ನಿಮ್ಮ ಆಹಾರದಲ್ಲಿ ಕಲ್ಲಂಗಡಿ ಬೀಜಗಳನ್ನು ಸೇರಿಸುವುದರಿಂದಾಗುವ ಪ್ರಯೋಜನಗಳು!
ಬಾಬುಪ್ರಸಾದ್ ಮೋಡಿಸ್
ನಿಮ್ಮ ಆಹಾರದಲ್ಲಿ ಕಲ್ಲಂಗಡಿ ಬೀಜಗಳನ್ನು ಸೇರಿಸುವುದರಿಂದಾಗುವ ಪ್ರಯೋಜನಗಳು!
ಕಲ್ಲಂಗಡಿ ಹಣ್ಣನ್ನು ತಿಂದ ಮೇಲೆ ಅದರ ಬೀಜಗಳನ್ನು ಎಸೆಯುವ ಅಭ್ಯಾಸ ಹೆಚ್ಚಿನವರಿಗಿದೆ. ಆದರೆ, ಈ ಪುಟ್ಟ ಬೀಜಗಳು ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳ ಗಣಿಯಾಗಿದೆ.
ಹೃದಯದ ಆರೋಗ್ಯಕ್ಕೆ ಉತ್ತಮ
ಕಲ್ಲಂಗಡಿ ಬೀಜಗಳಲ್ಲಿ ಮೆಗ್ನೀಸಿಯಮ್ ಸಮೃದ್ಧವಾಗಿದೆ. ಇದು ರಕ್ತದೊತ್ತಡವನ್ನು (Blood Pressure) ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಳ
ಈ ಬೀಜಗಳಲ್ಲಿ ಸತು (Zinc) ಮತ್ತು ವಿಟಮಿನ್ ಬಿ ಅಧಿಕವಾಗಿರುತ್ತದೆ. ಸತುವು ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಚರ್ಮ ಮತ್ತು ಕೂದಲಿನ ಸೌಂದರ್ಯ
ಕಲ್ಲಂಗಡಿ ಬೀಜಗಳಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ಚರ್ಮವು ಅಕಾಲಿಕವಾಗಿ ಮುಪ್ಪಾಗುವುದನ್ನು (Aging) ತಡೆಯುತ್ತವೆ. ಇದರಲ್ಲಿರುವ ಪ್ರೋಟೀನ್ ಮತ್ತು ಕಬ್ಬಿಣದ ಅಂಶವು ಕೂದಲು ಉದುರುವುದನ್ನು ಕಡಿಮೆ ಮಾಡುತ್ತೆ.
ಮೂಳೆಗಳ ಬಲವರ್ಧನೆ
ಈ ಬೀಜಗಳಲ್ಲಿ ಮೆಗ್ನೀಸಿಯಮ್ ಜೊತೆಗೆ ತಾಮ್ರ (Copper) ಮತ್ತು ಪೊಟ್ಯಾಸಿಯಮ್ ಅಂಶಗಳೂ ಇವೆ. ಈ ಖನಿಜಗಳು ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸಲು ನೆರವಾಗುತ್ತವೆ.