ಮೌನಿ ರಾಯ್ 1985ರ ಸೆಪ್ಟೆಂಬರ್ 28ರಂದು ಪಶ್ಚಿಮ ಬಂಗಾಳದ ಕೂಚ್‌ಬಿಹಾರ್‌ನಲ್ಲಿ ಜನಿಸಿದರು. ಮೌನಿ ಅವರ ತಾಯಿ ಮತ್ತು ಅಜ್ಜ ರಂಗಭೂಮಿ ಕಲಾವಿದರಾಗಿದ್ದಾರೆ.
ಕಿರುತೆರೆ ಪ್ರವೇಶ
ಮೌನಿ 2006-2007ರಲ್ಲಿ ಪ್ರಸಾರವಾದ ಜನಪ್ರಿಯ ಹಿಂದಿ ಧಾರಾವಾಹಿ 'ಕ್ಯೂಂಕಿ ಸಾಸ್ ಭಿ ಕಬಿ ಬಹು ಥೀ' ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು.
ದೊಡ್ಡ ಮಟ್ಟದ ಖ್ಯಾತಿ
ದೇವೋಂ ಕೆ ದೇವ್ ಮಹಾದೇವ್ ಧಾರಾವಾಹಿಯ 'ಸತಿ' ಪಾತ್ರ ಹಾಗೂ ಭಾರತೀಯ ಕಿರುತೆರೆಯಲ್ಲಿ ಸಂಚಲನ ಮೂಡಿಸಿದ 'ನಾಗಿನ್' ಧಾರಾವಾಹಿಯ 'ಶಿವನ್ಯಾ' ಪಾತ್ರವು ಅವರಿಗೆ ದೇಶಾದ್ಯಂತ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತು.
ಬಾಲಿವುಡ್ ಪ್ರವೇಶ
2018ರಲ್ಲಿ ಅಕ್ಷಯ್ ಕುಮಾರ್ ಜೊತೆ ನಟಿಸಿದ 'ಗೋಲ್ಡ್' ಚಲನಚಿತ್ರದ ಮೂಲಕ ಮೌನಿ ರಾಯ್ ಬಾಲಿವುಡ್‌ಗೆ ನಾಯಕಿಯಾಗಿ ಕಾಲಿಟ್ಟರು.
ಕನ್ನಡ ಚಿತ್ರರಂಗದ ನಂಟು
ಪ್ರಶಾಂತ್ ನೀಲ್ ನಿರ್ದೇಶನದ, ರಾಕಿಂಗ್ ಸ್ಟಾರ್ ಯಶ್ ನಟನೆಯ 'ಕೆ.ಜಿ.ಎಫ್: ಅಧ್ಯಾಯ 2' ಚಿತ್ರದ ಸೂಪರ್ ಹಿಟ್ “ಗಲಿ ಗಲಿ” ಹಾಡಿಗೆ ಕನ್ನಡದಲ್ಲೂ ಸಖತ್ ಆಗಿ ಡಾನ್ಸ್ ಮಾಡುವ ಮೂಲಕ ಕನ್ನಡಿಗರ ಗಮನ ಸೆಳೆದಿದ್ದರು.
ಉತ್ತಮ ನೃತ್ಯಗಾರ್ತಿ
ಮೌನಿ ರಾಯ್ ಒಬ್ಬ ನುರಿತ ಕಥಕ್ ನೃತ್ಯಗಾರ್ತಿ ಹಾಗೂ ಹಿಂದಿಯ ಹಲವು ಡಾನ್ಸ್ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ.
ವೈವಾಹಿಕ ಜೀವನ
ಮೌನಿ ಜನವರಿ 27, 2022 ರಂದು ಉದ್ಯಮಿ ಸೂರಜ್ ನಂಬಿಯಾರ್ ಅವರನ್ನು ವಿವಾಹವಾಗಿ2ದ್ದರು. ಇತ್ತೀಚೆಗೆ ತಮ್ಮ ಪತಿಯಿಂದ ಮೌನಿ ದೂರವಾಗಿದ್ದಾರೆ.