'ಮೈ ಲಾರ್ಡ್​' ಚೈತ್ರಾ ಜೆ ಆಚಾರ್​​!

ಮಮತಾ

'ಮೈ ಲಾರ್ಡ್​' ಚೈತ್ರಾ ಜೆ ಆಚಾರ್​​!

ಸದಾ ಬೋಲ್ಡ್​ ಫೋಟೋಶೂಟ್​ಗೆ ಹೆಸರಾಗುವ ಚೈತ್ರಾ ಆಚಾರ್​ ಅವರು, 'ಹುಡುಗಿ' ಎಂದು ತಮಿಳಿನ ಪದದಲ್ಲಿ ಶೀರ್ಷಿಕೆ ಕೊಟ್ಟು ಇನ್​​ಸ್ಟಾಗ್ರಾಮ್​ನಲ್ಲಿ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ನಟಿ ಶ್ರುತಿ ಪುತ್ರಿ ಗೌರಿಯವರು ಕಾಮೆಂಟ್​ ಮಾಡಿದ್ದಾರೆ. ಚೈತ್ರಾ ಜೆ ಆಚಾರ್​ ಅವರು ಕ್ಲಾಸಿಕ್, ಮಾಡ್ರನ್ ಕೆಲವೊಮ್ಮೆ ಹಾಟ್​ ಲುಕ್​ನಲ್ಲಿ ಮಿಂಚುತ್ತಾರೆ.

ಹಾಟ್​​ ಲುಕ್​ನಲ್ಲಿ ಟೋಬಿ ಹುಡುಗಿ

ಕಪ್ಪು ಬಣ್ಣದ ರೇಷ್ಮೆ ಜರಿಯಂತೆ ಕಾಣುವ ಪ್ರಿಂಟೆಡ್​ ಸೀರೆ, ಅದಕ್ಕೊಪ್ಪುವ ಬಿಂದಿ. ರಬ್ಬರ್​ ತೊಡದೆ ಹಾರಲು ಬಿಟ್ಟ ಜಡೆ, ಮೇಕಪ್​ ಇಲ್ಲದೆ ಕಂಗೊಳಿಸುವ ಮೊಗ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

ಅಸಭ್ಯ ಸಂದೇಶದ ವಿರುದ್ಧ ಸಮರ

ಇತ್ತೀಚೆಗೆ ಚೈತ್ರಾ ಅವರಿಗೆ ಪೊಲೀಸ್​ ಕಾನ್​ಸ್ಟೇಬಲ್​ ಒಬ್ಬರು ಅಶ್ಲೀಲ ಸಂದೇಶ ಕಳುಹಿಸಿದ ಬಗ್ಗೆ ಉಲ್ಲೇಖಿಸಿ ಕಿಡಿಕಾರಿದ್ದರು. ಅಸಭ್ಯ ಸಂದೇಶದ ಸ್ಕ್ರೀನ್​ಶಾಟ್​ ತೆಗೆದುಕೊಂಡು ಬೆಂಗಳೂರು ಪೊಲೀಸರಿಗೆ ಟ್ಯಾಗ್​ ಮಾಡಿದ್ದರು.

ಕಾನ್​ಸ್ಟೇಬಲ್​ ವಿರುದ್ಧ ಕಿಡಿ

'ಈ ವ್ಯಕ್ತಿ ನಿಮ್ಮ ಡಿಪಾರ್ಟ್​ಮೆಂಟ್​ನಲ್ಲಿ ಕೆಲಸ ಮಾಡುವಾತನಿರಬೇಕು. ಪೊಲೀಸ್​​ ಕೆಲಸ ಮಾಡದೆ ನೈತಿಕ ಪೊಲೀಸ್​ಗಿರಿ ಮಾಡ್ತಿದ್ದಾನೆ. ದಯವಿಟ್ಟು ಕ್ರಮ ಕೈಗೊಳ್ಳಿ. ಅವನು ಮಾಡಿದ ಈ ಕಾಮೆಂಟ್​ಗೆ ನೀವು ಉತ್ತರಿಸಬಹುದೇ' ಎಂದು ಹೇಳಿದ್ದರು

ಕ್ಷಮೆ ಕೇಳಿದ ಪೊಲೀಸ್

'ಸ್ವಾರಿ ಮೇಡಂ ನಿಮ್ಮ ಮೇಲಿನ ಕನ್ಸರ್ನ್​ನಿಂದ ಹೀಗೆ ಮಾತನಾಡಿದ್ದೆ. ಅದರಲ್ಲಿರುವ ಭಾಷೆ ತಪ್ಪಾಗಿರಬಹುದು. ಆದರೆ ನಿಮ್ಮ ಮೇಲೆ ಕಾಳಜಿ ನನಗಿದೆ. ಇನ್​ಸ್ಟಾಗ್ರಾಮ್​ ಸ್ಟೋರಿ ತೆಗೆಯಿರಿ ಇದರಿಂದ ನನ್ನ ಕೆರಿಯರ್​ಗೆ ಸಮಸ್ಯೆಯಾಗುತ್ತದೆ ಎಂದು ಬೇಡಿಕೊಂಡಿದ್ದ' ಬಗ್ಗೆ ಚೈತ್ರಾ ಹೇಳಿದ್ದರು.

ನನ್ನ ಇಷ್ಟ ನನ್ನ ಬಟ್ಟೆ

ಟ್ರೋಲ್​ ಮಾಡೋರಿಗೆ ನಾನು ಜಾಸ್ತಿ ತಲೆ ಕೆಡಿಸಿಕೊಳ್ಳೋಕೆ ಹೋಗೋದಿಲ್ಲ. ನನ್ನ ಬಟ್ಟೆ ನನ್ನ ಇಷ್ಟ ಎಂದು ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು.

ಚೈತ್ರಾ ನಟಿಸಿದ ಸಿನಿಮಾಗಳಿವು

ಟೋಬಿ, ಸಪ್ತಸಾಗರದಾಚೆ ಎಲ್ಲೋ ಸೈಡ್​ಎ ಮತ್ತು ಬಿ, ಬ್ಲಿಂಕ್​, ಮಹಿರ, ವೃತ್ತ, ಮೈಲಾರ್ಡ್​​, 3 ಬಿಎಚ್​ಕೆ, ತಲೆದಂಡ, ಹ್ಯಾಪಿ ಬರ್ತಡೇ ಟು ಮಿ ಸಿನಿಮಾದಲ್ಲಿ ನಟಿಸಿದ್ದಾರೆ.

ಪ್ರಭಾಸ್​ ಜೊತೆ ಮುಂದಿನ ಸಿನಿಮಾ

ಹನು ರಾಘವಪುಡಿ ನಿರ್ದೇಶಿಸಿದ ಫೌಜಿ ಸಿನಿಮಾದಲ್ಲಿ ಚೈತ್ರ ಜೆ ಆಚಾರ್​ ನಟಿಸಲಿದ್ದಾರೆ. ಟಾಲಿವುಡ್​ನ ಖ್ಯಾತಿಯ ನಟ ಪ್ರಭಾಸ್​ ಮುಖ್ಯಭೂಮಿಕೆಯಲ್ಲಿರಲಿದ್ದಾರೆ. ಈ ಚಿತ್ರದಲ್ಲಿ ಇಮಾನ್ವಿ, ಮಿಥುನ್​ ಚಕ್ರವರ್ತಿ, ಜಯಪ್ರದಾ, ಅನುಪಮಾ ಖೇರ್​ ಬಣ್ಣ ಹಚ್ಚಲಿದ್ದಾರೆ. ಇದು ನನ್ನ ಜೀವನದ ಪ್ರಮುಖ ಘಟ್ಟ ಎಂದಿದ್ದಾರೆ ಚೈತ್ರಾ.