ಡಯಾಬಿಟಿಸ್ ಕಂಟ್ರೋಲ್ ಮಾಡುವುದು ಈಗ ಸುಲಭ! ಇಂದೇ ಈ ನಿಯಮ ಪಾಲಿಸಿ Diabetes Care

ಭಾನುಪ್ರಿಯ ಡಿ.ಕೆ

ಡಯಾಬಿಟಿಸ್ ಕಂಟ್ರೋಲ್ ಮಾಡುವುದು ಈಗ ಸುಲಭ! ಇಂದೇ ಈ ನಿಯಮ ಪಾಲಿಸಿ Diabetes Care

ದೇಹದಲ್ಲಿ ಇನ್ಸುಲಿನ್ ಉತ್ಪತ್ತಿ ಕಡಿಮೆಯಾಗುತ್ತದೆಯೋ ಅಥವಾ ಉತ್ಪತ್ತಿಯಾದ ಇನ್ಸುಲಿನ್ ಅನ್ನು ದೇಹವು ಸರಿಯಾಗಿ ಬಳಸಿಕೊಳ್ಳುವುದಿಲ್ಲವೋ, ಆಗ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾಗುತ್ತದೆ. ಈ ಸ್ಥಿತಿಯನ್ನೇ ವೈದ್ಯಕೀಯ ಭಾಷೆಯಲ್ಲಿ 'ಡಯಾಬಿಟಿಸ್ ಮೆಲ್ಲಿಟಸ್' ಎನ್ನಲಾಗುತ್ತದೆ.

ನಿಯಮಿತ ವ್ಯಾಯಾಮ ಮಾಡಿ

ಪ್ರತಿದಿನ ಕನಿಷ್ಠ 30-45 ನಿಮಿಷಗಳು ನಡಿಗೆ, ಸೈಕ್ಲಿಂಗ್, ಯೋಗ ಅಥವಾ ವ್ಯಾಯಾಮ ಮಾಡಿ. ಇದರಿಂದ ದೇಹದ ಕೋಶಗಳು ಗ್ಲೂಕೋಸ್ ಅನ್ನು ಉತ್ತಮವಾಗಿ ಬಳಸಿಕೊಳ್ಳುತ್ತವೆ. ಇನ್ಸುಲಿನ್ ಸಂವೇದನಶೀಲತೆ ಹೆಚ್ಚುತ್ತದೆ ಮತ್ತು ಶುಗರ್ ಮಟ್ಟ ತಕ್ಷಣ ಕಡಿಮೆಯಾಗುತ್ತದೆ.

ಫೈಬರ್ ಹೆಚ್ಚಿನ ಆಹಾರ ಸೇವಿಸಿ

ಹಸಿರು ತರಕಾರಿಗಳು, ಬೇಳೆಕಾಳುಗಳು, ಓಟ್ಸ್, ರಾಗಿ, ಜವೆ, ಹಣ್ಣುಗಳು ಮತ್ತು ಬೀಜಗಳು ಸೇರಿಸಿ. ಫೈಬರ್ ಸಕ್ಕರೆಯ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸಿ ಸ್ಪೈಕ್‌ಗಳನ್ನು ತಡೆಯುತ್ತದೆ.

ಸಮತೋಲಿತ ಊಟ ಮಾಡಿ

ಬಿಳಿ ಅಕ್ಕಿ, ಮೈದಾ, ಸಿಹಿ ತಿನ್ನಿಸುಗಳು, ಸಕ್ಕರೆಯ ಪಾನೀಯಗಳನ್ನು ಕಡಿಮೆ ಮಾಡಿ. ಬದಲಿಗೆ ಕಡಿಮೆ GI ಆಹಾರಗಳು ಆಯ್ಕೆಮಾಡಿ. ಊಟದಲ್ಲಿ ಪ್ರೋಟೀನ್, ಆರೋಗ್ಯಕರ ಕೊಬ್ಬು, ಮತ್ತು ತರಕಾರಿಗಳನ್ನು ಸೇರಿಸಿ ಇದು ಸಕ್ಕರೆಯನ್ನು ನಿಧಾನವಾಗಿ ಬಿಡುಗಡೆ ಮಾಡುತ್ತದೆ.

ಹೆಚ್ಚು ನೀರು ಕುಡಿಯಿರಿ

ದಿನಕ್ಕೆ 2-3 ಲೀಟರ್ ನೀರು ಕುಡಿಯಿರಿ. ಇದು ಮೂತ್ರದ ಮೂಲಕ ಹೆಚ್ಚುವರಿ ಸಕ್ಕರೆಯನ್ನು ಹೊರಹಾಕುತ್ತದೆ. ಒತ್ತಡದಿಂದ ಹಾರ್ಮೋನ್‌ಗಳು ಶುಗರ್ ಹೆಚ್ಚಿಸುತ್ತವೆ. ಅನುಲೋಮ-ವಿಲೋಮ, ಕಪಾಲಭಾತಿ ಅಥವಾ ಧ್ಯಾನ ಮಾಡಿ ಒತ್ತಡ ಕಡಿಮೆ ಮಾಡಿ.

ನಿಯಮಿತ ಶುಗರ್ ಪರೀಕ್ಷೆ

ಹೊಟ್ಟೆಯ ಸುತ್ತಲಿನ ಹೆಚ್ಚುವರಿ ತೂಕ ಕಡಿಮೆ ಮಾಡಿ. ದಿನಕ್ಕೆ 2-3 ಬಾರಿ ಗ್ಲೂಕೋಮೀಟರ್‌ನಲ್ಲಿ ಶುಗರ್ ಪರೀಕ್ಷಿಸಿ. ಔಷಧಿ/ಇನ್ಸುಲಿನ್ ಡೋಸ್ ಡಾಕ್ಟರ್ ಸಲಹೆಯಂತೆ ಮಾತ್ರ ಬದಲಾಯಿಸಿ.