ಬಿಸಿಲಿನಲ್ಲಿ ಓಡಾಡುವ ಮುನ್ನ ಎಚ್ಚರ! ಈ ಕಾಯಿಲೆಗಳು ನಿಮ್ಮನ್ನು ಕಾಡಬಹುದು..
ಭಾನುಪ್ರಿಯ ಡಿ.ಕೆ
ಬಿಸಿಲಿನಲ್ಲಿ ಓಡಾಡುವ ಮುನ್ನ ಎಚ್ಚರ! ಈ ಕಾಯಿಲೆಗಳು ನಿಮ್ಮನ್ನು ಕಾಡಬಹುದು..
ಬೇಸಿಗೆಯ ಅತಿಯಾದ ಬಿಸಿಲಿನಲ್ಲಿ ಓಡಾಡುವುದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಅತಿಯಾದ ತಾಪಮಾನದಿಂದ ಉಂಟಾಗುವ ಪ್ರಮುಖ ಆರೋಗ್ಯ ಸಮಸ್ಯೆಗಳು ಇಲ್ಲಿವೆ.
ಹೀಟ್ ಸ್ಟ್ರೋಕ್
ಇದು ಬಿಸಿಲಿನಿಂದ ಬರುವ ಅತ್ಯಂತ ಅಪಾಯಕಾರಿ ಸ್ಥಿತಿ. ದೇಹದ ತಾಪಮಾನವು 104°F (40°C) ಗಿಂತ ಹೆಚ್ಚಾದಾಗ ಮತ್ತು ದೇಹವು ತನ್ನನ್ನು ತಾನು ತಂಪುಗೊಳಿಸಲು ಸಾಧ್ಯವಾಗದಿದ್ದಾಗ ಹೀಟ್ ಸ್ಟ್ರೋಕ್ ಸಂಭವಿಸುತ್ತದೆ.
ನಿರ್ಜಲೀಕರಣ
ಅತಿಯಾದ ಬಿಸಿಲಿನಿಂದ ಬೆವರಿನ ರೂಪದಲ್ಲಿ ದೇಹದ ನೀರು ಮತ್ತು ಲವಣಾಂಶಗಳು ಹೊರಹೋಗುತ್ತವೆ. ಇದನ್ನು ಸರಿದೂಗಿಸಲು ಸಾಕಷ್ಟು ನೀರು ಕುಡಿಯದಿದ್ದರೆ ನಿರ್ಜಲೀಕರಣ ಉಂಟಾಗುತ್ತದೆ. ಇದರಿಂದ ವಿಪರೀತ ಬಾಯಾರಿಕೆ, ಒಣಗಿದ ಬಾಯಿ, ಸುಸ್ತು ಮತ್ತು ಗಾಢ ಬಣ್ಣದ ಮೂತ್ರ ಸಂಭವಿಸುತ್ತದೆ.
ಚರ್ಮದ ಅಲರ್ಜಿ
ಬೆವರಿನ ಗ್ರಂಥಿಗಳು ಮುಚ್ಚಿಹೋದಾಗ ಚರ್ಮದ ಮೇಲೆ ಸಣ್ಣ ಕೆಂಪು ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಇದನ್ನು ಸಾಮಾನ್ಯವಾಗಿ 'ಬೆವರು ಸಾಲೆ' ಎಂದು ಕರೆಯಲಾಗುತ್ತದೆ. ಇದು ಚರ್ಮದ ಮೇಲೆ ತುರಿಕೆ ಮತ್ತು ಉರಿ ಕಂಡುಬರುವುದು.
ಸನ್‌ಬರ್ನ್
ಸೂರ್ಯನ ನೇರಳಾತೀತ ಕಿರಣಗಳಿಗೆ ದೀರ್ಘಕಾಲದವರೆಗೆ ಚರ್ಮವು ಒಡ್ಡಿಕೊಂಡಾಗ ಚರ್ಮದ ಮೇಲ್ಪದರ ಸುಟ್ಟಂತಾಗುತ್ತದೆ. ಇದು ಚರ್ಮ ಕೆಂಪಾಗುವುದು, ಉರಿ ಮತ್ತು ಕೆಲವು ದಿನಗಳ ನಂತರ ಚರ್ಮ ಸುಲಿಯುವುದು.
ತೀವ್ರ ಸುಸ್ತು
ದೇಹದಲ್ಲಿ ನೀರು ಮತ್ತು ಉಪ್ಪಿನಂಶ ಕಡಿಮೆಯಾದಾಗ ಸ್ನಾಯುಗಳಲ್ಲಿ ನೋವು ಅಥವಾ ಸೆಳೆತ ಉಂಟಾಗುತ್ತದೆ. ವಿಶೇಷವಾಗಿ ಕಾಲು ಮತ್ತು ಹೊಟ್ಟೆಯ ಭಾಗದಲ್ಲಿ ಸೆಳೆತ ಕಾಣಿಸಿಕೊಳ್ಳಬಹುದು.