ತೃಪ್ತಿಗೆ ಬರ್ತಡೇ ಸಂಭ್ರಮ

ರಮೇಶ್​ ಕುಮಾರ್​​ ಬಿ ಎಡಮೋಳೆ

ತೃಪ್ತಿಗೆ ಬರ್ತಡೇ ಸಂಭ್ರಮ

ರಣಬೀರ್​ ಕಪೂರ್​ ನಟನೆಯ ಅನಿಮಲ್​ ಸಿನಿಮಾದಲ್ಲಿ ಹಸಿಬಿಸಿ ದೃಶ್ಯಗಳಲ್ಲಿ ನಟಿಸುವ ಮೂಲಕ ಸಖತ್​ ಸದ್ದು ಮಾಡಿದ ಬಾಲಿವುಡ್​ ಬ್ಯೂಟಿ ತೃಪ್ತಿ ದಿಮ್ರಿ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ದೆಹಲಿ ಸುಂದರಿ

ತೃಪ್ತಿ ಅವರು 1994, ಫೆಬ್ರವರಿ 23 ರಂದು ನವದೆಹಲಿಯಲ್ಲಿ ಜನಿಸಿದರು. ಸದ್ಯ ಅವರ ವಯಸ್ಸು 32. ಇವರು ಉತ್ತರಾಖಂಡ್ ಮೂಲದವರು ಮತ್ತು ಸೈಕಾಲಜಿ ಪದವಿ ಪಡೆದಿದ್ದಾರೆ.

ಚಿತ್ರರಂಗ ಪ್ರವೇಶ

2017ರಲ್ಲಿ ಪೋಸ್ಟರ್​ ಬಾಯ್ಸ್​​ ಮತ್ತು ಮಾಮ್​ ಚಿತ್ರಗಳ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. 2018ರಲ್ಲಿ ತೆರೆಕಂಡ ಲೈಲಾ ಮಜ್ನು ಸಿನಿಮಾದಲ್ಲಿ ಮೊದಲ ಲೀಡ್ ಪಾತ್ರ ಸಿಕ್ಕಿತು.

ಖ್ಯಾತಿ ತಂದುಕೊಟ್ಟ ಸಿನಿಮಾ

2020ರ Bulbbul ಮತ್ತು 2022ರ Qala ಚಿತ್ರಗಳಲ್ಲಿ ತಮ್ಮ ನಟನೆಗಾಗಿ ತೃಪ್ತಿ ಪ್ರಶಂಸೆಗೊಳಗಾದರು. ಆದರೆ, 2023ರ ಅನಿಮಲ್​ ಚಿತ್ರದಲ್ಲಿ ರಣಬೀರ್ ಕಪೂರ್ ಜೊತೆಗಿನ ತಮ್ಮ ಪಾತ್ರದಿಂದ ರಾತ್ರೋರಾತ್ರಿ ನ್ಯಾಷನಲ್ ಕ್ರಶ್ ಆದರು.

ಇತ್ತೀಚಿನ ಕೆಲಸಗಳು

ಅನಿಮಲ್​ ಸಿನಿಮಾ ಬಳಿಕ ಬ್ಯಾಡ್​ ನ್ಯೂಸ್, ಭೂಲ್​ ಭೂಲಯ್ಯ 3 ಹಾಗೂ ಧಡಕ್​ 2 ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಭಾಸ್ ನಟನೆಯ ಸ್ಪಿರಿಟ್​ ಸಿನಿಮಾ ಮೂಲಕ ಟಾಲಿವುಡ್​ಗೆ ಕಾಲಿಟ್ಟಿದ್ದಾರೆ.

ಜನಪ್ರಿಯತೆ

ಇನ್‌ಸ್ಟಾಗ್ರಾಂನಲ್ಲಿ 6 ಮಿಲಿಯನ್‌ಗೂ ಹೆಚ್ಚು ಫಾಲೋವರ್ಸ್ ಇದ್ದು, ಫ್ಯಾಷನ್, ಫೋಟೋಶೂಟ್‌ಗಳು ಮತ್ತು ಗ್ಲಾಮರಸ್ ಲುಕ್‌ಗಳಿಂದಾಗಿ ಅಭಿಮಾನಿಗಳ ಪ್ರೀತಿ ಪಡೆದಿದ್ದಾರೆ.

ಹಾಟ್​ ಫೋಟೋಸ್​ ವೈರಲ್​

ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ತೃಪ್ತಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಇದರ ನಡುವೆ ಅವರ ಹಾಟ್​ ಫೋಟೋಗಳು ಕೂಡ ವೈರಲ್​ ಆಗಿದ್ದು, ಅಭಿಮಾನಿಗಳು ತೃಪ್ತಿಯ ಮೈಮಾಟಕ್ಕೆ ಫಿದಾ ಆಗಿದ್ದಾರೆ.