ಒತ್ತಡವನ್ನು ನಿಗ್ರಹಿಸಲು ಈ ಐದು ಗಿಡಮೂಲಿಕೆಗಳನ್ನು ಸೇವಿಸಿ

ವಿನಾಯಕ ನಾಯಕ

ಒತ್ತಡವನ್ನು ನಿಗ್ರಹಿಸಲು ಈ ಐದು ಗಿಡಮೂಲಿಕೆಗಳನ್ನು ಸೇವಿಸಿ

ಇಂದಿನ ಒತ್ತಡದ ಜೀವನಶೈಲಿಯಲ್ಲಿ ಮಾನಸಿಕ ಶಾಂತಿ ಪಡೆಯಲು ಭಾರತೀಯ ಆಯುರ್ವೇದದ ಗಿಡಮೂಲಿಕೆಗಳು ರಾಮಬಾಣ. ಅಶ್ವಗಂಧ, ಬ್ರಾಹ್ಮಿ ಮತ್ತು ತುಳಸಿಯಂತಹ ನೈಸರ್ಗಿಕ ಮೂಲಿಕೆಗಳು ಮೆದುಳನ್ನು ಶಾಂತಗೊಳಿಸಿ, ಆತಂಕವನ್ನು ದೂರಮಾಡುತ್ತವೆ.

ಅಶ್ವಗಂಧ (Ashwagandha)

ಇದು ಒತ್ತಡ ನಿವಾರಣೆಗೆ ಅತ್ಯಂತ ಪ್ರಸಿದ್ಧವಾದ ಮೂಲಿಕೆ. ಇದು ದೇಹದಲ್ಲಿನ ಕಾರ್ಟಿಸೋಲ್ ಎಂಬ ಒತ್ತಡದ ಹಾರ್ಮೋನ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಬ್ರಾಹ್ಮಿ (Brahmi)

ಬ್ರಾಹ್ಮಿ ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಬ್ರೈನ್ ಟಾನಿಕ್ ಎಂದು ಕರೆಯಲ್ಪಡುತ್ತದೆ. ಇದು ಸ್ಮರಣಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.

ತುಳಸಿ (Tulsi)

ತುಳಸಿಯನ್ನು ಗಿಡಮೂಲಿಕೆಗಳ ರಾಣಿ ಎಂದು ಕರೆಯಲಾಗುತ್ತದೆ. ಇದರಲ್ಲಿರುವ ಔಷಧೀಯ ಗುಣಗಳು ನೈಸರ್ಗಿಕವಾಗಿ ಒತ್ತಡವನ್ನು ನಿವಾರಿಸುತ್ತವೆ.

ಶಂಖಪುಷ್ಪಿ (Shankhapushpi)

ಇದು ನರಮಂಡಲವನ್ನು ಶಾಂತಗೊಳಿಸುವ ಅದ್ಭುತ ಮೂಲಿಕೆ. ನಿದ್ರಾಹೀನತೆ ಮತ್ತು ಅತಿಯಾದ ಆತಂಕದಿಂದ ಬಳಲುವವರಿಗೆ ಇದು ಬಹಳ ಉಪಯುಕ್ತ

ಜಟಾಮಾಂಸಿ (Jatamansi)

ಮಾನಸಿಕ ಒತ್ತಡ ಮತ್ತು ಖಿನ್ನತೆಯಂತಹ ಸಮಸ್ಯೆಗಳಿಗೆ ಜಟಾಮಾಂಸಿ ರಾಮಬಾಣ. ಇದು ನರಗಳನ್ನು ಶಾಂತಗೊಳಿಸುವ ಗುಣವನ್ನು ಹೊಂದಿದೆ.