ಹೊಟ್ಟೆ ಬೊಜ್ಜು ಕರಗಿಸಲು ಇದೇ ಬೆಸ್ಟ್​ ಟಿಪ್ಸ್

ಮೋಹನ್​ ಶೆಟ್ಟಿ

ಹೊಟ್ಟೆ ಬೊಜ್ಜು ಕರಗಿಸಲು ಇದೇ ಬೆಸ್ಟ್​ ಟಿಪ್ಸ್

ಹೊಟ್ಟೆ ಬೆಳೆದಷ್ಟು ದೇಹವು ಅಸಹ್ಯವಾಗಿ ಕಾಣುತ್ತದೆ. ಹೊಟ್ಟೆಯಲ್ಲಿ ಬೊಜ್ಜು ಹೊಂದಿರುವ ಬಹುತೇಕರು ಪ್ರತಿದಿನ ಕನ್ನಡಿ ನೋಡುವಾಗ ಹೇಗಾದರೂ ಮಾಡಿ ತಮ್ಮ ಹೊಟ್ಟೆಯನ್ನು ಕಡಿಮೆ ಮಾಡಿಕೊಳ್ಳಬೇಕೆಂದು ಒಂದು ಬಾರಿಯಾದರೂ ಯೋಚನೆ ಮಾಡುತ್ತಾರೆ.

ಬದ್ಧತೆಯ ಮೇಲೆ ಅವಲಂಬಿತ

ನೀವು ನೆನಪಿನಲ್ಲಿಡಬೇಕಾದ ಮೊದಲ ವಿಷಯವೇನೆಂದರೆ ತೂಕವನ್ನು ಕಳೆದುಕೊಳ್ಳುವುದು ಒಂದು ಸಣ್ಣ ಪ್ರಕ್ರಿಯೆಯಲ್ಲ. ಇದು ಖಂಡಿತವಾಗಿಯೂ ಸ್ವಲ್ಪ ಅಲ್ಲ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅದು ಕೂಡ ಅವರವರ ಬದ್ಧತೆಯ ಮೇಲೆ ಅವಲಂಬಿತವಾಗಿರುತ್ತದೆ.

ಡಯಟ್​

ಕಡಿಮೆ ಕಾರ್ಬೋಹೈಡ್ರೇಟ್ ಹೊಂದಿರುವ ಆಹಾರ ಮಾತ್ರ ಸೇವಿಸಬೇಕು. ಸಕ್ಕರೆ ತಿಂಡಿ, ಬಿಳಿ ಬ್ರೆಡ್‌ನಂತಹ ಸಂಸ್ಕರಿಸಿದ ಆಹಾರಗಳನ್ನು ಯಾವುದೇ ಕಾರಣಕ್ಕೂ ತಿನ್ನಬೇಡಿ. ಬದಲಿಗೆ, ಒಳ್ಳೆಯ ಕೊಬ್ಬಿರುವ ಬಟರ್​ ಫ್ರೂಟ್​ ಸೇವಿಸಿ. ಆಹಾರದಲ್ಲಿ ಬೀಜಗಳು, ಮೊಟ್ಟೆಗಳು ಮತ್ತು ಹಸಿರು ತರಕಾರಿಗಳಂತಹ ಆಹಾರಗಳನ್ನು ಸೇರಿಸಿ.

ಒಳ್ಳೆಯ ನಿದ್ರೆ

ನಿದ್ರೆಗೂ ದೇಹದ ತೂಕಕ್ಕೂ ಸಂಬಂಧವಿದೆ. ಸರಿಯಾಗಿ ನಿದ್ದೆ ಮಾಡದಿದ್ದರೆ ಹಾರ್ಮೋನ್ ಅಸಮತೋಲನ ಉಂಟಾಗುತ್ತದೆ. ಈ ಕಾರಣದಿಂದಾಗಿ ನಿಮ್ಮ ತೂಕ ಹೆಚ್ಚಾಗುತ್ತದೆ. ಆದ್ದರಿಂದ ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ನಿತ್ಯವೂ ಏಳೆಂಟು ಗಂಟೆಗಳ ಕಾಲ ಆರಾಮವಾಗಿ ನಿದ್ರಿಸುವುದು ಅವಶ್ಯಕ.

ಸಾಕಷ್ಟು ನೀರು

ಒಂದು ದಿನದಲ್ಲಿ ನೀವು ಖಂಡಿತವಾಗಿಯೂ ಎರಡರಿಂದ ಮೂರು ಲೀಟರ್ ನೀರನ್ನು ಕುಡಿಯಬೇಕು. ಕಷ್ಟಪಟ್ಟು ಕೆಲಸ ಮಾಡುವವರು ಮತ್ತು ಹೆಚ್ಚು ಬೆವರು ಸುರಿಸುವವರು ಹೆಚ್ಚು ಕುಡಿಯಬೇಕಾಗಬಹುದು. ಸಾಕಷ್ಟು ನೀರು ಕುಡಿಯುವುದರಿಂದ ನಿಮ್ಮ ದೇಹದ ಚಯಾಪಚಯವು ಸರಾಗವಾಗಿ ನಡೆಯುತ್ತದೆ. ಇದು ನಿಮ್ಮ ತೂಕ ಹೆಚ್ಚಾಗುವುದನ್ನು ತಡೆಯುತ್ತದೆ.

ಒತ್ತಡಕ್ಕೆ ಗುಡ್​ಬೈ

ನಿಮಗೆ ಬೇಡವಾದ ಎಲ್ಲ ವಿಷಯಗಳ ಬಗ್ಗೆ ಯೋಚಿಸುವ ಮೂಲಕ ನಿಮ್ಮನ್ನು ಒತ್ತಡಕ್ಕೆ ಒಳಪಡಿಸಕೊಳ್ಳಬೇಡಿ. ಕೆಲವರು ಒತ್ತಡದ ಕಾರಣದಿಂದ ಹೆಚ್ಚು ತಿನ್ನುತ್ತಾರೆ. ಅದರಿಂದ ಅವರ ತೂಕ ಹೆಚ್ಚಾಗುತ್ತದೆ. ಹೀಗಾಗಿ ಶಾಂತವಾಗಿರಿ ಮತ್ತು ಆಗುವುದೆಲ್ಲ ಒಳ್ಳೆಯದಕ್ಕೆ ಎಂಬ ಭಾವನೆ ಬೆಳೆಸಿಕೊಳ್ಳಿ.

ವ್ಯಾಯಾಮ

ನಿಮ್ಮ ದೇಹವನ್ನು ದೈಹಿಕವಾಗಿ ಕ್ರಿಯಾಶೀಲವಾಗಿರಿಸಿಕೊಳ್ಳಿ. ದಿನಕ್ಕೆ ಕನಿಷ್ಠ 30 ರಿಂದ 40 ನಿಮಿಷಗಳ ಕಾಲ ವ್ಯಾಯಾಮ ಮಾಡಿ. ವಿಶೇಷವಾಗಿ ಹೊಟ್ಟೆಯನ್ನು ಕಡಿಮೆ ಮಾಡುವ ವ್ಯಾಯಾಮಗಳ ಮೇಲೆ ಕೇಂದ್ರೀಕರಿಸಿ. ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ.