ಭಾವನಾ ಅವರ ಮಗಳ ಜೊತೆಗೆ ಗೆಳತಿ ಭಾವನಾ ಬೆಳಗೆರೆ ಮನೆಗೆ ಭೇಟಿ ಕೊಟ್ಟಿದ್ದಾರೆ.
ಎರಡೂವರೆ ತಿಂಗಳ ಮಗು
ಭಾವನಾ ತಮ್ಮ ಎರಡೂವರೆ ತಿಂಗಳ ಮಗುವಿನೊಂದಿಗೆ ಬೆಳಗೆರೆ ಮನೆಗೆ ಬಂದಿದ್ದಾರೆ. ಕೆಲಹೊತ್ತು ಸ್ನೇಹಿತರ ಜೊತೆ ಮಾತುಕತೆ ಮಾಡಿರುವ ಭಾವನಾ ಹಲವಾರು ವಿಚಾರಗಳ ಬಗ್ಗೆ ಮೆಲುಕು ಹಾಕಿದ್ದಾರೆ.
ಶ್ರೀನಗರ ಕಿಟ್ಟಿ ಜೊತೆಗೆ ಭಾವನಾ ರಾಮಣ್ಣ ನಟನೆ
ಶ್ರೀನಗರ ಕಿಟ್ಟಿ ಜೊತೆಗೆ ಭಾವನಾ ರಾಮಣ್ಣ ಇಂತಿ ನಿನ್ನ ಪ್ರೀತಿಯ ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲಿಂದ ಭಾವನಾ ರಾಮಣ್ಣ ಹಾಗೂ ಭಾವನಾ ಬೆಳಗೆರೆ ಸ್ನೇಹ ಬೆಳೆದ ಬಗ್ಗೆ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
'ರುಕ್ಮಿಣಿ' ಯೆಂದು ಮಗಳಿಗೆ ನಾಮಕರಣ
ಮಗಳಿಗೆ ರುಕ್ಮಿಣಿ ಅನ್ನೋ ಹೆಸರು ಇಡುತ್ತಿದ್ದಾರಂತೆ ಭಾವನಾ ಈ ಬಗ್ಗೆಯೂ ಹೇಳಿಕೊಂಡಿದ್ದಾರಂತೆ.
ಭಾವನಾ ಮಾಟಗಾತಿ ಕಥೆಯನ್ನ ಸಿನಿಮಾ ಮಾಡಲಿದ್ದಾರೆ
ಭಾವನಾ ಮಾಟಗಾತಿ ಕಥೆಯನ್ನ ಸಿನಿಮಾ ಮಾಡಲು ತಯಾರಿ ಮಾಡಿಕೊಂಡಿದ್ದಾರಂತೆ. ಹೀಗಾಗಿ ಆ ಪುಸ್ತಕದ ಕಾಪಿರೈಟ್ ಪಡೆಯುವುದಕ್ಕಾಗಿ ಬಂದಿದ್ದರು ಎಂದು ಬರೆದುಕೊಂಡಿದ್ದಾರೆ ಭಾವನಾ ಬೆಳಗೆರೆ.