ಕನ್ನಡ ಚಿತ್ರರಂಗದಲ್ಲಿ ತಮ್ಮ ಸಹಜ ಅಭಿನಯ ಮತ್ತು ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ನಟಿ ಚೈತ್ರ ಜೆ ಆಚಾರ್ ಯುವ ಪ್ರತಿಭಾವಂತ ನಟಿಯರಲ್ಲಿ ಒಬ್ಬರು.
ಕಪ್ಪು ಉಡುಪಿನಲ್ಲಿ ರಾಯಲ್ ಲುಕ್!
ಕಪ್ಪು ಬಣ್ಣದ ಸಾಂಪ್ರದಾಯಿಕ ಉಡುಪಿನಲ್ಲಿ ಚೈತ್ರ ಜೆ ಆಚಾರ್ ಸೊಬಗಿನ ಜೊತೆಗೆ ರಾಜಮನೆತನದ ಶೈಲಿಯ ಛಾಪು ಮೂಡಿಸಿದ್ದಾರೆ. ಹೆವಿ ಚೋಕರ್ ನೆಕ್ಲೆಸ್, ಜಡೆ ಹಾಗೂ ಮಿನಿಮಲ್ ಮೇಕಪ್ ಅವರ ಲುಕ್‌ಗೆ ಮತ್ತಷ್ಟು ಮೆರುಗು ನೀಡಿದ್ದು, ಈ ಫೋಟೋಶೂಟ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ಜನಪ್ರಿಯ ಚಿತ್ರಗಳು
ಮಹಿರ, ಸಪ್ತ ಸಾಗರದಾಚೆ ಎಲ್ಲೋ – ಸೈಡ್ A, ಸಪ್ತ ಸಾಗರದಾಚೆ ಎಲ್ಲೋ – ಸೈಡ್ B, ಟೋಬಿ, ತಲೆದಂಡ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿ ಗಮನ ಸೆಳೆದಿದ್ದಾರೆ. ಭಾವನಾತ್ಮಕ ಹಾಗೂ ನೈಜ ಅಭಿನಯಕ್ಕಾಗಿ ಅವರು ಸಿನಿಪ್ರೇಕ್ಷಕರಿಂದ ಉತ್ತಮ ಪ್ರಶಂಸೆ ಪಡೆದಿದ್ದಾರೆ.
ಪ್ರಶಸ್ತಿಗಳು
'ಸಪ್ತ ಸಾಗರದಾಚೆ ಎಲ್ಲೋ – ಸೈಡ್ A' ಚಿತ್ರದ ಅಭಿನಯಕ್ಕಾಗಿ 2024ರ SIIMA Awards ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದರು
ಸಂಗೀತದ ಮೇಲೂ ಅಪಾರ ಆಸಕ್ತಿ
ಚೈತ್ರ ಜೆ ಆಚಾರ್ ಅವರಿಗೆ ಸಂಗೀತ ಮತ್ತು ಗಾಯನದ ಮೇಲೆ ವಿಶೇಷ ಆಸಕ್ತಿ ಇದೆ. ವೃತ್ತಿಪರ ಗಾಯಕಿಯಾಗಬೇಕೆಂಬ ಕನಸು ಹೊಂದಿದ್ದ ಅವರು, ಆಕಸ್ಮಿಕವಾಗಿ ನಟನಾ ಕ್ಷೇತ್ರಕ್ಕೆ ಕಾಲಿಟ್ಟರು. 2019–20ರ ಅವಧಿಯಲ್ಲಿ ಹಲವು ಕನ್ನಡ ಚಲನಚಿತ್ರಗಳಿಗೆ ಕೋರಸ್ ಗಾಯಕಿಯಾಗಿ ಧ್ವನಿ ನೀಡಿದ್ದು, ಅವರ ಪ್ರತಿಭೆಯ ಮತ್ತೊಂದು ಮುಖವಾಗಿದೆ.
ವಿಭಿನ್ನ ಲುಕ್ಗಳಲ್ಲಿ ಫೋಟೋಶೂಟ್
ಚೈತ್ರ ಜೆ ಆಚಾರ್ ಆಗಾಗ್ಗೆ ವಿಭಿನ್ನ ಥೀಮ್‌ಗಳ ಫೋಟೋಶೂಟ್‌ಗಳ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಾರೆ. ಸಾಂಪ್ರದಾಯಿಕ ಸೀರೆ ಲುಕ್‌ನಿಂದ ಹಿಡಿದು ಮಾಡರ್ನ್ ಹಾಗೂ ಫ್ಯೂಷನ್ ಔಟ್‌ಫಿಟ್‌ಗಳವರೆಗೆ ವಿವಿಧ ಶೈಲಿಗಳಲ್ಲಿ ಅವರು ಕಾಣಿಸಿಕೊಳ್ಳುತ್ತಾರೆ.