ಬಿಗ್ಬಾಸ್ ಶೋ (BBK 12) ಬಗ್ಗೆ ವಿಶೇಷವಾಗಿ ಹಾಗೂ ಹೆಚ್ಚೇನು ಹೇಳಬೇಕಿಲ್ಲ. ಇದು ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ. ವಿವಾದಗಳಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡುವ ಈ ಕಾರ್ಯಕ್ರಮ, ವೀಕ್ಷಕರಿಂದ ಭಾರಿ ಜನಪ್ರಿಯತೆ ಗಿಟ್ಟಿಸಿಕೊಂಡಿದೆ.
ಯಾರು ಈ ಬಾಲಕ?
ಪ್ರಸ್ತುತ ನಡೆಯುತ್ತಿರುವ 12ನೇ ಸೀಸನ್ ಇದೀಗ ಅಂತಿಮ ಘಟ್ಟಕ್ಕೆ ತಲುಪಿದ್ದು, ಗಿಲ್ಲಿ ನಟ, ಅಶ್ವಿನಿ, ರಘು ಸೇರಿ ಒಟ್ಟು ಆರು ಮಂದಿ ಫಿನಾಲೆ ರೇಸ್ನಲ್ಲಿದ್ದಾರೆ.
ಯಾರಿಗೆ ಗೆಲುವಿನ ಕಿರೀಟ
ಇವರ ಪೈಕಿ ಯಾರ ಮುಡಿಗೆ ಗೆಲುವಿನ ಕಿರೀಟ ಸೇರಲಿದೆ ಎಂಬುದು ಭಾನುವಾರದ (ಜ.18) ಗ್ರ್ಯಾಂಡ್ ಫಿನಾಲೆ ಸಂಚಿಕೆಯ ಕೊನೆಯಲ್ಲಿ ಸ್ಪಷ್ಟವಾಗಿ ತಿಳಿಯಲಿದೆ.
ರಘು ಅವರ ಕ್ಯೂಟೆಸ್ಟ್ ಫೋಟೋ
ಸೀಸನ್ 12ರ ಮಧ್ಯದಲ್ಲಿ ಮನೆಯೊಳಗೆ ಪ್ರವೇಶಿಸಿದ ಕಟ್ಟುಮಸ್ತಾದ ದೇಹ ಹೊಂದಿರುವ ರಘು, ರಿಷಾ ಮತ್ತು ಸೂರಜ್ ಜತೆ ವೈರ್ಲ್ ಕಾರ್ಡ್ ಸ್ಪರ್ಧಿಯಾಗಿ ಖಡಕ್ ಎಂಟ್ರಿಕೊಟ್ಟರು.
ಬಾಲ್ಯದ ಫೋಟೋ ವೈರಲ್
ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಲ್ಲೇ, ಮ್ಯೂಟೆಂಟ್ ರಘು ಅವರ ಶಾಲಾ ಸಮಯದ ಫೋಟೋವೊಂದು ವೈರಲ್ ಆಗಿದೆ
ಗುಂಡು ಮುಖದ ರಘು....
ಬೆಂಗಳೂರಿನ ಇಂಡಿಯನ್ ಹೈಸ್ಕೂಲ್ನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಕ್ಲಿಕ್ಕಿಸಲಾದ ರಘು ಅವರ ಮುದ್ದಾದ ಫೋಟೋವಿದು ಎಂದು ಹೇಳಲಾಗಿದೆ.
ಸ್ಪೋರ್ಟ್ಸ್ ಡೇಗೆ ಅತಿಥಿ
ಅದೇ ಶಾಲೆಯ ಕ್ರೀಡಾ ದಿನದಂದು ಅತಿಥಿಯಾಗಿ ಭೇಟಿ ನೀಡಿರುವ ರಘು, ಮಕ್ಕಳಿಗೆ ಬಹುಮಾನ ವಿತರಿಸಿರುವ ಫೋಟೋಗಳು ಸಹ ಲಭಿಸಿವೆ.
ಫಿನಾಲೆಗೆ ರಘು ಫ್ಯಾನ್ಸ್ ಶುಭಾಶಯ
ಕೇವಲ ಬಿಗ್ ಬಾಸ್ನಲ್ಲಿ ಮಾತ್ರ ಕಾಣಲು ಸಿಕ್ಕಿದ್ದ ರಘು ಅವರ ಬಾಲ್ಯದ ಫೋಟೋಗಳು ಕಂಡು ಅವರ ಫ್ಯಾನ್ಸ್ಗಳು ಖುಷಿಯಾಗಿದ್ದಾರೆ