ರುಚಿಯ ಹಿಂದಿದೆ ಅಪಾಯ..ಯೂರಿಕ್ ಆ್ಯಸಿಡ್ ರೋಗಿಗಳು ಚಳಿಗಾಲದಲ್ಲಿ 5 ಪದಾರ್ಥಗಳನ್ನು ಸೇವಿಸದಿರುವುದು ಬೇಸ್ಟ್
ಮಣಿಕಂಠ ಪಾ ಹಿರೇಮಠ
ರುಚಿಯ ಹಿಂದಿದೆ ಅಪಾಯ..ಯೂರಿಕ್ ಆ್ಯಸಿಡ್ ರೋಗಿಗಳು ಚಳಿಗಾಲದಲ್ಲಿ 5 ಪದಾರ್ಥಗಳನ್ನು ಸೇವಿಸದಿರುವುದು ಬೇಸ್ಟ್
ಚಳಿಗಾಲದಲ್ಲಿ ನಮ್ಮ ಆಹಾರದ ಕ್ರಮ ಬದಲಾಗುತ್ತದೆ. ಆದರೆ, ಯೂರಿಕ್ ಆ್ಯಸಿಡ್ ಸಮಸ್ಯೆಯಿಂದ ಬಳಲುತ್ತಿರುವವರು ಚಳಿಗಾಲದ ಕೆಲವು ಜನಪ್ರಿಯ ಆಹಾರಗಳ ಬಗ್ಗೆ ಜಾಗರೂಕರಾಗಿರಬೇಕು. ರಕ್ತದಲ್ಲಿ ಯೂರಿಕ್ ಆ್ಯಸಿಡ್ ಹೆಚ್ಚಾದಾಗ ಅದು ಕೀಲುಗಳಲ್ಲಿ ಹರಳುಗಳ ರೂಪದಲ್ಲಿ ಸಂಗ್ರಹವಾಗಿ ತೀವ್ರ ನೋವಿಗೆ ಕಾರಣವಾಗಬಹುದು.
ಸಮೋಸಾ
ಸಮೋಸಾದ ಒಳಗಿನ ಆಲೂಗಡ್ಡೆ ಮಸಾಲೆ ಮತ್ತು ಕರಿದ ಹಿಟ್ಟು ಯೂರಿಕ್ ಆ್ಯಸಿಡ್ ಸಮಸ್ಯೆ ಇರುವವರಿಗೆ ಒಳ್ಳೆಯದಲ್ಲ. ಇದು ಕೀಲು ನೋವಿನ ಸಮಸ್ಯೆಯನ್ನು ಉಲ್ಬಣಗೊಳಿಸಬಹುದು.
ಮಟನ್
ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಅನೇಕರು ಮಾಂಸಾಹಾರವನ್ನು ಹೆಚ್ಚು ಸೇವಿಸುತ್ತಾರೆ. ಆದರೆ, ಕೆಂಪು ಮಾಂಸ (ಕುರಿ, ಆಡು) ಮತ್ತು ಕೆಲವು ಜಾತಿಯ ಮೀನುಗಳಲ್ಲಿ ಪ್ಯೂರಿನ್ ಅತ್ಯಂತ ಹೆಚ್ಚಾಗಿರುತ್ತದೆ. ಇವುಗಳ ಸೇವನೆಯು ರಕ್ತದಲ್ಲಿ ಯೂರಿಕ್ ಆ್ಯಸಿಡ್ ಮಟ್ಟವನ್ನು ದಿಢೀರನೆ ಏರಿಸುತ್ತದೆ.
ಸಿಹಿ ಪದಾರ್ಥಗಳು
ಚಳಿಗಾಲದ ಸಿಹಿತಿಂಡಿಗಳು, ಗಾಜರ್ ಹಲ್ವಾ ಅಥವಾ ಸಕ್ಕರೆ ಅಂಶ ಹೆಚ್ಚಿರುವ ಪಾನೀಯಗಳು ಅಪಾಯಕಾರಿ. ವಿಶೇಷವಾಗಿ ಫ್ರಕ್ಟೋಸ್ (Fructose) ಇರುವ ಪದಾರ್ಥಗಳು ಯೂರಿಕ್ ಆ್ಯಸಿಡ್ ಉತ್ಪತ್ತಿಯನ್ನು ವೇಗಗೊಳಿಸುತ್ತವೆ.
ಆಲ್ಕೋಹಾಲ್
ಚಳಿಗಾಲದ ಪಾರ್ಟಿಗಳಲ್ಲಿ ಆಲ್ಕೋಹಾಲ್ ಸೇವನೆ ಸಾಮಾನ್ಯ. ಆದರೆ ಆಲ್ಕೋಹಾಲ್ ದೇಹದಲ್ಲಿ ನೀರಿನಂಶವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ನೀರು ಕಡಿಮೆಯಾದಾಗ ಕಿಡ್ನಿಗಳು ಯೂರಿಕ್ ಆ್ಯಸಿಡ್ ಅನ್ನು ಹೊರಹಾಕಲು ಕಷ್ಟಪಡುತ್ತವೆ.
ಸಿಗಡಿ ಮೀನು
ಸಿಗಡಿಗಳಲ್ಲಿ ಪ್ಯೂರಿನ್ (Purines) ಅಂಶ ಅಧಿಕವಾಗಿರುತ್ತದೆ. ಚಳಿಗಾಲದಲ್ಲಿ ದೇಹವು ಯೂರಿಕ್ ಆ್ಯಸಿಡ್ ಅನ್ನು ಹೊರಹಾಕುವ ಪ್ರಕ್ರಿಯೆ ಸ್ವಲ್ಪ ನಿಧಾನವಿರಬಹುದು. ಸಿಗಡಿ ಸೇವನೆಯಿಂದ ಯೂರಿಕ್ ಆ್ಯಸಿಡ್ ಮಟ್ಟ ಹೆಚ್ಚಾಗಿ, ಕೀಲು ನೋವು ಉಲ್ಬಣಿಸಬಹುದು.