ಡಾರ್ಕ್ ಚಾಕೊಲೇಟ್‌ನಲ್ಲಿರುವ ಫ್ಲೇವನಾಯ್ಡ್‌ಗಳು ರಕ್ತನಾಳಗಳನ್ನು ಸಡಿಲಗೊಳಿಸಿ, ರಕ್ತದೊತ್ತಡವನ್ನು (BP) ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತವೆ..ಬ್ಲೂಬೆರ್ರಿ ಮತ್ತು ಗ್ರೀನ್ ಟೀಗಿಂತಲೂ ಹೆಚ್ಚು ಆ್ಯಂಟಿ-ಆಕ್ಸಿಡೆಂಟ್‌ಗಳು ಇದರಲ್ಲಿವೆ. ಇವು ದೇಹದ ಜೀವಕೋಶಗಳನ್ನು ಹಾನಿಯಾಗದಂತೆ ರಕ್ಷಿಸುತ್ತವೆ..ಇದು ಮೆದುಳಿಗೆ ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತದೆ. ಇದರಿಂದ ನೆನಪಿನ ಶಕ್ತಿ ಮತ್ತು ಏಕಾಗ್ರತೆ ಹೆಚ್ಚಾಗುತ್ತದೆ..ಡಾರ್ಕ್ ಚಾಕೊಲೇಟ್ ತಿಂದ ತಕ್ಷಣ ದೇಹದಲ್ಲಿ 'ಎಂಡಾರ್ಫಿನ್' ಎಂಬ ಹ್ಯಾಪಿ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದು ಮಾನಸಿಕ ಒತ್ತಡವನ್ನು ತಕ್ಷಣವೇ ಕಡಿಮೆ ಮಾಡುತ್ತದೆ..ಇದರಲ್ಲಿರುವ ಬಯೋಆಕ್ಟಿವ್ ಸಂಯುಕ್ತಗಳು ಸೂರ್ಯನ ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸಿ, ತ್ವಚೆಯು ಹೊಳೆಯುವಂತೆ ಮಾಡುತ್ತದೆ.