ಐಪಿಎಲ್​ನಲ್ಲಿ ಮಿಂಚಿದ ಅಣ್ಣ-ತಮ್ಮಂದಿರು

ವಿನಾಯಕ ನಾಯಕ

ಐಪಿಎಲ್​ನಲ್ಲಿ ಮಿಂಚಿದ ಅಣ್ಣ-ತಮ್ಮಂದಿರು

ಐಪಿಎಲ್ ಇತಿಹಾಸದಲ್ಲಿ ಸಹೋದರರ ಸವಾರಿಯೇ ವಿಭಿನ್ನ. ಪಾಂಡ್ಯ ಬ್ರದರ್ಸ್‌ನಿಂದ ಹಿಡಿದು ಪಠಾಣ್ ಸಹೋದರರವರೆಗೆ, ಅನೇಕ ಜೋಡಿಗಳು ಕ್ರಿಕೆಟ್ ಅಂಗಳದಲ್ಲಿ ಧೂಳೆಬ್ಬಿಸಿದ್ದಾರೆ. ಕೆಲವರು ಒಂದೇ ತಂಡದಲ್ಲಿ ಆಡಿ ಮಿಂಚಿದರೆ, ಇನ್ನು ಕೆಲವರು ಎದುರಾಳಿಗಳಾಗಿ ಕಣಕ್ಕಿಳಿದು ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದ್ದಾರೆ. ಐಪಿಎಲ್ ಹಬ್ಬಕ್ಕೆ ಮೆರುಗು ತಂದ ಅಂತಹ ಪ್ರಮುಖ ಸಹೋದರರ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.

ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ

ಐಪಿಎಲ್‌ನ ಅತ್ಯಂತ ಯಶಸ್ವಿ ಸಹೋದರರ ಜೋಡಿ ಎಂದರೆ ಇವರೇ. ಇಬ್ಬರೂ ಸುದೀರ್ಘ ಕಾಲ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಒಟ್ಟಿಗೆ ಆಡಿದ್ದಾರೆ. ಸದ್ಯ ಹಾರ್ದಿಕ್ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದರೆ, ಕೃನಾಲ್ ರಾಯಲ್​ ಚಾಂಲೆಜರ್ಸ್​ ಬೆಂಗಳೂರು ಪರ ಆಡುತ್ತಿದ್ದಾರೆ.

ಇರ್ಫಾನ್ ಪಠಾಣ್ ಮತ್ತು ಯೂಸುಫ್ ಪಠಾಣ್

ಭಾರತೀಯ ಕ್ರಿಕೆಟ್‌ನ ದಿಗ್ಗಜ ಸಹೋದರರು. ಯೂಸುಫ್ ಪಠಾಣ್ ರಾಜಸ್ಥಾನ್ ರಾಯಲ್ಸ್ ಮತ್ತು ಕೆಕೆಆರ್ ಪರ ಮಿಂಚಿದರೆ, ಇರ್ಫಾನ್ ಪಠಾಣ್ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಡೆಲ್ಲಿ ಡೇರ್‌ಡೆವಿಲ್ಸ್ ಸೇರಿದಂತೆ ಹಲವು ತಂಡಗಳ ಪರ ಆಡಿದ್ದಾರೆ.

ಸ್ಯಾಮ್ ಕರನ್ ಮತ್ತು ಟಾಮ್ ಕರನ್

ಇಂಗ್ಲೆಂಡ್‌ನ ಈ ಸಹೋದರರು ಐಪಿಎಲ್‌ನಲ್ಲಿ ಎದುರಾಳಿಗಳಾಗಿ ಕಣಕ್ಕಿಳಿದಿದ್ದಾರೆ. ಸ್ಯಾಮ್ ಕರನ್ ಪಂಜಾಬ್ ಕಿಂಗ್ಸ್ ಮತ್ತು ಸಿಎಸ್‌ಕೆ ಪರ ಆಡಿದ್ದರೆ, ಟಾಮ್ ಕರನ್ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದಾರೆ.

ದೀಪಕ್ ಚಹರ್ ಮತ್ತು ರಾಹುಲ್ ಚಹರ್

ದೀಪಕ್ ಚಹರ್ ಚೆನ್ನೈ ಸೂಪರ್ ಕಿಂಗ್ಸ್‌ನ ಸ್ಟಾರ್ ವೇಗಿಯಾಗಿದ್ದರೆ, ಅವರ ಸಹೋದರ ರಾಹುಲ್ ಚಹರ್ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ಪರ ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದಾರೆ.

ಅಲ್ಬಿ ಮೊರ್ಕೆಲ್ ಮತ್ತು ಮೋರ್ನೆ ಮೊರ್ಕೆಲ್

ದಕ್ಷಿಣ ಆಫ್ರಿಕಾದ ಈ ಜೋಡಿ ಐಪಿಎಲ್ ಆರಂಭಿಕ ವರ್ಷಗಳಲ್ಲಿ ಭಾರಿ ಸದ್ದು ಮಾಡಿತ್ತು. ಅಲ್ಬಿ ಸಿಎಸ್‌ಕೆ ತಂಡದ ಆಲ್ ರೌಂಡರ್ ಆಗಿದ್ದರೆ, ಮೋರ್ನೆ ಡೆಲ್ಲಿ ಮತ್ತು ಕೆಕೆಆರ್ ಪರ ವೇಗಿಯಾಗಿದ್ದರು.