ನಿಮ್ಮ ಮನೆಯ ಅಲಂಕಾರಿಕ ಗಿಡಗಳೇ ಮಕ್ಕಳಿಗೆ ವಿಷವಾಗುತ್ತೆ ಎಚ್ಚರ!
ಭಾನುಪ್ರಿಯ ಡಿ.ಕೆ
ನಿಮ್ಮ ಮನೆಯ ಅಲಂಕಾರಿಕ ಗಿಡಗಳೇ ಮಕ್ಕಳಿಗೆ ವಿಷವಾಗುತ್ತೆ ಎಚ್ಚರ!
ಪ್ರತಿಯೊಬ್ಬರೂ ಕೂಡ ಮನೆಯಲ್ಲಿ ಸಸ್ಯಗಳನ್ನು ಬೆಳೆಸಲು ಇಷ್ಟಪಡುತ್ತಾರೆ. ಇದು ಮನೆಯ ಸೌಂದರ್ಯವನ್ನು ಹೆಚ್ಚಿಸುವುದಲ್ಲದೇ, ವಾತಾವರಣವನ್ನು ಶುಚಿಯಾಗಿರಿಸುತ್ತದೆ. ಕೆಲವೊಂದು ಸಸ್ಯಗಳು ನೋಡಲು ಸುಂದರವಾಗಿದ್ದರೂ, ಅವು ವಿಷಕಾರಿಯಾಗಬಹುದು.
ಕಳ್ಳಿ ಗಿಡ
ಪಾಪಾಸುಕಳ್ಳಿಯ ಮುಳ್ಳುಗಳು ಕಣ್ಣಿಗೆ ಕಾಣದಷ್ಟು ಸಣ್ಣದಾಗಿರುತ್ತವೆ. ಮಕ್ಕಳು ಅಥವಾ ಸಾಕುಪ್ರಾಣಿಗಳು ಅವುಗಳನ್ನು ಮುಟ್ಟಿದಾಗ ಅವು ಚರ್ಮದೊಳಗೆ ಆಳವಾಗಿ ಇಳಿದು ಉರಿ ಅಥವಾ ಸೋಂಕನ್ನು ಉಂಟು ಮಾಡುತ್ತದೆ.
ಲಿಲ್ಲಿ ಸಸ್ಯ
ಲಿಲ್ಲಿ ಸಸ್ಯವು ಬೆಕ್ಕುಗಳಿಗೆ 'ಮಹಾಘಾತಕ' ಎಂದು ಹೇಳಲಾಗುತ್ತದೆ. ಈ ಗಿಡದ ಎಲೆ, ಹೂವು ಅಥವಾ ಅದರ ಪರಾಗವನ್ನು ಬೆಕ್ಕುಗಳು ಅಪ್ಪಿತಪ್ಪಿ ನೆಕ್ಕಿದರೆ ಅಥವಾ ತಿಂದರೆ, ಕೇವಲ 24-42 ಗಂಟೆಗಳಲ್ಲಿ ಅವುಗಳ ಮೂತ್ರಪಿಂಡ ವೈಫಲ್ಯ ಉಂಟಾಗುತ್ತದೆ.
ದತುರಾ ಸಸ್ಯ
ದತುರಾ ಸಸ್ಯವನ್ನು ಹೆಚ್ಚಾಗಿ ನಿಮ್ಮ ಮನೆಯಲ್ಲಿ ಕುಂಡದಲ್ಲಿ ಬೆಳೆಸಲಾಗುತ್ತದೆ. ಆದರೆ ಆ ಸಸ್ಯದಲ್ಲಿರುವ ರಸವು ನಿಮ್ಮ ಕಣ್ಣುಗಳಿಗೆ ಬಿದ್ದರೆ, ಇದರಿಂದ ದೃಷ್ಟಿ ಹಾಳಾಗಬಹುದು. ಈ ಹೂವನ್ನು ತಿನ್ನುವುದರಿಂದ ಮೂರ್ಛೆ ಮತ್ತು ಸೆಳೆತ ಸೇರಿದಂತೆ ಹಲವಾರು ಅಡ್ಡಪರಿಣಾಮಗಳು ಉಂಟಾಗಬಹುದು.
ಅರುಮ್ ಸಸ್ಯ
ಅರುಮ್ ಸಸ್ಯವು ಹಳದಿ, ಗುಲಾಬಿ ಮತ್ತು ಇತರ ಬಣ್ಣಗಳಲ್ಲಿ ಹೂವುಗಳನ್ನು ಹೊಂದಿರುತ್ತದೆ. ಆದರೆ, ಇದರ ಎಲೆಗಳು ಮತ್ತು ಹಣ್ಣುಗಳು ಹೆಚ್ಚು ವಿಷಕಾರಿಯಾಗಿರುತ್ತದೆ. ಅವುಗಳು ಕೀಲು ನೋವು, ಊತ ಮತ್ತು ತುರಿಕೆಗೆ ಚಿಕಿತ್ಸೆ ನೀಡಲು ಬಳಸುತ್ತಾರೆ.
ಚೆರ್ರಿ ಲಾರೆಲ್
ಜನರು ತಮ್ಮ ಮನೆಯ ವಾತಾವರಣದಲ್ಲಿ ಚೆರ್ರಿ ಲಾರೆಲ್ ನೆಡಲು ಇಷ್ಟಪಡುತ್ತಾರೆ. ಇದು ನೋಡಲು ಸುಂದರವಾಗಿ ಕಾಣಿಸಿದರೂ, ಮನುಷ್ಯರಿಗೂ ಮತ್ತು ಪ್ರಾಣಿಗಳಿಗೆ ಹಾನಿಕರವಾಗಿದೆ.