ಗ್ಲಾಮರಸ್​ ಗೊಂಬೆ ಹಯಾತಿ

ರಮೇಶ್​ ಕುಮಾರ್​​ ಬಿ ಎಡಮೋಳೆ

ಗ್ಲಾಮರಸ್​ ಗೊಂಬೆ ಹಯಾತಿ

ಟಾಲಿವುಡ್‌ ಹಾಟ್ ಹೀರೋಯಿನ್ ಡಿಂಪಲ್ ಹಯಾತಿ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ. ರವಿತೇಜ ಹಾಗೂ ವಿಶಾಲ್​ರಂತಹ ಸ್ಟಾರ್ ಹೀರೋಗಳ ಜತೆ ನಾಯಕಿಯಾಗಿ ನಟಿಸಿದ್ದಾರೆ.

ಮೊದಲ ಸಿನಿಮಾ

2017ರಲ್ಲಿ ತೆರೆಕಂಡ ತೆಲುಗು ಚಿತ್ರ Gulf ಮೂಲಕ ತಮ್ಮ ನಟನಾ ವೃತ್ತಿ ಜೀವನದನ್ನು ಆರಂಭಿಸಿದರು. ಆದರೆ, ಈ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ವಿಯಾಗಲಿಲ್ಲ.

ಪ್ರಸಿದ್ಧಿ ಪಡೆದ ಚಿತ್ರಗಳು

ತೆಲುಗು ಚಿತ್ರ ಖಿಲಾಡಿಯಲ್ಲಿ ಸ್ಟಾರ್​ ನಟ ರವಿತೇಜ ಜತೆ ನಟಿಸಿ, ಒಳ್ಳೆಯ ಹೆಸರು ಗಳಿಸಿದರು. ತಮಿಳಿನಲ್ಲಿ ನಟ ವಿಶಾಲ್​ ಅಭಿನಯದ ವೀರಮೇ ವಾಗೈ ಸೂಡುಂ ಸಿನಿಮಾದಲ್ಲಿ ನಟಿಸುವ ಮೂಲಕ ಒಳ್ಳೆಯ ಯಶಸ್ಸು ಗಳಿಸಿದರು.

ಬೋಲ್ಡ್​ ಬ್ಯೂಟಿ

ಹಯಾತಿ ಅವರು ಮುಖ್ಯವಾಗಿ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಕೆಲಸ ಮಾಡುತ್ತಾರೆ. ಗ್ಲಾಮರಸ್ ಪಾತ್ರಗಳು ಮತ್ತು ಐಟಂ ಸಾಂಗ್‌ಗಳಿಗೆ ಹೆಚ್ಚು ಗುರುತಿಸಿಕೊಂಡಿದ್ದಾರೆ.

ವೈಯಕ್ತಿಕ ಜೀವನ

ವಿಕ್ಟರ್ ಡೇವಿಡ್ ಎಂಬುವರನ್ನು ಮದುವೆಯಾಗಿದ್ದಾರೆ. ಇತ್ತೀಚೆಗೆ ಮನೆಕೆಲಸದಾಕೆಯೊಂದಿಗಿನ ಜಗಳದಿಂದಾಗಿ ಹಯಾತಿ ಸುದ್ದಿಯಾಗಿದ್ದರು.

ಜಾಲತಾಣದಲ್ಲಿ ಸಖತ್​ ಆ್ಯಕ್ಟೀವ್​

ಹಯಾತಿ ಅವರು ಕುಚಿಪುಡಿ ನೃತ್ಯದ ತರಬೇತಿ ಪಡೆದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 1 ಮಿಲಿಯನ್‌ಗಿಂತ ಹೆಚ್ಚು ಫಾಲೋವರ್‌ಗಳಿದ್ದು, ಫ್ಯಾಷನ್ ಮತ್ತು ಗ್ಲಾಮರ್ ಫೋಟೋಗಳಿಗೆ ಜನಪ್ರಿಯರಾಗಿದ್ದಾರೆ.

ಬರೀ ಬೋಲ್ಡ್​ ಫೋಟೋಗಳು

ಹಯಾತಿ ಅವರ ಇನ್​ಸ್ಟಾದಲ್ಲಿ ಅತಿ ಹೆಚ್ಚು ಬೋಲ್ಡ್​ ಫೋಟೋಗಳೇ ತುಂಬಿವೆ. ಹೀಗಾಗಿ ಅವರ ಫೋಟೋಗಳು ಆಗಾಗ ಜಾಲತಾಣದಲ್ಲಿ ವೈರಲ್​ ಆಗುತ್ತಲೇ ಇರುತ್ತವೆ. ಅದರಲ್ಲೂ ಬಿಕಿನಿ ಫೋಟೋಗಳು ಹೆಚ್ಚು ವೈರಲ್​ ಆಗುತ್ತವೆ.

ನಯಾ ಲುಕ್​

ತಮ್ಮ ಇನ್​ಸ್ಟಾಗ್ರಾಂನಲ್ಲಿ ಹೊಸದಾಗಿ ಹಂಚಿಕೊಂಡಿರುವ ಫೋಟೋಗಳಲ್ಲಿ ಹಯಾತಿ ಅವರು ದ್ರಾಕ್ಷಿ ಬಣ್ಣದ ಉಡುಪನ್ನು ಧರಿಸಿ ತಮ್ಮ ಸೌಂದರ್ಯವನ್ನು ಪ್ರದರ್ಶಿಸಿದ್ದಾರೆ. ಅವರ ಮೈಮಾಟಕ್ಕೆ ಫ್ಯಾನ್ಸ್​ ಫಿದಾ ಆಗಿದ್ದಾರೆ.