ದಕ್ಷಿಣ ಭಾರತದ ಸ್ನೋ ವೈಟ್ ಎಂದು ಶೀರ್ಷಿಕೆ ಕೊಟ್ಟು ಚೈತ್ರಾ ಜೆ ಆಚಾರ್ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಚೈತ್ರ ಅವರು ಹಲವು ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಮಾಡ್ರನ್, ಕ್ಲಾಸಿಕ್ ಎಲ್ಲ ಲುಕ್ನಲ್ಲೂ ಚೈತ್ರ ಚಂದ ಎನ್ನುತ್ತಾರೆ ಫ್ಯಾನ್ಸ್.
ಟೋಬಿ ಮೂಲಕ ಹೆಚ್ಚಿದ ಖ್ಯಾತಿ
ಬೆಂಗಳೂರಿನ ಎಂಜಿನಿಯರ್ ವಿದ್ಯಾರ್ಥಿಯಾದ ಚೈತ್ರಾ ಅವರು ಕಾಲೇಜಿನಲ್ಲಿರುವಾಗಲೇ ಕಲೆ, ನೃತ್ಯದ ಬಗ್ಗೆ ಆಸಕ್ತಿ ಹೊಂದಿದ್ದರಂತೆ. ಟೋಬಿ ಸಿನಿಮಾ ರಿಲೀಸ್ ಆದ ನಂತರ ಇವ್ರಿಗೆ ಸಾಕಷ್ಟು ಸಿನಿಮಾಗಳ ಆಫರ್ ಸಿಕ್ಕವು.
ನಟನೆಗೂ ಸೈ ..ಹಾಡಲು ಸೈ
ನಟನೆ ಮಾತ್ರವಲ್ಲದೆ ಅವರು ಗರುಡ ಗಮನ ವೃಷಭ ವಾಹನ ಸಿನಿಮಾದಲ್ಲಿ ಹಾಡಿರುವ ಸೋಜುಗಾದ ಸೂಜಿ ಮಲ್ಲಿಗೆ, ಸಪ್ತ ಸಾಗರದಾಚೆ ಎಲ್ಲೋನ ಉಸಿರೇ, ರೂಪಾಂತರ ಸಿನಿಮಾದ ಕಿತ್ತಳೆ ತೋಟದ ಕೆಲಸದ ಹುಡುಗಿಯ ಕನಸಂತೆ ಒಂದು ಕಿತ್ತಳೆ ಹಣ್ಣು, ಮಾರ್ನಾಮಿಯ ಏ ಮಾರಾಯ, ಕೊರ ಕೊರ ಹಾಗೂ ಮೈ ಲಾರ್ಡ್ ಸಿನಿಮಾಕ್ಕೂ ಹಾಡನ್ನು ಹಾಡಿದ್ದಾರೆ.
ಡಿ ಗ್ಲಾಮ್ ಪಾತ್ರವನ್ನೇ ಒಪ್ಪಿಕೊಳ್ಳೋದ್ಯಾಕೆ?
ಸಾಕಷ್ಟು ಡಿ ಗ್ಲಾಮ್ ಪಾತ್ರಗಳಲ್ಲೇ ಅಭಿನಯಿಸಿರುವ ಚೈತ್ರಾ ಅವರು 2019ರಲ್ಲಿ ಮಹಿರ ಹಾಗೂ ಗಿಲ್ಕಿ, ತಲೆದಂಡ ಸಿನಿಮಾದ ಮೂಲಕ ಗಮನ ಸೆಳೆದರು.
ಸಿನಿ ಪಯಣ
ಚೈತ್ರ ಜೆ ಆಚಾರ್ ಅವರು ಟೋಬಿ, ಬ್ಲಿಂಕ್, ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಮತ್ತು ಬಿ ಹಾಗೂ ಬ್ಲಿಂಕ್, ಮಾರ್ನಾಮಿ, 3 ಬಿಎಚ್ಕೆ, ಗಿಲ್ಕಿ, ತಲೆದಂಡ, ಗರುಡ ಗಮನ ವೃಷಭ ವಾಹನ, ಹ್ಯಾಪಿ ಬರ್ತಡೇ ಟು ಮಿ, ಆ ದೃಶ್ಯ, ಸ್ಟ್ರಾ ಬೆರ್ರಿ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಎಲ್ಎಸ್ಡಿ ಸಿನಿಮಾ
ಸುರಾಮ್ ಮೂವಿಸ್ ಲಾಂಛನದಲ್ಲಿ ಜಯರಾಮ್ ದೇವ ಸಮುದ್ರ ಅವರು ನಿರ್ಮಿಸುತ್ತಿರುವ ಎಲ್ಎಸ್ಡಿ ಲೈಲಾಸ್ ಸ್ವೀಟ್ ಡ್ರೀಮ್ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಈ ಸಿನಿಮಾವನ್ನು ಶಕ್ತಿ ಪ್ರಸಾದ್ ನಿರ್ದೇಶಿಸುತ್ತಿದ್ದು, ಈಗಾಗಲೇ ಟೈಟಲ್ ಟೀಸರ್ ರಿಲೀಸ್ ಆಗಿದೆ.
ಫೌಜಿಯಲ್ಲಿ ಚೈತ್ರಾ
ಪ್ರಭಾಸ್ ನಟಿಸಿ, ರಾಘವ ಪುಡಿ ನಿರ್ದೇಶನದ ಫೌಜಿ ಎಂಬ ಪೀರಿಯಡ್ ವಾರ್ ಸಿನಿಮಾದಲ್ಲಿ ಚೈತ್ರಾ ಜೆ ಆಚಾರ್ ಅವರು ನಟಿಸಲಿದ್ದಾರೆ. ಆ ಮೂಲಕ ಅವರು ಟಾಲಿವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ. ಇಮಾನ್ವಿ, ಮಿಥುನ್ ಚಕ್ರವರ್ತಿ, ಅನುಪಮಾ ಖೇರ್ ನಟಿಸಲಿದ್ದಾರೆ.