ಸಹ ನಿರ್ದೇಶಕಿಯಾಗಿ ಚಿತ್ರರಂಗ ಪ್ರವೇಶ
ಮುಂಬೈನ ರೂಪಾರೇಲ್ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿದ ಶರ್ವರಿ, ಮಾಡೆಲಿಂಗ್ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಚಿತ್ರರಂಗಕ್ಕೆ ನಟಿಯಾಗಿ ಪದಾರ್ಪಣೆ ಮಾಡುವ ಮೊದಲು, ಇವರು ಪ್ಯಾರ್ ಕಾ ಪಂಚ್‌ನಾಮಾ 2, 'ಬಾಜೀರಾವ್ ಮಸ್ತಾನಿ ಮತ್ತು ಸೋನು ಕೆ ಟಿಟು ಕಿ ಸ್ವೀಟಿ ಯಂತಹ ಪ್ರಸಿದ್ಧ ಹಿಂದಿ ಸಿನಿಮಾಗಳಲ್ಲಿ ಸಹ-ನಿರ್ದೇಶಕಿಯಾಗಿ ಕೆಲಸ ಮಾಡಿ ಚಿತ್ರನಿರ್ಮಾಣದ ಅನುಭವ ಪಡೆದಿದ್ದರು.