ರಂಗಿನ ಲುಕ್‌ನಲ್ಲಿ ರಂಗೇರಿಸಿದ ಚೈತ್ರಾ!

ಭಾನುಪ್ರಿಯ ಡಿ.ಕೆ

ರಂಗಿನ ಲುಕ್‌ನಲ್ಲಿ ರಂಗೇರಿಸಿದ ಚೈತ್ರಾ!

ಚೈತ್ರಾ ಜೆ. ಆಚಾರ್ ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿ, ಗಾಯಕಿ ಹಾಗೂ ರಂಗಭೂಮಿ ಕಲಾವಿದೆ. ತಮ್ಮ ಸಹಜ ಅಭಿನಯ, ವಿಭಿನ್ನ ಪಾತ್ರಗಳ ಆಯ್ಕೆ ಮತ್ತು ವಿಶಿಷ್ಟ ವ್ಯಕ್ತಿತ್ವದ ಮೂಲಕ ಕನ್ನಡ ಸಿನಿಪ್ರಿಯರ ಮನಸ್ಸು ಗೆದ್ದಿದ್ದಾರೆ.

ಸಿನಿ ಪಯಣ

ರಂಗಭೂಮಿಯಿಂದ ಕಲಾ ಪಯಣ ಆರಂಭಿಸಿದ ಚೈತ್ರಾ, ನಂತರ ಕನ್ನಡ ಸಿನಿಮಾಗಳಲ್ಲಿ ನಟಿಯಾಗಿ ಗುರುತಿಸಿಕೊಂಡರು. ವಿಶೇಷವಾಗಿ ತಲೆದಂಡ, ಟೋಬಿ, 'ಮಹಿರಾ', 'ಗಿಲ್ಕಿ' ಹಾಗೂ 'ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿ' ಚಿತ್ರಗಳಲ್ಲಿನ ಅಭಿನಯ ಅವರಿಗೆ ಉತ್ತಮ ಮೆಚ್ಚುಗೆ ತಂದುಕೊಟ್ಟಿತು.

ವಾರ್ನಿಂಗ್ ಕೊಟ್ಟ ನಟಿ

ಸಾಮಾಜಿಕ ಜಾಲತಾಣದಲ್ಲಿ ಮಹೇಶ್ ಹೊಸ್ಮನಿ ಎಂಬ ವ್ಯಕ್ತಿಯಿಂದ ಅಶ್ಲೀಲ ಸಂದೇಶ ಬಂದಿದ್ದಾಗಿ ಚೈತ್ರಾ ಜೆ. ಆಚಾರ್ ಆರೋಪಿಸಿದ್ದರು. ಅದರ ಸ್ಕ್ರೀನ್‌ಶಾಟ್‌ ಹಂಚಿಕೊಂಡು, ಆತ ಪೊಲೀಸ್ ಇಲಾಖೆಗೆ ಸಂಬಂಧಿಸಿದವರೇ ಎಂದು ಪ್ರಶ್ನಿಸಿ, ಬೆಂಗಳೂರು ನಗರ ಪೊಲೀಸರನ್ನು ಟ್ಯಾಗ್ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.

ಫೌಜಿ' ಮೈಲಿಗಲ್ಲು

'ಫೌಜಿ' ಚಿತ್ರದಲ್ಲಿ ನಟಿಸುತ್ತಿರುವುದು ದೊಡ್ಡ ಅವಕಾಶ ಎಂದು ಚೈತ್ರಾ ಜೆ. ಆಚಾರ್ ಹೇಳಿದ್ದಾರೆ. ಪ್ರಭಾಸ್ ಜೊತೆ ಕೆಲಸ ಮಾಡುವುದು ಕಲಿಕೆಯ ಅನುಭವವಾಗಿದ್ದು, ಬೃಹತ್ ನಿರ್ಮಾಣದ ಕಾರ್ಯವೈಖರಿ ತಿಳಿಯಲು ಉತ್ಸುಕರಾಗಿದ್ದೇನೆ. ಚಿತ್ರದ ಪ್ರಪಂಚ ಮತ್ತು ತಮ್ಮ ಪಾತ್ರದ ಮಹತ್ವವೇ ನನ್ನನ್ನು ಹೆಚ್ಚು ಸೆಳೆಯುತ್ತಿದೆ ಎಂದು ಹೇಳಿದ್ದಾರೆ.

ವೈಯಕ್ತಿಕ ಅಭಿರುಚಿ

ಓದು, ಸಂಗೀತ, ಪ್ರವಾಸ ಮತ್ತು ಫೋಟೋಗ್ರಫಿಯಲ್ಲಿ ಚೈತ್ರಾ ಆಸಕ್ತಿ ಹೊಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಿನಿಮಾ, ಫೋಟೋಶೂಟ್ ಹಾಗೂ ದೈನಂದಿನ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ.