ಮಗನಿಗೆ ಕನ್ನಡದ ದೊರೆ ಇಮ್ಮಡಿ ಪುಲಿಕೇಶಿಯ ಬಾಲ್ಯದ ಹೆಸರಿಟ್ಟ ಡಾಲಿ ಧನಂಜಯ್
ನಿರುಪಾದಿ ಬ್ಯಾಡಗಿ
ಮಗನಿಗೆ ಕನ್ನಡದ ದೊರೆ ಇಮ್ಮಡಿ ಪುಲಿಕೇಶಿಯ ಬಾಲ್ಯದ ಹೆಸರಿಟ್ಟ ಡಾಲಿ ಧನಂಜಯ್
ಕನ್ನಡ ಚಿತ್ರ ರಂಗದ ಪ್ರಮುಖ ನಟ ಡಾಲಿ ಧನಂಜಯ್ ದಂಪತಿ ಗೌರಿ-ಗಣೇಶ್ ಹಬ್ಬದ ದಿನ ತಮ್ಮ ಮೊದಲ ಸುಪುತ್ರನ ಪೋಟೋ ರಿವೀಲ್ ಮಾಡಿದ್ದು, ಮಗನಿಗೆ ಕನ್ನಡದ ಪುರಾತನ ದೊರೆ ಇಮ್ಮಡಿ ಪುಲಿಕೇಶಿಯ ಬಾಲ್ಯದ ಹೆಸರನ್ನಿಟ್ಟಿದ್ದಾರೆ.
ಎರೆಯ ಎಂದು ನಾಮಕರಣ
ನಟ ಧನಂಜಯ್ ತಮ್ಮ ಮೊದಲ ಪುತ್ರನಿಗೆ ಅಚ್ಚ ಕನ್ನಡದ ಹೆಸರು ಎರೆಯ ಎಂದು ನಾಮಕರಣ ಮಾಡಿದ್ದಾರೆ. ಇದು ಇಮ್ಮಡಿ ಪುಲಿಕೇಶಿಯ ಬಾಲ್ಯದ ಹೆಸರು. ಎರೆಯ ಅಂದ್ರೆ ಒಡೆಯ, ಸ್ವಾಮಿ, ಅಧಿಪತಿ ಎಂದರ್ಥ.
ಕೊರಳಲ್ಲಿ ಕರ್ನಾಟಕ ಡಾಲರ್
ಡಾಲಿ ಧನಂಜಯ್ ತಮ್ಮ ಕಂದನಿಗೆ ಕರ್ನಾಟಕ ಡಾಲರ್ ಹಾಗೂ ಅದರ ಮೇಲೆ ಎರೆಯ ಎಂದು ಕನ್ನಡದಲ್ಲಿ ಬರೆದಿರುವ ಚಿನ್ನದ ಸರವನ್ನು ಹಾಕಿಸಿದ್ದಾರೆ.
ಮೇ 01ರಂದು ಮಗು ಜನನ
ಮೇ1ರಂದು ‘ಡಾಲಿ’ ಧನಂಜಯ್ ಮತ್ತು ಡಾ. ಧನ್ಯತಾ ದಂಪತಿಗೆ ಗಂಡು ಮಗು ಹುಟ್ಟಿದೆ. As the sun rose, so did our greatest joy, our baby boy. ನಿಮ್ಮ ಪ್ರೀತಿ ಆಶೀರ್ವಾದವಿರಲಿ ಎಂದು ಖುಷಿ ಹಂಚಿಕೊಂಡಿದ್ದರು.
ಡಾಲಿ ಹೇಳಿದ್ದೇನು?
ಗೌರಿ ಗಣೇಶ ಹಬ್ಬದ ಶುಭಾಶಯಗಳು. ನಮ್ಮನ್ನ ಪ್ರೀತಿಸುವ ಜೀವಗಳು, ಮಗನನ್ನ ನಮಗೆ ಯಾವಾಗ ತೋರಿಸುತ್ತೀರಿ ಅಂತ ಕೇಳ್ತ ಇದ್ರಿ, ಏನು ಹೆಸರು ಅಂತ ಕೇಳ್ತ ಇದ್ರಿ. ಹಬ್ಬದ ದಿನ, ಇವತ್ತು ಪರಿಚಯಿಸುತ್ತ ಇದೀವಿ. ಎಂದು ಹೇಳುತ್ತಾ ಎರೆಯ | EREYA ಎಂದು ಹೆಸರಿಟ್ಟ ಬಗ್ಗೆ ಹೇಳಿಕೊಂಡಿದ್ದಾರೆ.