ಒತ್ತಡ ಕಡಿಮೆ ಮಾಡಲು ದೈನಂದಿನ ಅಭ್ಯಾಸಗಳು!

ಭಾನುಪ್ರಿಯ ಡಿ.ಕೆ

ಒತ್ತಡ ಕಡಿಮೆ ಮಾಡಲು ದೈನಂದಿನ ಅಭ್ಯಾಸಗಳು!

ಒತ್ತಡವು ಮಾನಸಿಕ ಮತ್ತು ದೈಹಿಕ ಪ್ರಕ್ರಿಯೆಯಾಗಿದೆ. ಇದು ದೇಹದ ಸಹಜ ಪ್ರತಿಕ್ರಿಯೆಯಾಗಿ ಪ್ರಾರಂಭವಾಗುತ್ತದೆ. ಇದು ಮುಂದುವರೆದಂತೆ ದೀರ್ಘವಾದ ಸಮಸ್ಯೆಯಾಗಿ ಮಾರ್ಪಾಟಾಗುತ್ತದೆ.

ಆಳವಾದ ಉಸಿರಾಟ

ಪ್ರತಿಯೊಬ್ಬ ವ್ಯಕ್ತಿಯು ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ದಿನಕ್ಕೆ 5-10 ನಿಮಿಷಗಳ ಕಾಲ ಆಳವಾದ ಉಸಿರಾಟದ ಅಭ್ಯಾಸವನ್ನು ಮಾಡಬೇಕು. ಇದು ನರಮಂಡಲವನ್ನು ಶಾಂತಗೊಳಿಸಿ, ಒತ್ತಡವನ್ನು ಕಡಿಮೆ ಮಾಡುತ್ತದೆ.

ನಿಯಮಿತ ವ್ಯಾಯಾಮ

ದಿನಕ್ಕೆ ಕನಿಷ್ಠ 30 ನಿಮಿಷಗಳು ನಡಿಗೆ, ಓಟ ಅಥವಾ ಯೋಗವನ್ನು ಅಭ್ಯಾಸ ಮಾಡುವುದು ಇದು ಮನಸ್ಸನ್ನು ಆಯಾಸ ಮುಕ್ತಗೊಳಿಸಿ, ಒತ್ತಡವನ್ನು ಕಡಿಮೆ ಮಾಡುತ್ತದೆ.

ಧ್ಯಾನ

ದಿನಕ್ಕೆ 10 ನಿಮಿಷಗಳು ಧ್ಯಾನ ಮಾಡುವುದರಿಂದ ಇದು ಮನಸ್ಸನ್ನು ಅತ್ತಿತ್ತ ಓಡಾಡದಂತೆ, ತಡೆಯುತ್ತದೆ. ಇದು ಮನಸ್ಸನ್ನು ಹಗುರವಾಗಿಸಿ, ಒತ್ತಡವನ್ನು ಕಡಿಮೆ ಮಾಡುತ್ತದೆ.

ಸಾಕಷ್ಟು ನಿದ್ರೆ

ಪ್ರತಿದಿನ 7-8 ಗಂಟೆಗಳ ನಿಯಮಿತ ನಿದ್ರೆಯು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೆಯೇ ಮನಸ್ಸನ್ನು ಸ್ವಚ್ಛ ಇರುವಂತೆ ಮಾಡುತ್ತದೆ.

ಪೌಷ್ಟಿಕ ಆಹಾರ ಮತ್ತು ನೀರು

ಸಮತೋಲಿತ ಆಹಾರವನ್ನು ಸೇವಿಸುವುದು ಹಾಗೂ 3-4 ಲೀಟರ್​ ನೀರು ಕುಡಿಯುವುದರಿಂದ ಇದು ದೇಹದಲ್ಲಿ ಕೆಫೀನ್ ಮತ್ತು ಸಕ್ಕರೆಯನ್ನು ಕಡಿಮೆ ಮಾಡಿ, ಒತ್ತಡವನ್ನು ಕಡಿಮೆ ಮಾಡುತ್ತದೆ.