ಕಣ್ಣು, ಬಾಲವನ್ನು ನೋಡಿಯೇ ಮೀನಿನ ತಾಜಾತನ ಗುರುತಿಸಬಹುದು ಗೊತ್ತಾ?

ಸವಿನಾ ನಾಯ್ಕ

ಕಣ್ಣು, ಬಾಲವನ್ನು ನೋಡಿಯೇ ಮೀನಿನ ತಾಜಾತನ ಗುರುತಿಸಬಹುದು ಗೊತ್ತಾ?

ನೀವು ಮಾರುಕಟ್ಟೆಗೆ ಮೀನು (fish) ಖರೀದಿ ಮಾಡಲು ಹೋದರೆ ತಾಜಾ ಮೀನುಗಳನ್ನು ಹೇಗೆ ಗುರುತಿಸುವುದು ಎನ್ನುವ ಪ್ರಶ್ನೆ ಹಲವರಿಗೆ ಇರುತ್ತದೆ. ಉತ್ತಮ ಮೀನುಗಳನ್ನು ಹೇಗೆ ಆರಿಸಬೇಕೆಂದು ತಿಳಿದುಕೊಳ್ಳುವುದು ಬಹಳ ಮುಖ್ಯ

ಮೀನಿನ ಕಣ್ಣುಗಳನ್ನು ನೋಡಿ!

ಮೀನು ಉತ್ತಮವಾಗಿದ್ದರೆ, ಅದರ ಕಣ್ಣುಗಳು ಪ್ರಕಾಶಮಾನವಾಗಿರುತ್ತವೆ. ಹಳೆಯದಾಗಿದ್ದರೆ, ಕಣ್ಣುಗಳು ಮಂದ, ಗುಳಿಬಿದ್ದ ಅಥವಾ ಬಣ್ಣ ಕಳೆದುಕೊಂಡಂತೆ ಕಾಣಿಸಬಹುದು.

ಮೀನಿನ ವಾಸನೆ ನೋಡಿ!

ತಾಜಾ ಮೀನುಗಳು ಸಮುದ್ರದ ವಾಸನೆಯನ್ನು ಹೊಂದಿರುತ್ತವೆ. ಹಳೆಯ ಮೀನುಗಳು ಕೆಟ್ಟ ವಾಸನೆಯನ್ನು ಹೊಂದಿರುತ್ತವೆ.

ಮೀನಿನ ಬಾಲವನ್ನು ನೋಡಿ

ಮೀನನ್ನು ಬಾಲದಿಂದ ಹಿಡಿದು ಮೇಲಕ್ಕೆತ್ತಿ. ಅದು ತಾಜಾವಾಗಿದ್ದರೆ, ಮೀನು ಗಟ್ಟಿಯಾಗಿರುತ್ತದೆ ಮತ್ತು ನೇರವಾಗಿ ಇರುತ್ತದೆ. ಅದು ಹಳೆಯದಾಗಿದ್ದರೆ, ಮೀನು ಬಾಗುತ್ತದೆ ಮತ್ತು ನೇತಾಡುತ್ತದೆ.

ಮೀನ ಮಾಂಸದ ಗಟ್ಟಿಯಾಗಿರಬೇಕು!

ಮೀನನ್ನು ಬೆರಳಿನಿಂದ ಒತ್ತಿ ನೋಡಿ. ಅದು ದೃಢವಾಗಿದ್ದರೆ ಮತ್ತು ಒತ್ತಿದ ತಕ್ಷಣ ಮೊದಲಿನ ಸ್ಥಿತಿಗೆ ಬಂದರೆ ಅದು ತಾಜಾ. ಒತ್ತಿದ ಜಾಗದಲ್ಲಿ ಗುಂಡಿ ಉಳಿದರೆ, ಮೀನು ಮೃದುವಾಗುತ್ತಿದೆ ಮತ್ತು ಹಳೆಯದಾಗಿದೆ ಎಂದು ಅರ್ಥ.