ರಮೇಶ್ ಕುಮಾರ್ ಬಿ ಎಡಮೋಳೆ
ತೆಂಗಿನಕಾಯಿ ಇಂದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ಪೂಜೆಯಿಂದ ಹಿಡಿದು ಅಡುಗೆವರೆಗೂ ತೆಂಗಿನಕಾಯಿ ಬೇಕೆ ಬೇಕು.
ತೆಂಗಿನಕಾಯಿಯಲ್ಲಿ ಸಾಕಷ್ಟು ಆರೋಗ್ಯಕರ ಲಾಭಗಳಿವೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ತೆಂಗಿಕಾಯಿ ಹಣ್ಣೋ? ಅಥವಾ ತರಕಾರಿಯೋ ಎಂದು ಕೇಳಿದರೆ ಬಹುತೇಕರಿಗೆ ತಿಳಿದಿಲ್ಲ.
ತೆಂಗಿನಕಾಯಿ ಹಣ್ಣು ಎಂದು ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಅದರ ಹೆಸರಿನಲ್ಲಿ "ಕಾಯಿ" ಎಂಬ ಪದವನ್ನು ಹೊಂದಿದ್ದರೂ ಸಹ ತೆಂಗಿನಕಾಯಿ ಒಂದು ಹಣ್ಣು ಹೊರತು ಕಾಯಿ ಅಥವಾ ತರಕಾರಿಯಲ್ಲ.
ವಾಸ್ತವವಾಗಿ ತೆಂಗಿನಕಾಯಿಯು ಡ್ರೂಪ್ಸ್ ಎಂದು ಕರೆಯಲ್ಪಡುವ ಉಪವರ್ಗದ ಅಡಿಯಲ್ಲಿ ಬರುತ್ತದೆ. ಇದು ಗಟ್ಟಿಯಾದ ಚಿಪ್ಪಿನಿಂದ ಸುತ್ತುವರಿದ ಆಂತರಿಕ ತಿರುಳು ಮತ್ತು ಬೀಜವನ್ನು ಹೊಂದಿರುವ ಹಣ್ಣುಗಳು ಎಂದು ವ್ಯಾಖ್ಯಾನಿಸಲಾಗಿದೆ.
ಪೀಚ್, ಪೇರಳೆ, ವಾಲ್
ನಟ್ಸ್ ಮತ್ತು ಬಾದಾಮಿಗಳಂತಹ ವಿವಿಧ ಹಣ್ಣುಗಳ ವರ್ಗದ ಅಡಿಯಯಲ್ಲಿ ತೆಂಗಿನಕಾಯಿಯು ಸಹ ಬರುತ್ತದೆ.