ನಮ್ಮ ಪುಟ್ಟ ಪ್ರಪಂಚ ವಿಸ್ತರಿಸುತ್ತಿದೆ ಎಂದು ಡಾಲಿ ಧನಂಜಯ್ ಅವರು ಪತ್ನಿ ಧನ್ಯತಾ ಜೊತೆಗಿನ ಹೊಸ ಫೋಟೋಶೂಟ್ ಹಂಚಿಕೊಂಡಿದ್ದಾರೆ. ದಂಪತಿ ಪೋಷಕರಾಗಲಿದ್ದು, ಆ ಮೂಲಕ ಫ್ಯಾನ್ಸ್ಗೆ ಗುಡ್ನ್ಯೂಸ್ ಕೊಟ್ಟಿದ್ದಾರೆ.
ನಮ್ಮ ಪುಟ್ಟ ಪ್ರಪಂಚ ವಿಸ್ತರಿಸುತ್ತಿದೆ...
ಡಾಲಿ ಧನಂಜಯ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಪತ್ನಿ ಧನ್ಯತಾರ ಕೈ ಹಿಡಿದು, ಮುತ್ತನ್ನಿಡುತ್ತಿರುವ ಫೋಟೋ ಹಂಚಿಕೊಂಡಿದ್ದು, ಅಭಿಮಾನಿಗಳು ಕಂಗ್ರಾಜ್ಯುಲೇಶನ್ಸ್ ಹೇಳಿದ್ದಾರೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟು ವರ್ಷವಾಯ್ತು...
ಜನವರಿಯಲ್ಲಿ ಧನ್ಯತಾ ಅವರು ತಮ್ಮ ಕುಟುಂಬದ ಜೊತೆಗೆ ಮಾರಿಶೀಯಸ್ಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಮಾರಿಶೀಯಸ್ ಡೈರಿಸ್ ಎಂದು ಶೀರ್ಷಿಕೆ ಕೊಟ್ಟು ಫೋಟೋ ಹಂಚಿಕೊಂಡಿದ್ದನ್ನು ಕಂಡ ಕೆಲವರು ಧನ್ಯತಾ ಅವರು ಗರ್ಭಿಣಿಯಾಗಿದ್ದಾರಾ ಎನ್ನುವ ಸಂಶಯ ವ್ಯಕ್ತಪಡಿಸಿದ್ದರರು. ಊಹಾಪೋಹಕ್ಕೆ ಡಾಲಿ ಧನಂಜಯ್ ಈಗ ನೇರವಾಗಿ ಉತ್ತರ ಕೊಟ್ಟಿದ್ದಾರೆ.
ಮೊದಲ ಮಗು ನಿರೀಕ್ಷೆಯಲ್ಲಿ ದಂಪತಿ
ಫೆಬ್ರವರಿಯಲ್ಲಿ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು. ಒಂದು ವರ್ಷ ಹೋಗಿದ್ದು ಗೊತ್ತಾಗೆ ಇಲ್ಲ. ಅಮ್ಮನ ಮನಸ್ಸಿನಂತೆ ನನ್ನ ಜೊತೆ ದಿನ ಕಳೆದಿದ್ದಾಕ್ಕಾಗಿ ಧನ್ಯಾವಾ ಎಂದು ಧನಂಜಯ್ ವಿಷ್ ಮಾಡಿದ್ದರು.
ಮೈಸೂರಿನಲ್ಲಿ ನಡೆದಿತ್ತು ಅದ್ದೂರಿ ಮದುವೆ
ಧನಂಜಯ್ ಮತ್ತು ಡಾಕ್ಟರ್ ಧನ್ಯತಾ ಅವರು 2025 ಫೆಬ್ರವರಿ 16ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮೈಸೂರಿನಲ್ಲಿ ಇಬ್ಬರ ಮದುವೆ ಅದ್ದೂರಿಯಾಗಿ ನಡೆದಿತ್ತು. ಸಿನಿಮಾ ತಾರೆಯರು ಸೇರಿದಂತೆ ಹಲವರು ಆಗಮಿಸಿ ದಂಪತಿಗೆ ಹಾರೈಸಿದ್ದರು.
ಡಾಲಿ ನಿರ್ಮಾಣದ ಜೆರಾಕ್ಸ್ ವೆಬ್ ಸಿರೀಸ್
ಧನಂಜಯ್ ಅವರ ನಿರ್ಮಾಣದಡಿ ಜೆರಾಕ್ಸ್ ಎನ್ನುವ ವೆಬ್ ಸೀರಿಸ್ ಕನ್ನಡದಲ್ಲಿ ರಿಲೀಸ್ ಆಗಿದೆ. ಡಾಲಿ ಅವರ ಗೆಳೆಯ ನಾಗಭೂಷಣ್ ಮತ್ತು ಪಾಯಲ್ ಚೆಂಗಪ್ಪ ಸೇರಿದಂತೆ ಯುವ ನಟರು ಈ ಸೀರೀಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀನಿಧಿ ಬೆಂಗಳೂರು ನಿರ್ದೇಶನದ ವೆಬ್ ಸೀರಿಸ್ ಇದಾಗಿದೆ.
ಡಾಲಿ ಸಿನಿ ಪಯಣ
ಡಾಲಿ ಧನಂಜಯ್ ಅವರು ರಾಟೆ ಸಿನಿಮಾ ಮತ್ತು ಅಲ್ಲಮ ಮೂಲಕ ಹೆಚ್ಚು ಚಿರಪರಿಚಿತರಾದರು. ಟಗರು ಸಿನಿಮಾದಲ್ಲಿ ಖಳನಾಯಕನಾಗಿ, ರತ್ನನ್ ಪ್ರಪಂಚ, ಹೆಡ್ ಬುಷ್, ಕೋಟಿ, ಮಾನ್ಸೂನ್ ರಾಗ, ಬಡವ ರಾಸ್ಕಲ್, ಜೆಸ್ಸಿ ಸಿನಿಮಾ ಮೂಲಕ ಅಭಿಮಾನಿಗಳ ಮನ ಗಗೆದ್ದಿದ್ದರು.
ಡಾಲಿ ಮುಂದಿರುವ ಪ್ರಾಜೆಕ್ಟ್ ಇವು....
ಮದರ್ ಪ್ರಾಮಿಸ್, ಅಣ್ಣ ಫ್ರಮ್ ಮೆಕ್ಸಿಕೋ ಸಿನಿಮಾಗಳು ಜೂನ್ ಅಥವಾ ಜುಲೈನಲ್ಲಿ ರಿಲೀಸ್ ಆಗುವ ಸಾಧತ್ಯೆ ಇದೆ ಎನ್ನಲಾಗಿದೆ.