ಬಿಸಿಸಿಐ ನೂತನ ಅಧ್ಯಕ್ಷ ಮಿಥುನ್ ಮನ್ಹಾಸ್ಗೆ ಸಿಗುವ ಸಂಬಳವೆಷ್ಟು? ಏನೆಲ್ಲ ಭತ್ಯೆ? ಇಲ್ಲಿದೆ ವಿವರ | BCCI President
Vijayavan
ಬಿಸಿಸಿಐ ನೂತನ ಅಧ್ಯಕ್ಷ ಮಿಥುನ್ ಮನ್ಹಾಸ್ಗೆ ಸಿಗುವ ಸಂಬಳವೆಷ್ಟು? ಏನೆಲ್ಲ ಭತ್ಯೆ? ಇಲ್ಲಿದೆ ವಿವರ | BCCI President
ಐಪಿಎಲ್ನ ಡೆಲ್ಲಿ ಡೇರ್ ಡೆವಿಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಮಿಥುನ್ ಮನ್ಹಾಸ್ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಎಷ್ಟು ಸಂಭಾವನೆ?
ಬಿಸಿಸಿಐ ಅಧ್ಯಕ್ಷ ಸ್ಥಾನವು ಗೌರವಾನ್ವಿತ ಆಗಿರುವುದರಿಂದ, ಮನ್ಹಾಸ್ ಅವರಿಗೆ ಮಂಡಳಿಯಿಂದ ಇಷ್ಟೇ ಸಂಬಳ ಫಿಕ್ಸ್ ಅಂತೇನಿಲ್ಲ. ವಾರ್ಷಿಕ ಅಥವಾ ಮಾಸಿಕ ವೇತನವನ್ನೂ ಪಡೆಯುವುದಿಲ್ಲ. ಸಂಬಳದ ಬದಲಿಗೆ ಅಧ್ಯಕ್ಷರಿಗೆ ಎಲ್ಲಾ ಅಧಿಕೃತ ವೆಚ್ಚಗಳನ್ನು ಭರಿಸಲು ಗಣನೀಯ ದೈನಂದಿನ ಭತ್ಯೆ ಮತ್ತು ಸಮಗ್ರ ಸವಲತ್ತುಗಳ ಮೂಲಕ ಹಣವನ್ನು ನೀಡಲಾಗುತ್ತದೆ.
ದಿನಭತ್ಯೆ (ಮೀಟಿಂಗ್)
ಮನ್ಹಾಸ್ ಬಿಸಿಸಿಐ ಅಥವಾ ಇನ್ನೊಂದು ಸಭೆಯ ಅಧ್ಯಕ್ಷತೆ ವಹಿಸಬೇಕಾದಾಗಲೆಲ್ಲಾ, ದೇಶೀಯ ಸಭೆಗಳಿಗೆ ದಿನಕ್ಕೆ 40,000 ರೂ. ಮತ್ತು ಅಂತರರಾಷ್ಟ್ರೀಯ ಸಭೆಗಳಿಗೆ 1 ಸಾವಿರ ಯುಎಸ್ ಡಾಲರ್ (ಅಂದರೆ ದಿನಕ್ಕೆ 89,000 ರೂ.) ಭತ್ಯೆಯನ್ನು ಪಡೆಯಲಿದ್ದಾರೆ.
ದಿನಭತ್ಯೆ (ಕೆಲಸದ ನಿಮಿತ್ತ ಪ್ರಯಾಣ)
ದೇಶದ ಇತರ ನಗರಗಳಿಗೆ ಕೆಲಸದ ನಿಮಿತ್ತ ಪ್ರಯಾಣಿಸಬೇಕಾದಾಗಲೆಲ್ಲಾ ಮನ್ಹಾಸ್ ಅವರಿಗೆ ದಿನಕ್ಕೆ 30,000 ರೂ. ಭತ್ಯೆಯನ್ನು ನೀಡಲಾಗುತ್ತದೆ.
ಪ್ರಯಾಣ ಮತ್ತು ವಸತಿ
ಈ ಭತ್ಯೆಗಳ ಜತೆಗೆ, ಬಿಸಿಸಿಐ ಅಧ್ಯಕ್ಷರು ದೇಶೀಯ ಪ್ರಯಾಣಕ್ಕಾಗಿ ಬ್ಯುಸಿನೆಸ್ ಕ್ಲಾಸ್ ಪ್ರಯಾಣವನ್ನು ಮತ್ತು ಅಂತಾರಾಷ್ಟ್ರೀಯ ಪ್ರಯಾಣಕ್ಕಾಗಿ ಫಸ್ಟ್ ಕ್ಲಾಸ್/ಬ್ಯುಸಿನೆಸ್ ಕ್ಲಾಸ್ ಪ್ರಯಾಣವನ್ನು ಸಹ ಪಡೆಯುತ್ತಾರೆ. ಉನ್ನತ ಮುಖ್ಯಸ್ಥರ ವಸತಿ ವ್ಯವಸ್ಥೆಗಳು ಸಾಮಾನ್ಯವಾಗಿ ಉನ್ನತ ದರ್ಜೆಯ ಹೋಟೆಲ್ ಸೂಟ್‌ಗಳಲ್ಲಿಯೇ ಇರುತ್ತವೆ.