'ಮಹಾಕಾಳಿ' ಭೂಮಿ

ಮಮತಾ

'ಮಹಾಕಾಳಿ' ಭೂಮಿ

ಪ್ರಶಾಂತ್​ ವರ್ಮಾರ ಮಹಾಕಾಳಿ ದಿ ಎಂಡ್​ ಬಿಗಿನ್ಸ್​ ಸಿನಿಮಾ ಶೂಟಿಂಗ್​ನಲ್ಲಿ ಕನ್ನಡದ ನಟಿ ಭೂಮಿ ಶೆಟ್ಟಿ ಬ್ಯುಸಿಯಾಗಿದ್ದಾರೆ. ಆ ಮಧ್ಯೆ ಹಸಿರು ಸೀರೆಯುಟ್ಟು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ಫೋಟೋ ವೈರಲ್ ಆಗಿದೆ

ಕಪ್ಪು ಸುಂದರಿ

ಅವರ ಈ ಪೋಸ್ಟ್​ಗೆ ಫ್ಯಾನ್ಸ್​ ಸಾಕಷ್ಟು ಕಾಮೆಂಟ್ ಮಾಡಿದ್ದಾರೆ. ಕೊನೆಗೂ ಒಬ್ಬ ಕಪ್ಪು ಚರ್ಮದ ಸುಂದರಿ ಮುಖ್ಯವಾಹಿನಿಯಲ್ಲಿ ಮಿಂಚುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಮಹಾಕಾಳಿ ಪಾತ್ರ ಹುಡುಕಿ ಬಂತು

ನಾನು 18ನೇ ವಯಸ್ಸಿನಿಂದ ಸಿನಿ ಪಯಣ ಆರಂಭಿಸಿದ್ದೇನೆ. ಇಂದು ನಾನು ಇಂತಹ ಗಂಭೀರ ಪಾತ್ರ ನಿರ್ವಹಿಸಲು ತಯಾರಿದ್ದೇನೆ ಎನ್ನುವಾಗಲೇ ಮಹಾಕಾಳಿ ಪಾತ್ರ ನನ್ನನ್ನು ಹುಡುಕಿ ಬಂತು ಎಂದು ಹೇಳಿದರು.

ಆಡಿಷನ್​ನಲ್ಲಿ ಭಾಗವಹಿಸಿದ್ದೆ

ಮಹಾಕಾಳಿ ಪಾತ್ರ ನನಗೆ ಸುಲಭವಾಗಿ ಸಿಕ್ಕಿಲ್ಲ ಸಾಕಷ್ಟು ಆಡಿಷನ್​ ಕೊಟ್ಟೆ ಕೊನೆಗೆ ಸೆಲೆಕ್ಟ್​ ಆದೆ ಎಂದು ಭೂಮಿ ಶೆಟ್ಟಿ ಹೇಳಿದ್ದಾರೆ.

ಇಕ್ಕಟ್ ಸಿನಿಮಾದಲ್ಲಿ ನಟನೆ

ಕೋವಿಡ್​ ಕಾಲದಲ್ಲಿ ಇಕ್ಕಟ್ ಸಿನಿಮಾ ರಿಲೀಸ್​ ಆಗಿತ್ತು. ಒಟಿಟಿಯಲ್ಲಿ ಬಿಡುಗಡೆಯಾದ ಇದು ಸಾಕಷ್ಟು ಹಿಟ್ ಕಂಡಿತ್ತು. ಹಸೀನ್ ಖಾನ್ ಮತ್ತು ಎಶಮ್ ಖಾನ್ ಸಿನಿಮಾ ನಿರ್ದೇಶಿಸಿದ್ದು ನಾಗಭೂಷಣ್​ ಅವರು ನಟಿಸಿದ್ದಾರೆ.