ದೀಪಿಕಾ ಪಡುಕೋಣೆ ತಾಯಿಯಾಗಿ ಬಡ್ತಿ ಪಡೆದ ನಂತರ ಅವರು ಕೇವಲ 8 ಗಂಟೆ ಕೆಲಸ ಮಾಡುತ್ತಾರೆ. ಅಲ್ಲದೆ, ಅವರು ಹೆಚ್ಚಿನ ಸಂಭಾವನೆ ಕೇಳಿದ್ದಾರೆ ಎಂಬ ಪ್ರಚಾರವೂ ಇತ್ತು. ಇತ್ತೀಚಿನ ಸಂದರ್ಶನವೊಂದರಲ್ಲಿ ಮತ್ತೆ ಈ ಬಗ್ಗೆ ದೀಪಿಕಾ ಮೌನ ಮುರಿದಿದ್ದಾರೆ.
ಅತಿಯಾದ ಒತ್ತಡ ಒಳ್ಳೆಯದಲ್ಲ
ಅತಿಯಾದ ದುಡಿಮೆಗೆ ಶ್ರಮ ತ್ಯಾಗ ಅಂತೆಲ್ಲಾ ಹೇಳುತ್ತಾವೆ. ಆದರೆ ಅದು ಆರೋಗ್ಯವನ್ನ ಹಾಳು ಮಾಡಿ ಒತ್ತಡಕ್ಕೆ ಸಿಲುಕಿಸಲಿದೆ. ಹಾಗಾಗಿ 8 ಗಂಟೆಯ ಕೆಲಸದ ಅವಧಿಯನ್ನೇ ಪಾಲಿಸುತ್ತೇನೆ. ಸಾಕಷ್ಟು ಸೂಪರ್ ಸ್ಟಾರ್ಗಳೂ ಹೀಗೆ ಮಾಡುತ್ತಾರೆ.
ಮಗುವಿಗೆ ಹೆಚ್ಚಿನ ಆದ್ಯತೆ
ತಾಯಿಯಾದ ನಂತರ ನಾನು ಮಗುವಿಗೆ ಹೆಚ್ಚಿನ ಆದ್ಯತೆ ಕೊಡಬೇಕು . ಹಾಗಾಗಿ ನಾನು ಈ ನಿಯಮವನ್ನು ಪಾಲಿಸಲು ಮುಂದಾಗಿದ್ದೇನೆ.
ನನ್ನ ಕಚೇರಿಯಲ್ಲೂ ಇದೇ ನಿಯಮವಿದೆ
ದೀಪಿಕಾ ನಡೆಸುತ್ತಿರುವ ಕಂಪನಿಗಳಲ್ಲಿಯೂ 8 ಗಂಟೆ ಕೆಲಸ. ವಾರಕ್ಕೆ 2 ದಿನ ರಜೆ ನಿಗದಿಯಾಗಿದೆ. ನಾನೂ ಸಹಿತ ನನ್ನ ಕಚೇರಿಯಲ್ಲಿ ಇದೇ ನಿಯಮವನ್ನೇ ಪಾಲಿಸುತ್ತಿದ್ದೇನೆ.
ತಾಯಂದಿರಿಗೆ ವಿಶೇಷ ಸೌಲಭ್ಯ
ತಾಯಂದಿರಿಗೆ ಕಚೇರಿಯಲ್ಲೇ ಹಾಲುಣಿಸಲು, ಆಟವಾಡಿಸಲು ವಿಶೇಷ ಸೌಲಭ್ಯವೂ ಇದೆ.