ದಾವೂದ್​ ಇಬ್ರಾಹಿಂ ಪಾತ್ರವಿರುವ ಬಾಲಿವುಡ್​ ಸಿನಿಮಾಗಳು

ವಿನಾಯಕ ನಾಯಕ

ದಾವೂದ್​ ಇಬ್ರಾಹಿಂ ಪಾತ್ರವಿರುವ ಬಾಲಿವುಡ್​ ಸಿನಿಮಾಗಳು

ಒಂದು ಕಾಲದಲ್ಲಿ ಮುಂಬೈನಲ್ಲಿ ಕುಣಿತುಕೊಂಡು ಇಡೀ ಭಾರತವನ್ನೇ ನಡುಗಿಸಿದ ವ್ಯಕ್ತಿ ಎಂದರೆ ಅದ ದಾವೂದ್​ ಇಬ್ರಾಹಿಂ. 1993 ರ ಮುಂಬೈ ಸರಣಿ ಬಾಂಬ್ ಬ್ಲಾಸ್ಟ್​ ನಂತರ ದುಬೈ ಆಮೇಲೆ ಪಾಕಿಸ್ತಾನ ಸೇರಿದ ಈ ಭೂಗತ ಪಾತಕಿಯ ಪಾತ್ರವನ್ನು ಒಳಗೊಂಡ ಹಲವಾರು ಸಿನಿಮಾಗಳು ಬಾಲಿವುಡ್​ನಲ್ಲಿ ನಿರ್ಮಾಣವಾಗಿವೆ.

ಕಂಪನಿ (2002)

ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಈ ಚಿತ್ರದಲ್ಲಿ 'ಮಲಿಕ್' (ಅಜಯ್​ ದೇವಗನ್​ ನಟಿಸಿದ್ದ ಪಾತ್ರ) ಎಂಬ ಪಾತ್ರವು ದಾವೂದ್‌ನನ್ನು ಬಹಳಷ್ಟು ಹೋಲುತ್ತದೆ.

ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ (2010)

ಈ ಸಿನಿಮಾದಲ್ಲಿ 'ಶೋಯೆಬ್ ಖಾನ್' (ಇಮ್ರಾನ್​ ಹಾಶ್ಮಿ ನಟಿಸಿದ್ದ ಪಾತ್ರ) ಎಂಬ ಪಾತ್ರವು ದಾವೂದ್‌ನ ಆರಂಭಿಕ ದಿನಗಳು ಮತ್ತು ಹಾಜಿ ಮಸ್ತಾನ್ ಜೊತೆಗಿನ ಸಂಬಂಧವನ್ನು ಆಧರಿಸಿದೆ.

ಡಿ-ಡೇ (2013)

ಈ ಸಿನಿಮಾದಲ್ಲಿ ಪಾಕಿಸ್ತಾನದಲ್ಲಿ ಅಡಗಿರುವ ದಾವೂದ್‌ನನ್ನು (ರಿಷಿ ಕಪೂರ್​ ನಟಿಸಿದ್ದ ಪಾತ್ರ) ಭಾರತಕ್ಕೆ ಕರೆತರಲು ನಡೆಸುವ ಕಾರ್ಯಾಚರಣೆಯ ಕಲ್ಪಿತ ಕಥೆ.

ಶೂಟೌಟ್ ಅಟ್ ವಾಡಾಲ (2013)

ಈ ಸಿನಿಮಾದಲ್ಲಿ ಇದರಲ್ಲಿ ದಾವೂದ್ ಇಬ್ರಾಹಿಂ ಪಾತ್ರವನ್ನು 'ದಿಲಾವರ್ ಇಮ್ತಿಯಾಜ್ ಹಸ್ಕರ್' (ಸೋನು ಸೂದ್​ ನಟಿಸಿದ್ದ ಪಾತ್ರ) ಎಂಬ ಹೆಸರಿನಲ್ಲಿ ತೋರಿಸಲಾಗಿದೆ.

ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ ದುಬಾರಾ (2013)

ಈ ಸಿನಿಮಾದಲ್ಲಿ ದಾವೂದ್ ದುಬೈನಲ್ಲಿ ಹೇಗೆ ಮುಂಬೈ ಭೂಗತ ಲೋಕವನ್ನು ಹತೋಟಿಯಲ್ಲಿಟ್ಟು ಕೊಂಡಿದ್ದ ಎಂದು ತೋರಿಸಲಾಗಿದೆ. ದಾವೂದ್​ನ ಪಾತ್ರವನ್ನು ಅಕ್ಷಯ್​ ಕುಮಾರ್ ನಿರ್ವಹಿಸಿದ್ದರು.

ಹಸೀನಾ ಪಾರ್ಕರ್ (2017)

ಈ ಸಿನಿಮಾ ದಾವೂದ್ ತಂಗಿ ಹಸೀನಾ ಜೀವನದ ಕಥೆಯಾಗಿದ್ದು, ಇದರಲ್ಲಿ ದಾವೂದ್ ಪಾತ್ರವನ್ನು ಸಿದ್ದಾಂತ್ ಕಪೂರ್ ನಿರ್ವಹಿಸಿದ್ದರು.

ಧುರಂಧರ್ 2 (2026)

ಇತ್ತಚೆಗೆ ಬಿಡುಗಡೆಯಾದ ಈ ಸಿನಿಮಾದಲ್ಲಿ 'ಬಡೇ ಸಾಬ್' (ಡ್ಯಾನಿಶ್​ ಇಕ್ಬಾಲ್​ ನಟಿಸಿರುವ ಪಾತ್ರ) ಎಂಬ ರಹಸ್ಯ ಪಾತ್ರವು ದಾವೂದ್ ಇಬ್ರಾಹಿಂನದ್ದೇ ಎಂದು ಖಚಿತವಾಗಿದೆ.