ಬೇಸಿಗೆಯಲ್ಲಿ ಸೌತೆಕಾಯಿ ಜ್ಯೂಸ್​ ಕುಡಿಯುವ ಉಪಯೋಗ

ವಿನಾಯಕ ನಾಯಕ

ಬೇಸಿಗೆಯಲ್ಲಿ ಸೌತೆಕಾಯಿ ಜ್ಯೂಸ್​ ಕುಡಿಯುವ ಉಪಯೋಗ

ಬೇಸಿಗೆಯಲ್ಲಿ ನೀವು ಕೇವಲ ನೀರನ್ನು ಕುಡಿದು ಮಾತ್ರ ದೇಹವನ್ನು ತಂಪಾಗಿರಿಸಲು ಸಾಧ್ಯವಿಲ್ಲ. ಸೌತೆಕಾಯಿಯನ್ನು ಕೇವಲ ತಿನ್ನುಬ ಬದಲು ಅದರ ಜ್ಯೂಸ್​ ಮಾಡಿ ಕುಡಿದರೆ, ನಿರ್ಜಲೀಕರಣ, ಉಷ್ಣತೆ ನಿಯಂತ್ರಣ, ತೂಕ ಕಡಿಮೆ ಹಾಗೂ ಹೊಳೆಯುವ ಚರ್ಮವನ್ನು ನಿಮ್ಮದಾಗಿಸಿಕೊಳ್ಳಬಹುದು.

ದೇಹದ ಹೈಡ್ರೇಶನ್ ಹೆಚ್ಚಿಸುತ್ತದೆ

ಬೇಸಿಗೆಯಲ್ಲಿ ಅತಿಯಾದ ಬೆವರಿನಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಸೌತೆಕಾಯಿ ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಅಗತ್ಯವಿರುವ ನೀರಿನಂಶ ಮರುಪೂರಣವಾಗಿ, ದೇಹ ಇಡೀ ದಿನ ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ.

ದೇಹದ ಉಷ್ಣತೆ ನಿಯಂತ್ರಣ

ಇದು ನೈಸರ್ಗಿಕವಾಗಿ ದೇಹದ ಒಳಭಾಗವನ್ನು ತಂಪಾಗಿಸುತ್ತದೆ. ಹೊಟ್ಟೆಯ ಉರಿ ಅಥವಾ ಅತಿಯಾದ ಶಾಖದಿಂದ ಉಂಟಾಗುವ ಸಮಸ್ಯೆಗಳನ್ನು ಕಡಿಮೆ ಮಾಡಲು ಇದು ಸಹಕಾರಿ.

ತೂಕ ಇಳಿಕೆಗೆ ಸಹಕಾರಿ

ಸೌತೆಕಾಯಿ ಜ್ಯೂಸ್‌ನಲ್ಲಿ ಕ್ಯಾಲೋರಿಗಳು ಅತಿ ಕಡಿಮೆ ಇರುತ್ತವೆ ಮತ್ತು ನಾರಿನಂಶ ಸಮೃದ್ಧವಾಗಿರುತ್ತದೆ. ಇದು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ, ಇದರಿಂದ ಅನಗತ್ಯ ಆಹಾರ ಸೇವನೆ ಕಡಿಮೆಯಾಗಿ ತೂಕ ಇಳಿಸಲು ಸಹಾಯವಾಗುತ್ತದೆ.

ಚರ್ಮದ ಆರೋಗ್ಯ ಮತ್ತು ಹೊಳಪು

ಸೌತೆಕಾಯಿಯಲ್ಲಿರುವ ಸಿಲಿಕಾ ಮತ್ತು ಆಂಟಿ-ಆಕ್ಸಿಡೆಂಟ್‌ಗಳು ಚರ್ಮವನ್ನು ಒಳಗಿನಿಂದ ಶುದ್ಧೀಕರಿಸುತ್ತವೆ. ಇದು ಮೊಡವೆಗಳನ್ನು ತಡೆಯುತ್ತದೆ ಮತ್ತು ಬೇಸಿಗೆಯ ಬಿಸಿಲಿನಿಂದ ಕಪ್ಪಾದ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.

ಜೀರ್ಣಕ್ರಿಯೆ ಸುಧಾರಣೆ

ಬೇಸಿಗೆಯಲ್ಲಿ ಕಾಡುವ ಮಲಬದ್ಧತೆ ಮತ್ತು ಅಜೀರ್ಣ ಸಮಸ್ಯೆಗೆ ಸೌತೆಕಾಯಿ ಜ್ಯೂಸ್ ರಾಮಬಾಣ. ಇದರಲ್ಲಿರುವ ನಾರಿನಂಶವು ಕರುಳಿನ ಚಲನೆಯನ್ನು ಸುಗಮಗೊಳಿಸಿ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.