ಏಲಕ್ಕಿ ಆರೋಗ್ಯಕ್ಕೆ ಒಳ್ಳೆಯದೇ, ಆದ್ರೆ ಈ ಜನರು ತಿನ್ನಲೇಬಾರದು!

ಭಾನುಪ್ರಿಯ ಡಿ.ಕೆ

ಏಲಕ್ಕಿ ಆರೋಗ್ಯಕ್ಕೆ ಒಳ್ಳೆಯದೇ, ಆದ್ರೆ ಈ ಜನರು ತಿನ್ನಲೇಬಾರದು!

ಏಲಕ್ಕಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದರೂ ಮತ್ತು ನೈಸರ್ಗಿಕ ಸುಗಂಧ ದ್ರವ್ಯವಾಗಿದ್ದರೂ, ಕೆಲವು ಆರೋಗ್ಯ ಸಮಸ್ಯೆ ಇರುವವರು ಇದನ್ನು ಅತಿಯಾಗಿ ತಿನ್ನಬಾರದು ಅಥವಾ ಪೂರ್ತಿಯಾಗಿ ತಪ್ಪಿಸುವುದು ಒಳ್ಳೆಯದು.

ಪಿತ್ತಕೋಶದಲ್ಲಿ ಕಲ್ಲು ಇರುವವರು

ಪಿತ್ತಕೋಶದಲ್ಲಿ ಕಲ್ಲು ಇರುವವರು ಏಲಕ್ಕಿಯನ್ನು ಅತಿಯಾಗಿ ಸೇವಿಸಬಾರದು. ಏಲಕ್ಕಿಯ ಅಂಶಗಳು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಪ್ರಚೋದಿಸಿ ಪಿತ್ತಕೋಶದಲ್ಲಿ ತೀವ್ರ ನೋವನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ.

ಅಲರ್ಜಿ ಸಮಸ್ಯೆ ಇರುವವರು

ಕೆಲವರಿಗೆ ಏಲಕ್ಕಿ ತಿಂದಾಗ ಅಥವಾ ಅದರ ಪರಿಮಳಕ್ಕೆ ಅಲರ್ಜಿ ಉಂಟಾಗಬಹುದು. ಚರ್ಮದ ಮೇಲೆ ಕೆಂಪು ಕಡಿತ, ಚರ್ಮದ ದದ್ದುಗಳು ಅಥವಾ ಉಸಿರಾಟದ ತೊಂದರೆ ಕಾಣಿಸಿಕೊಂಡರೆ ತಕ್ಷಣ ಏಲಕ್ಕಿ ಸೇವನೆ ನಿಲ್ಲಿಸಬೇಕು.

ಆಸಿಡಿಟಿ ಮತ್ತು ಅಲ್ಸರ್ ಇರುವವರು

ಏಲಕ್ಕಿ ಕರುಳಿನಲ್ಲಿ ಉಷ್ಣತೆಯನ್ನು ಹೆಚ್ಚಿಸಬಹುದು. ಈಗಾಗಲೇ ತೀವ್ರ ಆಸಿಡಿಟಿ, ಹೊಟ್ಟೆ ಉರಿ ಅಥವಾ ಹೊಟ್ಟೆಯ ಅಲ್ಸರ್ ನಿಂದ ಬಳಲುತ್ತಿರುವವರು ಇದನ್ನು ಸೇವಿಸಿದರೆ ಕಿರಿಕಿರಿ ಮತ್ತು ನೋವು ಇನ್ನಷ್ಟು ಹೆಚ್ಚಾಗಬಹುದು.

ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು

ಆಹಾರದಲ್ಲಿ ಅಲ್ಪ ಪ್ರಮಾಣದ ಏಲಕ್ಕಿ ಬಳಸುವುದು ಸುರಕ್ಷಿತ. ಆದರೆ ಕಷಾಯ ಅಥವಾ ಔಷಧಿಯ ರೂಪದಲ್ಲಿ ಅತಿಯಾಗಿ ಸೇವಿಸುವುದರಿಂದ ಗರ್ಭಪಾತದ ಅಪಾಯ ಅಥವಾ ಮಗುವಿನ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ನಿರ್ದಿಷ್ಟ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರುವವರು

ಖಿನ್ನತೆ ನಿವಾರಕ ಮಾತ್ರೆಗಳು, ರಕ್ತ ತೆಳುಗೊಳಿಸುವ ಮಾತ್ರೆಗಳು ಅಥವಾ ಆಸ್ಪರಿನ್ ಸೇವಿಸುತ್ತಿರುವವರು ಏಲಕ್ಕಿಯನ್ನು ಔಷಧೀಯ ಪ್ರಮಾಣದಲ್ಲಿ ತೆಗೆದುಕೊಳ್ಳಬಾರದು. ಇದು ಮಾತ್ರೆಗಳ ಕಾರ್ಯನಿರ್ವಹಣೆಗೆ ಅಡ್ಡಿಪಡಿಸಬಹುದು.