ಈ ವರ್ಷವು ಅಬ್ಬರಿಸಲಿಲ್ಲ ಬಾಲಿವುಡ್! ಸೀಕ್ವೆಲ್ಗಳು ಕಂಡಿದ್ದು ಸೋಲೇ
ಮೋಹನ್ ಶೆಟ್ಟಿ
ಈ ವರ್ಷವು ಅಬ್ಬರಿಸಲಿಲ್ಲ ಬಾಲಿವುಡ್! ಸೀಕ್ವೆಲ್ಗಳು ಕಂಡಿದ್ದು ಸೋಲೇ
ಕಳೆದ ವರ್ಷ 'ಸ್ತ್ರೀ 2', 'ಫೈಟರ್', 'ಅನಿಮಲ್' 'ಸಿಂಗಂ ಅಗೈನ್' ಸೇರಿ ಒಂದಷ್ಟು ಬಹುನಿರೀಕ್ಷಿತ ಸಿನಿಮಾಗಳು ಮಾತ್ರ ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಿದ್ದು ಬಿಟ್ಟರೆ, ಉಳಿದೆಲ್ಲ ಚಿತ್ರಗಳು ಫ್ಲಾಪ್.
ನಿರೀಕ್ಷೆ ತಕ್ಕಂತೆ ಆದಾಯ ಗಳಿಸುವಲ್ಲಿ ವಿಫಲ
ಲಾಭವನ್ನು ಕಾಣಬೇಕಿದ್ದ ಬಾಲಿವುಡ್, ಒಂದಷ್ಟು ಸಿನಿಮಾಗಳನ್ನು ಹೊರತುಪಡಿಸಿದರೆ, ನಿರೀಕ್ಷೆಗೆ ತಕ್ಕಂತೆ ಆದಾಯವನ್ನು ಗಳಿಸುವಲ್ಲಿ ವಿಫಲವಾಗಿದೆ ಎಂಬುದರಲ್ಲಿ ಅನುಮಾನವೇ ಬೇಡ.
ಆರಂಭದಿಂದಲೂ ಸೀಕ್ವೆಲ್ ಸಿನಿಮಾಗಳು ಹೆಚ್ಚು
ಬಾಲಿವುಡ್‌ನಲ್ಲಿ ಆರಂಭದಿಂದಲೂ ಸೀಕ್ವೆಲ್ ಸಿನಿಮಾಗಳು ಹೆಚ್ಚಾಗಿ ಮೂಡಿಬರುತ್ತಿವೆ. ಹೆಸರಿಗೆ ಮಾತ್ರ ಅದು ಸೀಕ್ವೆಲ್! ಆದರೆ, ಮೊದಲ ಭಾಗ ಮತ್ತು ಅದರ ಮುಂದುವರಿದ ಭಾಗದ ಚಿತ್ರದ ನಡುವೆ ಯಾವುದೇ ಸಂಬಂಧವಿರುವುದಿಲ್ಲ.
'ಸಿತಾರೆ ಜಮೀನ್ ಪರ್' ಬಿಟ್ಟರೆ...
ಉತ್ತರ ಭಾಗದಲ್ಲಿ ಹಲವು ಸೀಕ್ವೆಲ್ ಸಿನಿಮಾಗಳು ಬ್ಲಾಕ್ಬಸ್ಟರ್ ಹಿಟ್ ಆಗುವಲ್ಲಿ ವಿಫಲವಾಗುತ್ತಿವೆ. ಉದಾ, ಈ ವರ್ಷ ತೆರೆಕಂಡ 'ಸಿತಾರೆ ಜಮೀನ್ ಪರ್' ಹೊರತುಪಡಿಸಿದರೆ, ಉಳಿದೆಲ್ಲ ಚಿತ್ರಗಳು ಅಂತಹ ಕಮಾಲ್ ಮಾಡಲಿಲ್ಲ.
ವಾರ್ 2 ಕೂಡ ಸೋಲು
ಭಾರೀ ಬಜೆಟ್ ಮತ್ತು ಸಾಕಷ್ಟು ಹೈಪ್ ಸೃಷ್ಡಿಸಿದ 'ವಾರ್ 2' ಕೂಡ ಬಾಕ್ಸ್ಆಫೀಸ್ನಲ್ಲಿ ಹಾಗೂ ಸಿನಿಪ್ರಿಯರ ನಿರೀಕ್ಷೆಗಳನ್ನು ಪೂರೈಸುವಲ್ಲಿ ಮುಗ್ಗರಿಸಿತು. ಇದು ನಿರ್ಮಾಪಕರಿಗೂ ದೊಡ್ಡ ಹೊಡೆತ ನೀಡಿತು.
ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ವಿಫಲ
'ಹೌಸ್‌ಫುಲ್ 5', ದೊಡ್ಡ ತಾರಾಬಳಗವನ್ನು ಹೊಂದಿದ್ದರೂ, ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ಎಡವಿತು. 180 ಕೋಟಿ ರೂ.ಗಿಂತ ಹೆಚ್ಚು ಬಜೆಟ್‌ನಲ್ಲಿ ನಿರ್ಮಿಸಲಾದ ಈ ಸಿನಿಮಾ 'ಹೌಸ್‌ಫುಲ್ 4' ಕಲೆಕ್ಷನ್ ಮೀರಿಸಲು ಸೋತಿತು.
ಬಾಘಿ 4, ಜಾಲಿ LLB 3.....
ಇದೇ ರೀತಿ 'ಕೇಸರಿ 2', 'ಜಾಲಿ LLB 3' ಕೂಡ ಫ್ಲಾಪ್ ಸಾಲಿಗೆ ಸೇರಿತು. 'ಧಡಕ್ 2' ಪಾಸಿಟಿವ್ ಪ್ರತಿಕ್ರಿಯೆ ಪಡೆದುಕೊಂಡರೆ, 'ಸೈಯಾರ' ಬಾಕ್ಸ್ ಆಫೀಸ್ನಲ್ಲಿ ಮುಗ್ಗರಿಸಿತು. ಇನ್ನು 'ಬಾಘಿ 4' ಕೂಡ ಸೋಲಿನ ಹಾದಿ ಹಿಡಿಯಿತು