ಚಳಿಗಾಲ ಆರಂಭವಾದಾಗಿನಿಂದ ಋತುಮಾನದ ಕಾಯಿಲೆಗಳ ಜೊತೆಗೆ, ಚರ್ಮದ ಸಮಸ್ಯೆಗಳೂ ನಮ್ಮನ್ನು ಕಾಡುತ್ತಿವೆ. ಚರ್ಮ ಬಿರುಕು ಬಿಡುವುದು, ತುಟಿಗಳು ಒಡೆದು ಹೋಗುವುದು ಮತ್ತು ಕೆಲವೊಮ್ಮೆ ತುಟಿಗಳಿಂದ ರಕ್ತಸ್ರಾವವಾಗುವುದು ಸಾಮಾನ್ಯ.
ಚಳಿಗಾಲದಲ್ಲಿ ತುಟಿ ಒಡೆಯುವುದಕ್ಕೆ ಕಾರಣ!
ಚಳಿಗಾಲದಲ್ಲಿ ತುಟಿ ಒಡೆಯುವುದು ಮತ್ತು ಚರ್ಮ ಬಿರುಕು ಬಿಡುವುದು ಸಾಮಾನ್ಯ ಸಮಸ್ಯೆ. ಇದಕ್ಕೆ ಮುಖ್ಯ ಕಾರಣ ಒಣಗಿದ ಗಾಳಿ, ತಂಪು ಹವೆ ಮತ್ತು ಒಳಾಂಗಣ ಹೀಟಿಂಗ್‌ನಿಂದ ತೇವಾಂಶ ಕಡಿಮೆಯಾಗುವುದು.
ಅಗತ್ಯ ಇರುವಷ್ಟಯ ನೀರು ಕುಡಿಯಿರಿ!
ಚಳಿಗಾಲದಲ್ಲಿ ನಾವು ನೈಸರ್ಗಿಕವಾಗಿ ಕಡಿಮೆ ನೀರು ಕುಡಿಯುತ್ತೇವೆ. ಇದು ಚರ್ಮದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಚಳಿಗಾಲದಲ್ಲಿ ಸಾಕಷ್ಟು ನೀರು ಕುಡಿಯುವುದು ಮತ್ತು ಚರ್ಮವನ್ನು ರಕ್ಷಿಸಲು ಮಾಯಿಶ್ಚರೈಸರ್‌ಗಳನ್ನು ಬಳಸುವುದು ಒಳ್ಳೆಯದು.
ತುಟಿ ಕುರಿತಾಗಿ ಕಾಳಜಿವಹಿಸಿ!
ತುಟಿ ನೆನೆಸಲು ತಣ್ಣೀರಿನಲ್ಲಿ ಒದ್ದೆ ಮಾಡಿದ ಬಟ್ಟೆಯಿಂದ 10-20 ಸೆಕೆಂಡ್ ಒತ್ತಿ, ತಕ್ಷಣ ದಪ್ಪವಾದ ಲಿಪ್ ಬಾಮ್ ಅಥವಾ ಪೆಟ್ರೋಲಿಯಂ ಜೆಲ್ಲಿ (ವ್ಯಾಸೆಲಿನ್) ಹಚ್ಚಿ. ಇದು ತೇವಾಂಶವನ್ನು ಲಾಕ್ ಮಾಡುತ್ತದೆ.
ತುಟಿ ನೆಕ್ಕಬೇಡಿ!
ತುಟಿ ನೆಕ್ಕಬೇಡಿ. ಇದು ಸಮಸ್ಯೆ ಹೆಚ್ಚಿಸುತ್ತದೆ. ಸಾಕಷ್ಟು ನೀರು ಕುಡಿಯಿರಿ.
ಚರ್ಮ ವೈದ್ಯರನ್ನು ಸಂಪರ್ಕಿಸಿ!
ಹೊರಗೆ ಹೋಗುವಾಗ SPF ಇರುವ ಲಿಪ್ ಬಾಮ್ ಬಳಸಿ (ಚಳಿಯಲ್ಲೂ ಸೂರ್ಯನ ಕಿರಣಗಳು ಹಾನಿ ಮಾಡಬಹುದು). ಸಮಸ್ಯೆ ತೀವ್ರವಾಗಿದ್ದರೆ ಅಥವಾ ರಕ್ತ ಬರುತ್ತಿದ್ದರೆ ಚರ್ಮ ವೈದ್ಯರನ್ನು ಸಂಪರ್ಕಿಸಿ.