ಅಂಜಲಿ ಅಂದ ಹೆಚ್ಚಿಸಿದ ಸೀರೆ!

ರಮೇಶ್​ ಕುಮಾರ್​​ ಬಿ ಎಡಮೋಳೆ

ಅಂಜಲಿ ಅಂದ ಹೆಚ್ಚಿಸಿದ ಸೀರೆ!

ನಟಿ ಅಂಜಲಿ ಬಗ್ಗೆ ಕನ್ನಡಿಗರಿಗೆ ವಿಶೇಷವಾಗಿ ಹೇಳಬೇಕಿಲ್ಲ. ರಣವಿಕ್ರಮ ಚಿತ್ರದಲ್ಲಿ ದಿವಂಗತ ನಟ ಪುನೀತ್​ ರಾಜ್​ಕುಮಾರ್ ಜತೆ ನಟಿಸಿ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. ಇದೀಗ ಅವರ ಹೊಸ ಫೋಟೋಗಳು ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

ಚಿತ್ರರಂಗಕ್ಕೆ ಪಾದಾರ್ಪಣೆ

ಅಂಜಲಿ ಅವರು 2006 ರಲ್ಲಿ ತೆರೆಕಂಡ 'ಫೋಟೋ' ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. ಆದರೆ, ಅವರಿಗೆ ದೊಡ್ಡ ಬ್ರೇಕ್ ಮತ್ತು ಜನಪ್ರಿಯತೆ ತಂದುಕೊಟ್ಟಿದ್ದು 2007 ರ 'ಕಟ್ರದು ತಮಿಳ್' ಚಿತ್ರ.

ದಕ್ಷಿಣ ಭಾರತದ ಸ್ಟಾರ್ ನಟಿ

ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಇವರು, ಉದ್ಯಮದ ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಇಲ್ಲಿಯವರೆಗೆ 50 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.

ಪೋಷಕ ಪಾತ್ರಗಳಲ್ಲೂ ಸೈ

ಕೇವಲ ನಾಯಕಿಯಾಗಿ ಮಾತ್ರವಲ್ಲದೆ, ಕಥೆಗೆ ಪ್ರಾಮುಖ್ಯತೆ ಇರುವ ಬಲಿಷ್ಠ ಪೋಷಕ ಪಾತ್ರಗಳಲ್ಲೂ ಅಂಜಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ರಾಮ್ ಚರಣ್ ನಟನೆಯ ಬಿಗ್ ಬಜೆಟ್ ಸಿನಿಮಾ 'ಗೇಮ್ ಚೇಂಜರ್' ಚಿತ್ರದಲ್ಲೂ ಇವರ ನಟನೆಗೆ ಉತ್ತಮ ಮಾರ್ಕ್ಸ್ ಸಿಕ್ಕಿದೆ.

ಸ್ಪೆಷಲ್ ಸಾಂಗ್ಸ್

ಪ್ರಮುಖ ಪಾತ್ರಗಳಷ್ಟೇ ಅಲ್ಲದೆ, ಸ್ಟಾರ್ ಹೀರೊಗಳ ಸಿನಿಮಾಗಳಲ್ಲಿ ಐಟಂ ಡಾನ್ಸ್​ ಮೂಲಕವೂ ಇವರು ಅಭಿಮಾನಿಗಳನ್ನು ರಂಜಿಸಿದ್ದಾರೆ. ಸದ್ಯ ಇವರ ಕೈಯಲ್ಲಿ ಎರಡು ಪ್ರಮುಖ ಸಿನಿಮಾಗಳಿವೆ.

ಸೀರೆಯಲ್ಲಿ ಮಿಂಚಿದ ಅಂಜಲಿ

ಜಾಲತಾಣಗಳಲ್ಲಿ ಸದಾ ಆ್ಯಕ್ಟಿವ್ ಆಗಿರುವ ಅಂಜಲಿ, ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿರುವ ಗುಲಾಬಿ ಬಣ್ಣದ ಸೀರೆಯ ಸುಂದರ ಫೋಟೋಗಳು ಸದ್ಯ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.

ಫ್ಯಾನ್ಸ್​ ಫಿದಾ

ಅಂಜಲಿ ಅವರು ಸೀರೆಯಲ್ಲೂ ಮಾದಕ ಪೋಸ್​ಗಳನ್ನು ನೀಡಿದ್ದು, ಅವರ ಮೈಮಾಟವನ್ನು ನೋಡಿ ಫಿದಾ ಆಗಿರುವ ಅಭಿಮಾನಿಗಳು ತರಹೇವಾರಿ ಕಾಮೆಂಟ್​ಗಳ ಮೂಲಕ ಅಂಜಲಿ ಅಂದವನ್ನು ಹೊಗಳುತ್ತಿದ್ದಾರೆ.