'ಕಾಂತ'ನ ಭಾಗ್ಯಶ್ರೀ ಬೋರ್ಸ್​

ಮಮತಾ

'ಕಾಂತ'ನ ಭಾಗ್ಯಶ್ರೀ ಬೋರ್ಸ್​

ದುಲ್ಕರ್​​ ಸಲ್ಮಾನ್​ ನಟನೆಯ ಕಾಂತ ಸಿನಿಮಾ ಮೂಲಕ ತೆಲುಗು ಸಿನಿಮಾ ರಂಗಕ್ಕೆ ಹೆಚ್ಚು ಚಿರಪರಿಚಿತರಾದ ಭಾಗ್ಯಶ್ರೀ ಬೋರ್ಸ್​, ಇನ್​ಸ್ಟಾಗ್ರಾಮ್​ನಲ್ಲಿ ನಯಾ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆಕಾಶ ಬಣ್ಣದ ಸೀರೆಗೆ ಬಿಳಿ ಬಣ್ಣದ ಬ್ಲೌಸ್​, ಹರಿಬಿಟ್ಟ ಕೂದಲು ಸಿಂಪಲ್​ ಮೇಕಪ್​​ ಅವರ ಲುಕ್​ ಅನ್ನು ಹೆಚ್ಚಿಸಿದೆ,

ಸಿನಿಮಾ ನಂಬಿಕೆಯಿಂದ ನಿರ್ಮಾಣವಾಗತ್ತೆ

ಸಿನಿಮಾಗಳಿಂದ ನಿರಾಶದಾಯಕ ಪ್ರಣಯ ಸೃಷ್ಟಿಯಾಗುತ್ತದೆ ಎಂದು ಕೆಲವರು ಹೇಳುತ್ತಾರೆ. ಆದರೆ, ನಾನು ಹೇಳುತ್ತೇನೆ. ಇನ್ನು ಸಿನಿಮಾ ಮೇಲೆ ನಂಬಿಕೆ ಇಟ್ಟು ಬದುಕು ಕಟ್ಟಿಕೊಂಡವರಿಂದಲೇ ಇನ್ನಷ್ಟು ಸಿನಿಮಾಗಳು ನಿರ್ಮಾಣವಾಗುತ್ತದೆ ಎಂದು ನಾನು ಹೇಳುತ್ತೇನೆ ಎಂದು ಶೀರ್ಷಿಕೆ ಕೊಟ್ಟುಕೊಂಡಿದ್ದಾರೆ.

ದೃಷ್ಟಿಯಾಗತ್ತೆ ಹುಷಾರು

ಭಾಗ್ಯಶ್ರೀ ಅವರ ಪೋಸ್ಟ್​​ಗೆ ಹೊರಗಡೆ ಓಡಾಡಬೇಡಿ ದೃಷ್ಟಿಯಾಗುತ್ತದೆ ಎಂದು ಒಬ್ಬ ಫ್ಯಾನ್​ ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬ ವೇಟಿಂಗ್​ ಫಾರ್​ ಲೆನಿನ್​ ಡಾರ್ಲಿಂಗ್​ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಸೌಂದರ್ಯವೇ ನಿಮ್ಮ ಮುಂದೆ ತಲೆಬಾಗುತ್ತದೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

ಭಾಗ್ಯಶ್ರೀ ಮುಂದಿನ ಸಿನಿಮಾ

ಮುರುಳಿ ಕಿಶೋರ್​ ಅಬ್ಬೂರ್​ ನಿರ್ದೇಶಿಸಿದ ಲೆನಿನ್​ ಸಿನಿಮಾ ಜೂನ್​ 26ರಂದು ರಿಲೀಸ್ ಆಗಲಿದ್ದು, ಇದರಲ್ಲಿ ಅಖಿಲ್​ ಅಕ್ಕಿನೇನಿ ಹಾಗೂ ಭಾಗ್ಯಶ್ರೀ ಬೋರ್ಸ್ ಕಾಣಿಸಿಕೊಳ್ಳಲಿದ್ದಾರೆ. ಇದು ಹಳ್ಳಿ ಆಧಾರಿತ ಪ್ರೇಮ ಕತೆ ಎನ್ನಲಾಗಿದೆ.

ಭಾಗ್ಯಶ್ರೀ ನಟಿಸಿದ ಸಿನಿಮಾವಿದು

ಮಹಾರಾಷ್ಟ್ರದವರಾದ ಭಾಗ್ಯಶ್ರೀ ಅವರು ಚಂದು ಚಾಂಪಿಯನ್​​, ಯಾರಿಯಾನ್​2, ಕಿಂಗ್ಡಮ್​​​, ಮಿಸ್ಟರ್​ ಬಚ್ನ್​ನಲ್ಲಿ ನಟಿಸಿದ್ದರು. ಈ ಸಿನಿಮಾ ಹಿಟ್​​​ ಕಂಡ ನಂತರ ರಾಮ್​ ಪೋತಿನೇನಿ ಜೊತೆಗೆ ಆಂಧ್ರಕಿಂಗ್​ ತಾಲೂಕಾದಲ್ಲಿ ನಟಿಸಿದ್ದರು. ‘

ಕಾಂತದಿಂದ ಇನ್ನಷ್ಟು ಫೇಮಸ್

ಸೆಲ್ವಮಣಿ ಸೆಲ್ವರಾಜ್ ನಿರ್ದೇಶನದ ಕಾಂತ ಸಿನಿಮಾದಲ್ಲಿ ಮಲಯಾಳಂ ನಟ ದುಲ್ಕರ್​ ಸಲ್ಮಾನ್​ ನಾಯಕನಾಗಿ ನಟಿಸಿದ್ದರೆ, ಅವರಿಗೆ ಸರಿ ಸಮಾನವಾಗಿ ಭಾಗ್ಯ ಶ್ರೀ ಬೋರ್ಸ್​ ನಟಿಸಿದ್ದರು. ಈ ಸಿನಿಮಾ ಅವರಿಗೆ ಹೆಚ್ಚು ಕೀರ್ತಿ ತಂದುಕೊಟ್ಟಿತ್ತು.