ಗೆಲುವು, ಪ್ರಶಸ್ತಿ ಮತ್ತು ಮುಂದಿನ ಪಯಣ
‘ಪುಟ್ಟಗೌರಿ’ ಮೂಲಕ ಬಾಲನಟಿಯಾಗಿ ಪಡೆದ ಜನಪ್ರಿಯತೆಯಿಂದ ಹಿಡಿದು ಬಿಗ್‌ಬಾಸ್ ಮೂಲಕ ಮತ್ತಷ್ಟು ಅಭಿಮಾನಿಗಳನ್ನು ಸಂಪಾದಿಸಿರುವ ಸಾನ್ಯಾ, ಇದೀಗ ಸಿನಿಮಾರಂಗದಲ್ಲಿ ತಮ್ಮದೇ ಸ್ಥಾನ ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ನೃತ್ಯ ರಿಯಾಲಿಟಿ ಶೋಗಳಲ್ಲೂ ಭಾಗವಹಿಸಿರುವ ಅವರು, ಮುಂದಿನ ದಿನಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುವ ನಿರೀಕ್ಷೆಯಿದೆ.