ಈ ಲಕ್ಷಣಗಳು ನಿಮ್ಮಲ್ಲಿ ಕಾಡುತ್ತಿದ್ರೆ ಎಚ್ಚರವಿರಲಿ!

ಮೋಹನ್​ ಶೆಟ್ಟಿ

ಈ ಲಕ್ಷಣಗಳು ನಿಮ್ಮಲ್ಲಿ ಕಾಡುತ್ತಿದ್ರೆ ಎಚ್ಚರವಿರಲಿ!

ಇಂದಿನ ಆಧುನಿಕ ಟೆಕ್ನಾಲಜಿ, ಜೀವನಶೈಲಿಯಿಂದಾಗಿ ಎಲ್ಲವೂ ಬದಲಾಗುತ್ತಿವೆ. ಅದರಲ್ಲೂ, ಮನುಷ್ಯನ ಆರೋಗ್ಯವಂತು ಹಂತ ಹಂತವಾಗಿ ಹದಗೆಡುತ್ತಿದೆ. ಕೆಲಸದ ಒತ್ತಡ, ಆಹಾರ ಕ್ರಮದಲ್ಲಿ ಇಲ್ಲದ ಸಮೋತಲಿತ, ಅಪೌಷ್ಠಿಕತೆ ಸೇರಿದಂತೆ ನಾನಾ ಕಾರಣಗಳಿಂದ ಅನಾರೋಗ್ಯವು ನಮ್ಮ ಬೆನ್ನತ್ತುತ್ತಿವೆ.

30ರಿಂದ 35 ವರ್ಷ

ಹಲವು ಕಾಯಿಲೆಗಳ ಪೈಕಿ ಅನೇಕರಲ್ಲಿ ಇಂದು ತೀರ ಸಾಮಾನ್ಯವಾಗಿ ಕಾಡುವ ಸಮಸ್ಯೆ ಎಂದರೆ ಅದು ಬಿಪಿ. ಹಲವು ಜನರಿಗೆ ಚಿಕ್ಕ ವಯಸ್ಸಿನಲ್ಲಿಯೇ ಬಿಪಿ ಕಾಣಿಸಿಕೊಳ್ಳುತ್ತಿದೆ. ಈ ಸಮಸ್ಯೆ 30ರಿಂದ 35 ವರ್ಷ ವಯಸ್ಸಿನೊಳಗಿನ ಜನರಲ್ಲಿ ಹೆಚ್ಚಾಗಿ ಕಾಡುತ್ತದೆ. ವಾಸ್ತವವಾಗಿ, ಇದಕ್ಕೆ ಹಲವು ಕಾರಣಗಳಿವೆ.

ಹೃದಯಾಘಾತಕ್ಕೂ ಕಾರಣ

ಆಹಾರ ಪದ್ಧತಿ, ಕಳಪೆ ಜೀವನಶೈಲಿ ಮತ್ತು ಮಾನಸಿಕ ಒತ್ತಡ. ಬಿಪಿ ಕಾಯಿಲೆಯು ವಿಪರೀತವಾದರೆ ಖಂಡಿತ ಅಪಾಯಕಾರಿಯೇ. ಇದನ್ನು ನಿಯಂತ್ರಣದಲ್ಲಿಟ್ಟುಕೊಳ್ಳದಿದ್ದರೆ, ಹೃದಯಾಘಾತಕ್ಕೂ ಕಾರಣವಾಗುವ ಅಪಾಯವಿದೆ. ಇದನ್ನು ಹತೋಟಿಗೆ ತರುವುದ್ಹೇಗೆ? ಎಂಬುದನ್ನು ಇಲ್ಲಿ ತಿಳಿಯೋಣ ಬನ್ನಿ.

ಸಾಮಾನ್ಯ ಕಾರಣಗಳು...

ಇದಕ್ಕೆ ಹಲವು ಕಾರಣಗಳಿವೆ ಎನ್ನುತ್ತಾರೆ ವೈದ್ಯರು. ಸಾಮಾನ್ಯ ಕಾರಣವೆಂದರೆ ಸರಿಯಾದ ಆಹಾರದ ಕೊರತೆ. ಅತಿಯಾಗಿ ಹೊರಗಡೆ ಊಟ ಮಾಡುವುದು ಮತ್ತು ಹೆಚ್ಚು ಪ್ರಮಾಣದಲ್ಲಿ ಉಪ್ಪು ಸೇವಿಸುವುದರಿಂದಲೂ ಅಧಿಕ ರಕ್ತದೊತ್ತಡ ಉಂಟಾಗುತ್ತದೆ.

ಅಧಿಕ ರಕ್ತದೊತ್ತಡದ ಲಕ್ಷಣಗಳಿವು

ಮಾನಸಿಕ ಒತ್ತಡ, ದೀರ್ಘಕಾಲ ಕುಳಿತುಕೊಳ್ಳುವುದು, ನಿದ್ರೆಯ ಕೊರತೆ ಮತ್ತು ದೈಹಿಕ ಚಟುವಟಿಕೆಯ ಕೊರತೆಯೂ ಈ ಸಮಸ್ಯೆಯನ್ನು ಉಲ್ಬಣಿಸುತ್ತದೆ. ವಿಶ್ರಾಂತಿ ಕೊರತೆ, ತಲೆಸುತ್ತು ತಲೆನೋವು, ತಲೆಯಲ್ಲಿ ಭಾರವಾದ ಭಾವನೆ, ಒಮ್ಮೊಮ್ಮೆ ದೃಷ್ಟಿ ಮಂದವಾಗುವುದು, ಆತಂಕ, ಆಯಾಸ

ಹತೋಟಿಗೆ ತರಲು ಆಹಾರವೇ ಮೊದಲ ಹೆಜ್ಜೆ

ನೀವು ಸೇವಿಸುವ ಆಹಾರದಲ್ಲಿ ಉಪ್ಪನ್ನು ಮಿತವಾಗಿ ಬಳಸಿ. ದಿನಕ್ಕೆ 5 ಗ್ರಾಂಗಿಂತ ಹೆಚ್ಚು ಸೇವಿಸಬೇಡಿ. ಪ್ಯಾಕ್ ಮಾಡಿದ, ಜಂಕ್ ಫುಡ್‌ಗಳ ಸೇವನೆಯನ್ನು ಕಡಿಮೆ ಮಾಡಿ. ಯೋಗಾಭ್ಯಾಸ ರೂಢಿಸಿಕೊಳ್ಳಿ. ತೂಕವನ್ನು ನಿಯಂತ್ರಣದಲ್ಲಿಡಿ ಮತ್ತು ವ್ಯಾಯಾಮ ಮಾಡಿ.