ಡೆವಿಲ್ ಸಿನಿಮಾದಲ್ಲಿ ನಟಿಸಿರುವ ಸುಂದರಿ ಮೂಲತ: ಕರಾವಳಿ ಬೆಡಗಿ. ಕನ್ನಡ ಚಲನಚಿತ್ರ ನಟಿ, ಮಾಡೆಲ್ ಮತ್ತು ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾರೆ.
ದಕ್ಷಿಣ ಕನ್ನಡದ ಪುತ್ತೂರಿನವರು
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರುನಲ್ಲಿ ಜನಿಸಿ ಬೆಳೆದ ಅವರು, ಇದೀಗ ದರ್ಶನ್‌ರ "ದಿ ಡೆವಿಲ್" ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಮುಖ್ಯ ನಟಿಯಾಗಿ ಪಾತ್ರ ನಿರ್ವಹಿಸಿದ್ದಾರೆ.
ಪತ್ರಿಕೋದ್ಯಮದಲ್ಲಿ ಡಿಗ್ರಿ
ಪತ್ರಿಕೋದ್ಯಮದಲ್ಲಿ ಡಿಗ್ರಿ ಪಡೆದಿದ್ದಾರೆ. ರತನಾಟ್ಯ ನೃತ್ಯದಲ್ಲಿ ತರಬೇತಿ ಪಡೆದ ನೃತ್ಯಶಿಲ್ಪಿ, ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿ ಮತ್ತು ಲೇಖಕರಾಗಿಯೂ ಗುರುತಿಸಿಕೊಂಡಿದ್ದಾರೆ.
ಆಡಿಷನ್ ಮೂಲಕ ಆಯ್ಕೆ
ದರ್ಶನ್ ದಿ ಡೆವಿಲ್ ಸಿನಿಮಾಗೆ ಆಡಿಷನ್ ಮೂಲಕ ಆಯ್ಕೆಯಾಗಿ, ಪರ್ಫಾರ್ಮೆನ್ಸ್ ಆಧಾರಿತ ಪಾತ್ರವನ್ನು ನಿರ್ವಹಿಸಿದ್ದಾರೆ. ತ್ರದ ಗ್ಲ್ಯಾಮರ್ ಸಾಂಗ್ "ಒಂದೇ ಒಂದು ಸಾಲ" ಈಗಾಗಲೇ ಜನಪ್ರಿಯವಾಗಿದೆ.
ದರ್ಶನ್ ಕುರಿತಂತೆ ಪ್ರಶಂಸೆ
ದರ್ಶನ್ ಅವರನ್ನು "ಕನ್ನಡ ಕಲಾವಿದರಿಗೆ ಅವಕಾಶ ನೀಡುವವರು" ಎಂದು ರಚನಾ ಪ್ರಶಂಸಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಸಕ್ರಿಯ
ದರ್ಶನ್ ಅಭಿಮಾನಿಗಳು ರಚನಾ ರೈ ಅವರನ್ನ "ಡೆವಿಲ್ ಕ್ವೀನ್" ಎಂದು ಕರೆಯುತ್ತಾರೆ. ಅಲ್ಲದೇ ರಚನಾ ಇನ್ಸ್ಟಾಗ್ರಾಂನಲ್ಲ ಆಕ್ಟಿವ್ ಆಗಿರ್ತಾರೆ.