ಧುರಂಧರ್ ಸಿನಿಮಾ ಮೂಲಕ ಸಿನಿ ಪ್ರೇಕ್ಷಕರ ಮನ ಕದ್ದಿರುವ ಚೆಲುವೆ ಸಾರಾ ಅರ್ಜುನ್ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೆಲ ಫೋಟೊಗಳನ್ನು ಹಂಚಿಕೊಂಡಿದ್ದು, ಇದು ನನ್ನ ನೆಚ್ಚಿನ ಸ್ಥಳ ಎಂದು ಕ್ಯಾಪ್ಶನ್ ಬರೆದಿದ್ದಾರೆ.
ಜನನ ಮತ್ತು ಹಿನ್ನೆಲೆ
ಸಾರಾ ಅರ್ಜುನ್ ಜೂನ್ 18, 2005 ರಂದು ಮುಂಬೈನಲ್ಲಿ ಜನಿಸಿದರು. ಇವರ ತಂದೆ ರಾಜ್ ಅರ್ಜುನ್ ಕೂಡ ಒಬ್ಬ ನಟರಾಗಿದ್ದಾರೆ.
ಬಾಲ ನಟಿಯಾಗಿ ವೃತ್ತಿಜೀವನ
ಸಾರಾ ತಮ್ಮ ವೃತ್ತಿಜೀವನವನ್ನು ಬಹಳ ಚಿಕ್ಕ ವಯಸ್ಸಿನಲ್ಲಿಯೇ ಪ್ರಾರಂಭಿಸಿದರು. ಕೇವಲ 18 ತಿಂಗಳ ಪ್ರಾಯದಲ್ಲೇ ದೂರದರ್ಶನ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿ, ಚಿತ್ರರಂಗಕ್ಕೆ ಬರುವಷ್ಟರಲ್ಲಿ ನೂರಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ನಟಿಸಿದ್ದರು.
ಚಿತ್ರರಂಗಕ್ಕೆ ಪಾದಾರ್ಪಣೆ
2011ರಲ್ಲಿ ಬಿಡುಗಡೆಯಾದ ನಿರ್ದೇಶಕ ಎ.ಎಲ್. ವಿಜಯ್ ಅವರ ತಮಿಳು ಚಲನಚಿತ್ರವಾದ 'ದೈವ ತಿರುಮಗಳ್' ಚಿತ್ರದ ಮೂಲಕ ಬಾಲನಟಿಯಾಗಿ ಚಿತ್ರರಂಗಕ್ಕೆ ಪ್ರವೇಶಿಸಿದರು. ಈ ಚಿತ್ರದಲ್ಲಿ ವಿಕ್ರಮ್ ಮಗಳಾಗಿ ಇವರ ಅಭಿನಯವು ವ್ಯಾಪಕ ಮೆಚ್ಚುಗೆಯನ್ನು ಗಳಿಸಿಕೊಟ್ಟಿತು.
ಮಣಿರತ್ನಂರ ಸಿನಿಮಾ ತಂದ ಖ್ಯಾತಿ
ಮಣಿರತ್ನಂ ಅವರ ಪ್ರತಿಷ್ಠಿತ ಐತಿಹಾಸಿಕ ಮಹಾಕಾವ್ಯ ಚಲನಚಿತ್ರವಾದ 'ಪೊನ್ನಿಯಿನ್ ಸೆಲ್ವನ್' ಚಿತ್ರಗಳಲ್ಲಿ ನಾಯಕಿ ನಂದಿನಿ ಪಾತ್ರದ ಕಿರಿಯ ವಯಸ್ಸಿನ ಪಾತ್ರದಲ್ಲಿ ಸಾರಾ ಅರ್ಜುನ್ ಅಭಿನಯಿಸಿದ್ದರು.
ಧುರಂಧರ್ ಮೂಲಕ ಜಗತ್ವಿಖ್ಯಾತಿ
ಬಾಲನಟಿಯಾಗಿ ಅಪಾರ ಜನಪ್ರಿಯತೆ ಗಳಿಸಿದ್ದ ಸಾರಾ ಅರ್ಜುನ್, ಬಾಲಿವುಡ್‌ನ 'ಧುರಂಧರ್' ಚಿತ್ರದಲ್ಲಿ ರಣ್‌ವೀರ್ ಸಿಂಗ್ ಜೊತೆಗೆ ನಾಯಕಿಯಾಗಿ ನಟಿಸುವ ಮೂಲಕ ಪ್ರಮುಖ ಚಿಕ್ಕ ವಯಸ್ಸಿನಲ್ಲಿಯೇ ಬಹುದೊಡ್ಡ ಹೆಸರನ್ನು ಗಳಿಸಿದ್ದಾರೆ.