ಮದ್ಯ ಕುಡಿದ ತಕ್ಷಣ ದೇಹದಲ್ಲಿ ಆಗುವ ಬದಲಾವಣೆಗಳಿವು

ಮೋಹನ್​ ಶೆಟ್ಟಿ

ಮದ್ಯ ಕುಡಿದ ತಕ್ಷಣ ದೇಹದಲ್ಲಿ ಆಗುವ ಬದಲಾವಣೆಗಳಿವು

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಬಾಟಲಿ ಅಥವಾ ಮದ್ಯದ ಪ್ಯಾಕೆಟ್​ ಮೇಲೆ ಬರೆದಿದ್ದರೂ ಕುಡಿತಕ್ಕೆ ದಾಸರಾದವರು ಮಾತ್ರ ಅದಕ್ಕೆಲ್ಲ ಕಿಂಚಿತ್ತು ತಲೆಕಡಿಸಿಕೊಳ್ಳಲ್ಲ

ಇಲ್ಲಿದೆ ನೋಡಿ ನಿಮಗೆ ಗೊತ್ತಿರದ ಅಚ್ಚರಿ ಮಾಹಿತಿ

ಕೆಲವರು ವಾರಾಂತ್ಯದಲ್ಲಿ ತಮ್ಮ ಮಾನಸಿಕ ನೆಮ್ಮದಿ ಮತ್ತು ಸಂತೋಷಕ್ಕಾಗಿ ಕುಡಿದರೆ, ಇನ್ನೂ ಕೆಲವರು ಪ್ರತಿದಿನ ಕಂಠಪೂರ್ತಿ ಸೇವಿಸಿ, ನಶೆಯಲ್ಲಿ ತೂರಾಡುತ್ತಾರೆ.

ಅಷ್ಟಕ್ಕೂ, ಇದಕ್ಕೆಲ್ಲ ಕಾರಣವೇನು?

ಮದ್ಯ ಸೇವಿಸುತ್ತಿದ್ದಂತೆ ಡೋಪಮೈನ್ ಮತ್ತು ಎಂಡಾರ್ಫಿನ್‌ನಂತಹ ಹಾರ್ಮೋನುಗಳು ಮಿದುಳಿನಲ್ಲಿ ರಿಲೀಸ್​ ಆಗುತ್ತವೆ. ಇದು ಕ್ಷಣಿಕ ಸುಖ ಮತ್ತು ಸಂತೋಷವನ್ನು ನೀಡುತ್ತದೆ.

ಬೇಡದ ಸಮಸ್ಯೆಗಳು

ಈ ಮಧ್ಯೆ, ನೀವು ಹೆಚ್ಚು ತಿಂದರೆ ಅಥವಾ ಕುಡಿದರೆ, ಬೇಡದ ಸಮಸ್ಯೆಗಳು ಕಾಡಲಾರಂಭಿಸುತ್ತವೆ. ಅತಿಯಾದ ಮದ್ಯಪಾನವು ಮಿದುಳಿನ ಚಟುವಟಿಕೆಯನ್ನು ಕಡಿತಗೊಳಿಸುತ್ತದೆ.

ದೊಡ್ಡ ಸಮಸ್ಯೆಗೂ ಕಾರಣ

ಇದರಿಂದ ನರಗಳು ಡ್ಯಾಮೇಜ್​ ಆಗಲಿವೆ. ಹೃದಯ ಬಡಿತ ಕಡಿಮೆಯಾಗುತ್ತದೆ ಮತ್ತು ಉಸಿರಾಟ ನಿಧಾನವಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಇದು ದೊಡ್ಡ ಸಮಸ್ಯೆಗೂ ಕಾರಣವಾಗಬಹುದು.

ಕೇವಲ 6 ನಿಮಿಷಗಳಲ್ಲಿ...

ಎಣ್ಣೆ ಎಫೆಕ್ಟ್​ ಕುಡಿದ ತಕ್ಷಣ ಕಾಡಲು ಶುರುವಾಗುತ್ತದೆ. ಮದ್ಯಪಾನ ಮಾಡಿದ ಕೇವಲ 6 ನಿಮಿಷಗಳಲ್ಲಿ ಅದರ ಪರಿಣಾಮ ಮಿದುಳಿನ ಕೋಶಗಳನ್ನು ತಲುಪುತ್ತದೆ.

ಇದಕ್ಕಿದ್ದಂತೆ ಧೈರ್ಯಶಾಲಿ ಎಂಬ ಭಾವನೆ

ಇದಕ್ಕೆ ಮುಖ್ಯ ಕಾರಣ ಗಾಬಾ ಅಮೈನೊ ಬ್ಯುಟರಿಕ್ ಆಮ್ಲ (GABA) ಎಂಬ ನ್ಯೂರೋಟ್ರಾನ್ಸ್​ಮೀಟರ್​. ಇದು ನಿಮ್ಮನ್ನು ಇದಕ್ಕಿದ್ದಂತೆ ಧೈರ್ಯಶಾಲಿ ಎಂಬ ಭಾವನೆಗೆ ದೂಡುತ್ತದೆ