ಬಾಲಿವುಡ್​​ ಬ್ಯೂಟಿ ಜ್ಯಾಕ್ವೆಲಿನ್ ಫರ್ನಾಂಡಿಸ್!

ವಿನಾಯಕ ನಾಯಕ

ಬಾಲಿವುಡ್​​ ಬ್ಯೂಟಿ ಜ್ಯಾಕ್ವೆಲಿನ್ ಫರ್ನಾಂಡಿಸ್!

ಜ್ಯಾಕ್ವೆಲಿನ್ ಫರ್ನಾಂಡಿಸ್ ಆಗಸ್ಟ್ 11, 1985 ರಂದು ಬಹ್ರೇನ್‌ನಲ್ಲಿ ಜನಿಸಿದರು. ಇವರ ತಂದೆ ಶ್ರೀಲಂಕಾದವರು ಮತ್ತು ತಾಯಿ ಮಲೇಷ್ಯಾ-ಕೆನಡಾ ಮೂಲದವರಾಗಿದ್ದಾರೆ.

ಶಿಕ್ಷಣ ಮತ್ತು ಮಾಡೆಲಿಂಗ್

ಜ್ಯಾಕ್ವೆಲಿನ್ ಆಸ್ಟ್ರೇಲಿಯಾದ ಸಿಡ್ನಿ ವಿಶ್ವವಿದ್ಯಾಲಯದಿಂದ ಮಾಸ್ ಕಮ್ಯುನಿಕೇಷನ್ ಪದವಿ ಪಡೆದಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡ ಇವರು, 2006 ರ ಮಿಸ್ ಯೂನಿವರ್ಸ್ ಶ್ರೀಲಂಕಾ ಕಿರೀಟವನ್ನು ಮುಡಿಗೇರಿಸಿಕೊಂಡರು.

ಚಿತ್ರರಂಗದ ಪ್ರವೇಶ

2009ರಲ್ಲಿ ತೆರೆಕಂಡ 'ಅಲಾದ್ದೀನ್' ಚಿತ್ರದ ಮೂಲಕ ಇವರು ಬಾಲಿವುಡ್‌ಗೆ ಕಾಲಿಟ್ಟರು. ಈ ಚಿತ್ರಕ್ಕಾಗಿ ಇವರಿಗೆ ಅತ್ಯುತ್ತಮ ಡೆಬ್ಯೂಟ್​ ನಟಿ ಪ್ರಶಸ್ತಿ ಲಭಿಸಿತು.

ಪ್ರಮುಖ ಸಿನಿಮಾಗಳು

'ಮರ್ಡರ್ 2' 'ಹೌಸ್‌ಫುಲ್','ರೇಸ್ 2' , 'ಕಿಕ್', 'ಜುಡ್ವಾ 2' ಮುಂತಾದ ಜನಪ್ರಿಯ ಮತ್ತು ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ನಟಿಸುವ ಮೂಲಕ ಖ್ಯಾತಿ ಗಳಿಸಿದರು. ಇವರು ಕನ್ನಡದ 'ವಿಕ್ರಾಂತ್ ರೋಣ' ಚಿತ್ರದಲ್ಲೂ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇತರ ಕ್ಷೇತ್ರಗಳು

ನಿಮಾಗಳಲ್ಲದೆ, ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿಯೂ ಕಾರ್ಯನಿರ್ವಹಿಸಿದ್ದಾರೆ ಹಾಗೂ ಹಲವು ಮ್ಯೂಸಿಕ್ ವಿಡಿಯೋಗಳಲ್ಲಿಯೂ ಅಭಿನಯಿಸಿದ್ದಾರೆ.