ವರುಣ್ ಕೊಂಡಿಲಾಲ ಅಭಿನಯದ ಲೋಫರ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ದಿಶಾ ಪಟಾನಿ ಮೌನಿ ರಾಯ್ ಜೊತೆಗೆ ಬಹಳ ಆತ್ಮೀಯವಾಗಿ ಅಲ್ಲಲ್ಲಿ ಕಾಣಿಸಿಕೊಂಡು ಸುದ್ದಿಯಲ್ಲಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕಪ್ಪು ಬಣ್ಣದ ಮಿನಿ ಡ್ರೆಸ್ ಧರಿಸಿ ಹಾಟ್ ಲುಕ್ನಲ್ಲಿ ಕಾಣಿಸಿಕೊಂಡಿರುವುದು ನೆಟ್ಟಿಗರ ಕಣ್ಸೆಳೆಯುವಂತೆ ಮಾಡಿದೆ.
ಚಿತ್ರಣ ಬದಲಿಸಿದ ಎಂಸ್ ಧೋನಿ ಸಿನಿಮಾ
2016ರಲ್ಲಿ ರಿಲೀಸ್ ಆದ ಎಂಎಸ್ ಧೋನಿ ದಿ ಅನ್ ಟೋಲ್ಡ್ ಸ್ಟೋರಿ ಮೂಲಕ ಬಾಲಿವುಡ್ನಲ್ಲಿ ಸಾಕಷ್ಟು ಹೆಸರು ಮಾಡಿದರು. Kaun Tujhe ಹಾಡು ಸಾಕಷ್ಟು ಪ್ರೇಮಿಗಳ ಹೃದಯ ಗೆಲ್ಲುವಂತೆ ಮಾಡಿತ್ತು.
ಸಾಲು ಸಾಲು ಹಿಟ್ ಸಿನಿಮಾ
ಎಂಎಸ್ ಧೋನಿ ದಿ ಅನ್ ಟೋಲ್ಡ್ ಸ್ಟೋರಿ ನಂತರ ದಿಶಾ ಪಟಾನಿಗೆ ಸಾಲು ಸಾಲು ಸಿನಿಮಾಗಳು ಸಿಕ್ಕವು. ಬಾಘಿ2, ಭಾರತ್, ಮಲಂಗ್, ಕಲ್ಕಿ 2898 ಎಡಿ ಸಿನಿಮಾದಲ್ಲಿ ತಮ್ಮ ಛಾಪು ಮೂಡಿಸಿದ್ದರು.
ಫಿಟ್ನೆಸ್ಗೆ ಹೆಸರುವಾಸಿ
ಉತ್ತರಪ್ರದೇಶದ ಬರೇಲಿಯವರಾದ ದಿಶಾ ಅವರು ನಟನೆ, ನೃತ್ಯ ಮತ್ತು ಅವರ ಫಿಟ್ನೆಸ್ಗೆ ಹೆಸರುವಾಸಿಯಾಗಿದ್ದಾರೆ.
ತಲ್ವೀಂದರ್ ಜೊತೆ ಡೇಟಿಂಗ್
ಪಂಜಾಬಿ ಗಾಯಕ ತಲ್ವೀಂದರ್ ಜೊತೆ ದಿಶಾ ಪಟಾನಿಯವರು ಹಲವಾರು ಬಾರಿ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ. ಇಬ್ಬರು ನೂಪುರ್ ಸನೂನ್ ಅವರ ಮದುವೆ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.