ಕೆಂಬಣ್ಣದಲ್ಲಿ ಕಿಯಾರಾ 'ಟಾಕ್ಸಿಕ್​' ಲುಕ್

ಮಮತಾ

ಕೆಂಬಣ್ಣದಲ್ಲಿ ಕಿಯಾರಾ 'ಟಾಕ್ಸಿಕ್​' ಲುಕ್

ಸದ್ಯ ದೇಶದ ಪ್ರತಿ ಭಾಗದಲ್ಲೂ ಸದ್ದು ಮಾಡುತ್ತಿರುವ ಹೆಸರು ಎಂದರೆ ಅದು ಟಾಕ್ಸಿಕ್​. ಇದೇ ತಿಂಗಳು 26ರಂದು ರಿಲೀಸ್​ಗೆ ಸಜ್ಜಾಗಿದೆ. ಸಿನಿಮಾ ಪ್ರಚಾರದ ಮಧ್ಯೆ ಬಾಲಿವುಡ್​ ನಟಿ ಕಿಯಾರಾ ಅಡ್ವಾಣಿ ಅವರು ಹಂಚಿಕೊಂಡಿರುವ ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ

ಗಾಢ ಕೆಂಪು ಬಟ್ಟೆಯಲ್ಲಿ ಮಿಂಚಿಂಗ್​

ಕೆಂಬಣ್ಣದ ಬಟ್ಟೆ, ಲಿಪ್​ಸ್ಟಿಕ್​ ಗಾಢ ಕೆಂಪು, ಕೆಂಪಿರುವ ಬ್ಯಾಗ್ರೌಂಡ್ ಮಧ್ಯೆ ಫೋಟೋ ಶೂಟ್​ ಮಾಡಿಸಿಕೊಂಡು ಹಂಚಿಕೊಂಡಿದ್ದಾರೆ. ಅವರ ಮಾದಕ ನೋಟ ಹಾಗೂ ಸೌಂದರ್ಯಕ್ಕೆ ಪಡ್ಡೆ ಹುಡುಗರು ಮನಸೋತಿದ್ದಾರೆ.

ಕಿಯಾರಾ ವರ್ಕ್​ ಬಗ್ಗೆ ಹೊಗಳಿದ ಯಶ್

ಟಾಕ್ಸಿಕ್​ ಸಿನಿಮಾ ವೇಳೆ ಕಿಯಾರಾ ಗರ್ಭಿಣಿಯಾಗಿದ್ದರು. ಆಕ್ಷನ್ ದೃಶ್ಯಗಳ ಶೂಟಿಂಗ್, ಚಳಿ, ಮಳೆ ಗಾಳಿ ಯಾವುದನ್ನು ಲೆಕ್ಕಿಸದೆ ಕಿಯಾರಾ ನಟನೆ ಮಾಡಿದ್ದರು.

ಕಿಯಾರಾಗೆ ಬಾಡಿಗಾರ್ಡ್​ ಆಗಿದ್ದ ಯಶ್

ಕಿಯಾರಾ ಅವರಿಗೆ ಕಿಂಚಿತ್ತು ಸಮಸ್ಯೆ ಉಂಟಾಗದಂತೆ ನಾನು ಮತ್ತು ಗೀತು ಮೋಹನ್​ ದಾಸ್ ಅವರು ಎಚ್ಚರಿಕೆ ವಹಿಸಿದ್ದೇವೆ. ನಿರ್ದೇಶಕಿ ಸಹ ಅವರಿಗೆ ಚಿಕ್ಕ ಗಾಯವಾಗದಂತೆ ನೋಡಿಕೊಂಡಿದ್ದರು. ನಾವು ಬೌನ್ಸರ್​ ಮತ್ತೆ ಬಾಡಿಗಾರ್ಡ್​ ಆಗಿದ್ದೆವು ಎಂದು ಯಶ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ನಾಡಿಯಾ ಪಾತ್ರಕ್ಕೆ ನಾನೇ ಬೇಕು ಎಂದಿದ್ರು

ಟಾಕ್ಸಿಕ್​ ಟ್ರೇಲರ್​ ರಿಲೀಸ್ ವೇಳೆ ಕಿಯಾರಾ ಮಾತನಾಡಿದ್ದರು. ಈ ವೇಳೆ ನಾಡಿಯಾ ಪಾತ್ರಕ್ಕೆ ಗೀತು ಮತ್ತು ಯಶ್​ ಅವರು ನಾನೇ ಬೇಕು ಎಂದು ಮ್ಯಾನಿಫೆಸ್ಟ್ ಮಾಡಿಕೊಂಡಿದ್ದರು ಎಂದು ಕಿಯಾರಾ ಹೇಳಿದ್ರು.

ಮಳೆಯ ಸೀನ್​ ಮಾಡಿಲ್ಲವಂತೆ ಕಿಯಾರಾ

ಕಿಯಾರಾ ಅವರು ಎಂದಿಗೂ ಮಳೆಯ ಸೀನ್​ನಲ್ಲಿ ನಟಿಸಲಿಲ್ಲ. ಒಮ್ಮೆ ನಾನು ಕೇಳಿದ್ದೆ ರೇನ್​ ಸೀಕ್ವೆನ್ಸ್​ನಲ್ಲಿ ನಟಿಸಿದ್ದೀರಾ ಎಂದು ಅವರು ಇಲ್ಲ ಹೇಗಿರುತ್ತದೆ ಎಂದಿದ್ದರು. ನಾನು ಒಮ್ಮೆ ಮಾಡಿ ಚೆನ್ನಾಗಿರುತ್ತದೆ ಎಂದು ಹೇಳಿದ್ದೆ ಎನ್ನುವುದಾಗಿ ಸಂದರ್ಶನವೊಂದರಲ್ಲಿ ಯಶ್ ಹೇಳಿದ್ದಾರೆ.

ಕಿಯಾರಾಗೆ ಸಿದ್ಧಾರ್ಥ್​ ಸಪೋರ್ಟ್​

ಕಿಯಾರಾ ಅಡ್ವಾಣಿ ಅವರು ಬೋಲ್ಡ್​ ದೃಶ್ಯದಲ್ಲಿ ನಟಿಸಿರುವ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಆದರೆ ಟ್ರೋಲ್​ಗಳ ವಿರುದ್ಧ ಕಿಯಾರಾ ಪತಿ ಸಿದ್ಧಾರ್ಥ್ ಕಿಡಿಕಾರಿದ್ದಾರೆ. ಜೊತೆಗೆ​ ಪತ್ನಿಗೆ ಬೆಂಬಲ ಕೊಟ್ಟಿದ್ದಾರೆ.