ಬಿಸಿಲ ಬೇಗೆಗೆ ಬ್ರೇಕ್: ಬೇಸಿಗೆಯಲ್ಲಿ ಮರೆತೂ ಈ ಆಹಾರಗಳನ್ನು ಸೇವಿಸಬೇಡಿ!

ಭಾನುಪ್ರಿಯ ಡಿ.ಕೆ

ಬಿಸಿಲ ಬೇಗೆಗೆ ಬ್ರೇಕ್: ಬೇಸಿಗೆಯಲ್ಲಿ ಮರೆತೂ ಈ ಆಹಾರಗಳನ್ನು ಸೇವಿಸಬೇಡಿ!

ಮಾರ್ಚ್ ತಿಂಗಳು ಆರಂಭವಾಗುತ್ತಿದ್ದಂತೆಯೇ ಬಿಸಿಲಿನ ಬೇಗೆ ಹೆಚ್ಚಾಗುತ್ತಿದೆ. ಈ ಬೇಸಿಗೆಯಲ್ಲಿ ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಮಸಾಲೆಯುಕ್ತ ಆಹಾರಗಳು

ಮೆಣಸಿನಕಾಯಿ, ಗರಮ್ ಮಸಾಲಾ, ಚಿಲಿ, ಜೀರಿಗೆ-ಧನಿಯಾ ಹೆಚ್ಚು ಹಾಕಿದ ಊಟವನ್ನು ಹೆಚ್ಚಾಗಿ ಸೇವಿಸುವುದರಿಂದ ದೇಹದ ಉಷ್ಣತೆ ಹೆಚ್ಚಿಸಿ, ಅಸಿಡಿಟಿ, ಬಾಯಾರಿಕೆ, ಎದೆಯುರಿ ಉಂಟುಮಾಡುತ್ತವೆ.

ಡೀಪ್ ಫ್ರೈ ಆಹಾರಗಳು

ಪಕೋಡಾ, ಸಮೋಸಾ, ಪೂರಿ, ಚಿಪ್ಸ್, ಫ್ರೈಡ್ ಆಹಾರಗಳನ್ನು ಸೇವಿಸುವುದರಿಂದ ಜೀರ್ಣಕ್ಕೆ ಭಾರವಾಗಿ, ದೇಹ ಬಿಸಿ ಮಾಡಿ, ನಿರ್ಜಲೀಕರಣ ಹೆಚ್ಚಿಸುತ್ತದೆ. ಜೊತೆಗೆ ಅಸ್ವಸ್ಥತೆಯನ್ನು ತರುತ್ತದೆ.

ಕೆಂಪು ಮಾಂಸ

ಮಟನ್, ಬೀಫ್, ಹೆಚ್ಚು ಮಸಾಲೆಯ ಕೋಳಿ ಅಥವಾ ಮೀನುಗಳನ್ನು ಸೇವಿಸುವುದರಿಂದ ಇದು ಜೀರ್ಣ ಶಕ್ತಿಗೆ ತೊಂದರೆ ಮಾಡುತ್ತದೆ. ಜೊತೆಗೆ ದೇಹದ ಉಷ್ಣತೆ ಹೆಚ್ಚಿಸಿ, ಸುಸ್ತು ಮತ್ತು ಬೆವರು ಹೆಚ್ಚಿಸುತ್ತದೆ.

ಹೆಚ್ಚು ಉಪ್ಪು ಆಹಾರಗಳು

ಉಪ್ಪಿನಕಾಯಿ, ಹಪ್ಪಳ, ಸಾಲ್ಟೆಡ್ ಸ್ನ್ಯಾಕ್ಸ್ ಸೇವಿಸುವುದರಿಂದ ಸೋಡಿಯಂ ಹೆಚ್ಚಾಗಿ ದೇಹದ ನೀರು ಹೀರಿಕೊಂಡು ನಿರ್ಜಲೀಕರಣ, ಊತ, ರಕ್ತದೊತ್ತಡ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಕ್ಯಾಫೀನ್ ಪಾನೀಯಗಳು

ಬಿಸಿ ಕಾಫಿ, ಚಹಾ, ಎನರ್ಜಿ ಡ್ರಿಂಕ್ಸ್, ಸೋಡಾ ಸೇವಿಸುವುದರಿಂದ ದೇಹದಲ್ಲಿ ನೀರು ಕಡಿಮೆ ಮಾಡಿ, ಡಿಹೈಡ್ರೇಷನ್ ಹೆಚ್ಚಿಸಿ, ದೇಹದ ಉಷ್ಣತೆಯನ್ನು ನಿಯಂತ್ರಿಸುವ ಸಾಮರ್ಥ್ಯ ಕಡಿಮೆ ಮಾಡುತ್ತವೆ.