ಮಗಳ ಮುಖ ಪರಿಚಯಿಸಿದ ದೀಪ್ವೀರ್!

Vijayavan

ಮಗಳ ಮುಖ ಪರಿಚಯಿಸಿದ ದೀಪ್ವೀರ್!

ಬಾಲಿವುಡ್​ ತಾರಾ ದಂಪತಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇದೇ ಮೊದಲ ಬಾರಿಗೆ ತಮ್ಮ ಮಗಳು ದುವಾಳ ಮುಖವನ್ನು ಬಹಿರಂಗಪಡಿಸಿದ್ದಾರೆ.

ಅಭಿಮಾನಿಗಳು ಖುಷಿ

ದೀಪಾವಳಿ ಹಬ್ಬದ ಖುಷಿಯ ಸಂದರ್ಭದಲ್ಲಿ ದೀಪ್ವೀರ್ ದಂಪತಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಮಗಳ ಫೋಟೋವನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಖುಷಿಯಾಗಿದ್ದಾರೆ.

ಸಾಂಪ್ರದಾಯಿಕ ಉಡುಗೆ

ಫೋಟೋಗಳಲ್ಲಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಸೊಗಸಾದ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿರುವುದನ್ನು ನೋಡಬಹುದು.

ಕಂಗೊಳಿಸಿದ ಡಿಪ್ಪಿ

ರಣವೀರ್ ಬಿಳಿ ಬಣ್ಣದ ಕುರ್ತಾ ಮತ್ತು ಅದಕ್ಕೆ ಹೊಂದಿಕೆಯಾಗುವ ಕೋಟ್ ಮತ್ತು ಕುತ್ತಿಗೆಗೆ ಆಭರಣ ಧರಿಸಿದ್ದರೆ, ದೀಪಿಕಾ ಅವರು ಕೆಂಪು ಬಣ್ಣದ ಸೂಟ್ ಮತ್ತು ಸ್ಟೇಟ್‌ಮೆಂಟ್ ಆಭರಣಗಳಲ್ಲಿ ಅದ್ಭುತವಾಗಿ ಕಾಣುತ್ತಾರೆ.

ದುವಾ ಮುದ್ದಾದ ಪೋಸ್

ದುವಾ ನಗುತ್ತಾ ಕ್ಯಾಮೆರಾಗೆ ಪೋಸ್​​ ನೀಡಿದ್ದಾಳೆ. ದೀಪಿಕಾ ಅವರು ದುವಾಳನ್ನು ತನ್ನ ತೋಳುಗಳಲ್ಲಿ ಹಿಡಿದುಕೊಂಡಾಗ, ರಣವೀರ್, ದುವಾಳನ್ನು ಅಪ್ಪಿಕೊಂಡಾಗ, ದುವಾ ತನ್ನ ಮುದ್ದಾದ ಪೋಸ್​ಗಳಿಂದ ಎಲ್ಲರ ಗಮನ ಸೆಳೆದಿದ್ದಾಳೆ.

ದೀಪಾವಳಿ ಪೂಜೆ

ಒಂದು ಫೋಟೋದಲ್ಲಿ ದೀಪಿಕಾ ಮತ್ತು ದುವಾ ಒಟ್ಟಿಗೆ ದೀಪಾವಳಿ ಪೂಜೆ ಮಾಡುವುದನ್ನು ನೋಡಬಹುದು. ಅಂದಹಾಗೆ, ದೀಪಿಕಾ ಅವರು ಈ ಪೋಸ್ಟ್‌ಗೆ "ದೀಪಾವಳಿ ಕಿ ಹಾರ್ದಿಕ್ ಶುಭಕಾಮನಾಂ" ಎಂದು ಹಿಂದಿಯಲ್ಲಿ ಶೀರ್ಷಿಕೆ ನೀಡಿದ್ದಾರೆ.

ದೀಪಿಕಾ ಡಿಂಪಲ್​

ಅಭಿಮಾನಿಗಳು ಕೂಡ ದುವಾ ಫೋಟೋ ನೋಡಿ ಖುಷಿಯಾಗಿದ್ದು, ದೀಪಾವಳಿಯ ಶುಭಾಯಗಳ ಮಹಾಪೂರವನ್ನೇ ಹರಿಸಿದ್ದಾರೆ. ದೀಪಿಕಾಗೆ ಇರುವ ಡಿಂಪಲ್​ ದುವಾಗೂ ಇದೆ ಎಂದಿದ್ದಾರೆ.