'ಕಣ್ಣಂಚಿನಾ ಈ ಮಾತಲಿ ಏನೇನೋ ತುಂಬಿದೆ' ಎಂದ ಚೈತ್ರಾ

ಮಮತಾ

'ಕಣ್ಣಂಚಿನಾ ಈ ಮಾತಲಿ ಏನೇನೋ ತುಂಬಿದೆ' ಎಂದ ಚೈತ್ರಾ

ಕವಿ ಕಾಣದ ಶೃಂಗಾರದಾ ರಸ ಕಾವ್ಯ ಇಲ್ಲಿದೇ… ಕಣ್ಣಂಚಿನ ಈ ಮಾತಲಿ ಏನೇನೋ ತುಂಬಿದೇ ಎಂದು ಇನ್​ಸ್ಟಾಗ್ರಾಮ್​ನಲ್ಲಿ ಚೈತ್ರಾ ಜೆ ಆಚಾರ್​ ಸೀರೆಯುಟ್ಟಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸೀರೆಯಲ್ಲಿ ಚೈತ್ರಾ ಲುಕ್

ಬೋಲ್ಡ್​​ ಲುಕ್​ನಲ್ಲೇ ಹೆಚ್ಚು ಫೋಟೋ ಶೂಟ್ ಮಾಡಿಸಿಕೊಳ್ಳುವ ನಟಿ ಚೈತ್ರಾ ಅವರು ಇಂದು ಬಿಳಿ ಮುಶ್ರಿತ ಸೀರೆಗೆ ಕೆಂಪು ಬಣ್ಣದ ಸ್ಲೀವ್​ ಲೆಸ್​​ ಬ್ಲೌಸ್​​ ಹಾಕಿದ್ದಾರೆ. ಹೆಣೆದ ಜಡೆ, ಬಾಯ್ತುಂಬಾ ನಗು, ಜುಮುಕಿ ಹಾಕಿ ಹಳೆಯ ಕಾಲದ ಸಂಪ್ರದಾಯಸ್ಥ ಹೆಣ್ಮಗಳಂತೆ ಮಿಂಚಿದ್ದಾರೆ.

ಹಾಡು ಹಾಡಲೂ ಸೈ

ಬೆಂಗಳೂರಿನವರಾದ ಚೈತ್ರಾ ಅವರು ಮಹಿರಾ ಎನ್ನುವ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟರು. ಚೈತ್ರಾ ಹಾಡುಗಾರ್ತಿಯೂ ಹೌದು. ಈಗಾಗಲೇ ಕಿತ್ತಳೆ ತೋಟದ ಹುಡುಗಿ, ಸೋಜುಗಾದ ಸೂಜು ಮಲ್ಲಿಗೆ, ಶಾಖಹಾರಿ ಸಿನಿಮಾಕ್ಕೆ ಹಾಡನ್ನು ಹಾಡಿದ್ದಾರೆ.

ಚೈತ್ರಾ ನಟಿಸಿದ ಸಿನಿಮಾವಿದು

ಟೋಬಿ, ಸಪ್ತಸಾಗರದಾಚೆ ಎಲ್ಲೋ ಸೈಡ್​ ಎಮತ್ತು ಬಿ, ತಲೆದಂಡ, ಮಹಿರಾ, ವೃತ್ತ, ಹ್ಯಾಪಿ ಬರ್ತಡೇ, ಬ್ಲಿಂಕ್​ ಸಿನಿಮಾದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಅವರ ಮಾರ್ನಮಿ ಸಿನಿಮಾ ರಿಲೀಸ್​ ಆಗಿತ್ತು. ತಮಿಳುನಾಡು ಕರಾವಳಿ ಕ್ಷೇತ್ರದ ಕತೆಯನ್ನು ಹಾಗೂ ಮಹಿಳಾ ಪ್ರಧಾನ ಸಿನಿಮಾ ಇದಾಗಿದೆ.

ತಮಿಳು-ತೆಲುಗು ಸಿನಿಮಾದಲ್ಲಿ ಚೈತ್ರಾ

3 ಬಿಎಚ್​ಕೆ, ಮೈ ಲಾರ್ಡ್​ ಸಿನಿಮಾದಲ್ಲಿ ನಟಿಸಿದ್ದಾರೆ. ಚೈತ್ರಾ ಅವರು ಡಿ ಗ್ಲಾಮ್​ ಆಗಿಯೇ ಹೆಚ್ಚಾಗಿ ನಟಿಸಿರುವುದು. ಇಷ್ಟಾಗಿಯೂ ಅವರಿಗಿರುವ ಬೇಡಿಕೆ ಮಾತ್ರ ಎಲ್ಲಿಯೂ ಕಡಿಮೆಯಾಗಿಲ್ಲ.

ಲೈಲಾಸ್​ ಸ್ವೀಟ್​ ಡ್ರೀಮ್​ ಹೊಸ ಸಿನಿಮಾ

ಯುವ ನಿರ್ದೇಶಕ ಶಕ್ತಿ ಪ್ರಸಾದ್ ನಿರ್ದೇಶನದ ಲೈಲಾಸ್​ ಸ್ವೀಟ್ ಡ್ರೀಮ್ ಸಿನಿಮಾದಲ್ಲಿ ಚೈತ್ರಾ ನಟಿಸುತ್ತಿದ್ದಾರೆ. ಇದರಲ್ಲಿ ಲೈಲಾ ಪಾತ್ರದಲ್ಲಿ ಚೈತ್ರಾ ನಟಿಸಲಿದ್ದು, ನಿರ್ದೇಶಕ ನಾಯಕ ನಟನಾಗಿ ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ. ಗಾಯಕಿ ಎಂಡಿ ಪಲ್ಲವಿ ಸಹ ಈ ಸಿನಿಮಾದಲ್ಲಿದ್ದಾರೆ.

ಡಾರ್ಲಿಂಗ್​ ಪ್ರಭಾಸ್ ಜೊತೆ ಚೈತ್ರಾ

ಫೌಜಿ ಸಿನಿಮಾದಲ್ಲಿ ಕನ್ನಡದ ನಟಿ ಚೈತ್ರಾ ಆಚಾರ್​ ನಟಿಸುತ್ತಿದ್ದಾರೆ. ಅವರ ಜೊತೆ ಸ್ಕ್ರೀನ್​ ಶೇರ್​ ಮಾಡೋದು ಅಂದ್ರೆನೇ ಒಂದು ಡ್ರೀಮ್​ ಇದ್ದಂತೆ ಎಂದು ಅವರು ಹೇಳಿದ್ದರು.