್ ಕ್ಷೇತ್ರದಿಂದ ಎಂಟ್ರಿ

ಮೂಲತಃ ಉಡುಪಿಯವರಾದ ದಿವ್ಯಾ, ಬೆಂಗಳೂರಿನಲ್ಲಿ ನೆಲೆಸಿದ್ದು ತಮ್ಮ ವೃತ್ತಿಜೀವನವನ್ನು ಮಾಡೆಲಿಂಗ್ ಮೂಲಕ ಆರಂಭಿಸಿದರು. ಪ್ರಮುಖ ಫ್ಯಾಷನ್ ಶೋಗಳು ಹಾಗೂ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದರು.

ಚಿತ್ರರಂಗದಲ್ಲಿ ಗುರುತಿಸಿಕೊಂಡ ನಟಿ

ಮಾಡೆಲಿಂಗ್ ಮತ್ತು ಬಿಗ್ ಬಾಸ್ ನಂತರ ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡರು. ಹಿರಣ್ಯ, ಕೆಂಪು ಹಳದಿ ಹಸಿರು, ರೌಡಿ ಬೇಬಿ ಸೇರಿದಂತೆ ಕೆಲ ಚಿತ್ರಗಳಲ್ಲಿ, ಸೀರಿಯಲ್​ಗಳಲ್ಲಿ ಹಾಗೂ ವೆಬ್ ಸೀರೀಸ್‌ಗಳಲ್ಲಿ ನಟಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯ

ಇನ್‌ಸ್ಟಾಗ್ರಾಮ್ ಸೇರಿದಂತೆ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ದಿವ್ಯಾ, ತಮ್ಮ ಹೊಸ ಫೋಟೋಶೂಟ್‌ಗಳು, ಪ್ರವಾಸದ ಕ್ಷಣಗಳು ಮತ್ತು ವರ್ಕೌಟ್ ವಿಡಿಯೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ.

ಶ್ವೇತ ಸುಂದರಿ ದಿವ್ಯಾ

ಇದೀಗ ದಿವ್ಯಾ ಹಂಚಿಕೊಂಡಿರುವ ಫೋಟೋಗಳಲ್ಲಿ ಚಿಕ್ಕಮಗಳೂರಿನ ಹಸಿರಾದ ಪ್ರಕೃತಿಯ ನಡುವೆ, ಬಿಳಿ ಬಣ್ಣದ ನೆಟ್ ಡಿಸೈನ್ ಉಡುಪನ್ನು ಧರಿಸಿ, ಕಿವಿಯ ಹಿಂದೆ ಹಳದಿ ಹೂವನ್ನಿಟ್ಟುಕೊಂಡು ಅತ್ಯಂತ ಸುಂದರವಾಗಿ ಕಂಗೊಳಿಸುತ್ತಿದ್ದಾರೆ.

ಫ್ಯಾನ್ಸ್​ ಫಿದಾ

ಸದ್ಯ ದಿವ್ಯಾ ಸುರೇಶ್​ ಅವರ ಫೋಟೋಗಳು ಜಾಲತಾಣದಲ್ಲಿ ವೈರಲ್​ ಆಗಿದ್ದು, ಅವರ ಮೈಮಾಟವನ್ನು ನೋಡಿ ಫ್ಯಾನ್ಸ್​ ಫಿದಾ ಆಗಿ, ಕಾಮೆಂಟ್​ಗಳ ಮೂಲಕ ಸೌಂದರ್ಯವನ್ನು ವರ್ಣಿಸುತ್ತಿದ್ದಾರೆ.