ಡ್ಯಾಶಿಂಗ್​ ಬ್ಯೂಟಿ ದಿಯಾ ಮಿರ್ಜಾ!

ವಿನಾಯಕ ನಾಯಕ

ಡ್ಯಾಶಿಂಗ್​ ಬ್ಯೂಟಿ ದಿಯಾ ಮಿರ್ಜಾ!

ದಿಯಾ ಮಿರ್ಜಾ ಡಿಸೆಂಬರ್ 9, 1981 ರಂದು ತೆಲಂಗಾಣದ ಹೈದರಾಬಾದ್‌ನಲ್ಲಿ ಜನಿಸಿದರು. ಇವರ ತಂದೆ ಜರ್ಮನ್ ಮೂಲದವರು ಮತ್ತು ತಾಯಿ ಭಾರತೀಯರಾಗಿದ್ದಾರೆ.

ಸೌಂದರ್ಯ ಸ್ಪರ್ಧೆ ವಿಜೇತೆ

ದಿಯಾ ಮಿರ್ಜಾ 2000ನೇ ಇಸವಿಯಲ್ಲಿ ನಡೆದ 'ಮಿಸ್ ಏಷ್ಯಾ ಪೆಸಿಫಿಕ್ ಇಂಟರ್‌ನ್ಯಾಷನಲ್ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಮೂಲಕ ದೇಶಾದ್ಯಂತ ಖ್ಯಾತಿ ಗಳಿಸಿದರು.

ಸಿನಿಮಾರಂಗ ಪ್ರವೇಶ

ದಿಯಾ 2001ರಲ್ಲಿ ತೆರೆಕಂಡ ಜನಪ್ರಿಯ ಪ್ರೇಮಕಥೆಯ 'ರೆಹನಾ ಹೇ ತೇರಿ ದಿಲ್ ಮೇ' ಚಿತ್ರದ ಮೂಲಕ ಬಾಲಿವುಡ್‌ಗೆ ನಾಯಕಿಯಾಗಿ ಪದಾರ್ಪಣೆ ಮಾಡಿದರು. ಈ ಸಿನಿಮಾ ಇಂದಿಗೂ ಯುವಜನರ ನೆಚ್ಚಿನ ಚಿತ್ರಗಳಲ್ಲಿ ಒಂದಾಗಿದೆ.

ಪ್ರಮುಖ ಸಿನಿಮಾಗಳು

ತಮ್ಮ ದೀರ್ಘ ವೃತ್ತಿಜೀವನದಲ್ಲಿ ದಿಯಾ 'ಲಗೇ ರಹೋ ಮುನ್ನಾ ಭಾಯ್', 'ಪರಿಣೀತಾ', ಸಂಜು, 'ಥಪ್ಪಡ್' ಹಾಗೂ 'ಧಕ್ ಧಕ್' ಸೇರಿದಂತೆ ಹಲವಾರು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ.

ಪರಿಸರ ಕಾಳಜಿ ಮತ್ತು ಸಮಾಜಮುಖಿ ಕಾರ್ಯ

ದಿಯಾ ಮಿರ್ಜಾ ಕೇವಲ ನಟಿಯಷ್ಟೇ ಅಲ್ಲದೆ, ಪ್ರಮುಖ ಪರಿಸರವಾದಿಯಾಗಿಯೂ ಗುರುತಿಸಿಕೊಂಡಿದ್ದಾರೆ. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ಭಾರತೀಯ ಸದ್ಭಾವನಾ ರಾಯಭಾರಿಯಾಗಿ ಹಾಗೂ ಸ್ವಚ್ಛ ಭಾರತ ಅಭಿಯಾನದ 'ಸ್ವಚ್ಛ ಸಾಥಿ' ಕಾರ್ಯಕ್ರಮದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಬಿಬಿಸಿಯ ಪ್ರತಿಷ್ಠಿತ 100 ಮಹಿಳೆಯರ ಪಟ್ಟಿಯಲ್ಲೂ ಇವರು ಸ್ಥಾನ ಪಡೆದಿದ್ದಾರೆ.

ವೈಯಕ್ತಿಕ ಜೀವನ

ಅವರು 2021ರ ಫೆಬ್ರವರಿಯಲ್ಲಿ ಮುಂಬೈನ ಉದ್ಯಮಿ ವೈಭವ್ ರೇಖಿ ಅವರನ್ನು ವಿವಾಹವಾದರು. ಈ ದಂಪತಿಗೆ ಅವ್ಯಾನ್ ಆಜಾದ್ ರೇಖಿ ಎಂಬ ಗಂಡು ಮಗುವಿದ್ದಾನೆ.