ಸಾನ್ಯಾ ಮಲೋತ್ರ ತನ್ನ ವಿಭಿನ್ನ ಅಭಿನಯ ಮತ್ತು ನಟನಾ ಶೈಲಿ ಮೂಲಕ ಜನರ ಮನಸ್ಸನ್ನು ಗೆಲ್ಲುವಲ್ಲಿ ಸಫಲರಾಗಿದ್ದಾರೆ. ಇತ್ತೀಚೆಗೆ ನಟಿ ಕಂದು ಬಣ್ಣದ ಸುಂದರ ಡ್ರೆಸ್ನಲ್ಲಿ ಫೋಟೊಶೂಟ್ ನಡೆಸಿದ್ದು, ಆ ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ದೆಹಲಿ ಮೂಲದ ಸಾನ್ಯಾ
ಸಾನ್ಯಾ 1992ರ ಫೆಬ್ರವರಿ 25 ರಂದು ದೆಹಲಿಯಲ್ಲಿ ಜನಿಸಿದರು. ದೆಹಲಿಯ ಪ್ರಸಿದ್ಧ ಗಾರ್ಗಿ ಕಾಲೇಜಿನಲ್ಲಿ ತಮ್ಮ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿ ಪದವಿ ಪಡೆದ ನಂತರ, ನಟನೆಯ ಕ್ಷೇತ್ರದತ್ತ ಹೆಜ್ಜೆ ಇರಿಸಿದರು.
ಅದ್ಭುತ ನೃತ್ಯಗಾರ್ತಿ
ಸಾನ್ಯಾ ಮಲ್ಹೋತ್ರಾ ಹಿಂದಿ ಚಲನಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಸಿದ್ಧ ಬಾಲಿವುಡ್ ನಟಿ ಹಾಗೂ ಅದ್ಭುತ ನೃತ್ಯಗಾರ್ತಿ. ಇವರು ತಮ್ಮ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡು ಪ್ರತಿಭಾವಂತ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ.
ಚಿತ್ರರಂಗ ಪ್ರವೇಶ
ಆಮಿರ್ ಖಾನ್ ಅವರ ಬ್ಲಾಕ್‌ಬಸ್ಟರ್ 'ದಂಗಲ್' ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಯಾರ್ಪಣೆ ಮಾಡಿದರು. ಕುಸ್ತಿಪಟು ಬಬಿತಾ ಫೋಗಟ್ ಪಾತ್ರದಲ್ಲಿ ಅತ್ಯುತ್ತಮವಾಗಿ ನಟಿಸುವ ಮೂಲಕ ಇವರು ದೇಶಾದ್ಯಂತ ಅಪಾರ ಜನಪ್ರಿಯತೆಯನ್ನು ಗಳಿಸಿದರು.
ಇತರ ಸಿನಿಮಾಗಳು
ಸಾನ್ಯಾ ವೃತ್ತಿಜೀವನದಲ್ಲಿ 'ಬಧಾಯಿ ಹೋ', 'ಪಾಗ್ ಗ್ಲೋ', ಹಾಗೂ ಶಾರುಖ್ ಖಾನ್ ಜೊತೆ ನಟಿಸಿದ 'ಜವಾನ್' ನಂತಹ ಹಲವು ಜನಪ್ರಿಯ ಹಾಗೂ ಯಶಸ್ವಿ ಚಲನಚಿತ್ರಗಳು ಸೇರಿವೆ.
ಫಿಲ್ಮ್‌ಫೇರ್ ವಿಜೇತೆ
ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ 'ಪಾಗ್ ಗ್ಲೋ' ಚಿತ್ರದಲ್ಲಿನ ಅದ್ಭುತ ಮತ್ತು ಭಾವನಾತ್ಮಕ ಅಭಿನಯಕ್ಕಾಗಿ ಇವರು ಪ್ರತಿಷ್ಠಿತ 'ಫಿಲ್ಮ್‌ಫೇರ್ ವಿಮರ್ಶಕರ ಪ್ರಶಸ್ತಿ'ಯನ್ನು ಪಡೆದುಕೊಂಡು ಸೈ ಎನಿಸಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾನಲ್ಲಿ ಸಕ್ರೀಯ
ತಮ್ಮ ಸಿನಿಮಾ ಹಾಗೂ ಖಾಸಗಿ ಜೀವನದ ಬಹುಭಾಗವನ್ನು ಸಾನ್ಯಾ, ತಮ್ಮ ಸೋಷಿಯಲ್ ಮೀಡಿಯಾ ವೇದಿಕೆಯಾದ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳುತ್ತಾರೆ. ಹಾಗೂ ಅವರು ಇದರಲ್ಲಿ ಸದಾ ಸಕ್ರೀಯವಾಗಿದ್ದಾರೆ.