ಮಂಡಲ ಮಕರಜ್ಯೋತಿ

ಕಲಾನ್ವಿತ ಜಿ ಜೈನ್

ಮಂಡಲ ಮಕರಜ್ಯೋತಿ

ಶಬರಿಮಲೆ ಶ್ರೀ ಅಯ್ಯಪ್ಪ ಸನ್ನಿಧಾನದಲ್ಲಿ ಮಂಡಲ ಮಕರಜ್ಯೋತಿ ಮಾಸಾಚರಣೆ ಹಿನ್ನೆಲೆಯಲ್ಲಿ ಭಾನುವಾರ ಗರ್ಭಗುಡಿ ತೆರೆಯಲಾಯಿತು.

ಸಹಸ್ರಾರು ಭಕ್ತರು

ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲು ಸಾವಿರಾರು ಭಕ್ತರು ಮೊದಲ ದಿನವೆ ದರ್ಶನ ಪಡೆದರು.

ನಂಬಿಕೆಯ ಪ್ರತಿರೂಪ

ಸಣ್ಣ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಅಯ್ಯಪ್ಪನ ದರ್ಶನ ಪಡೆಯುತ್ತಾರೆ. ಅಯ್ಯಪ್ಪನ ಮಾಲೆ ಧರಿಸಿ ಭಕ್ತಿಯಿಂದ ದರ್ಶನ ಮಾಡುತ್ತಾರೆ.

ಭಕ್ತಿಯ ದರ್ಶನ

ನ.16 ರಂದು ಗರ್ಭಗುಡಿ ಬಾಗಿಲು ತೆರೆದು, ಡಿ. 26ರಂದು ಚಿನ್ನದ ಅಂಗಿಯ ಭವ್ಯ ಮೆರವಣಿಗೆ ಸನ್ನಿಧಾನ ತಲುಪಲಿದ್ದು, 27ರಂದು ಮಂಡಲ ಪೂಜೆ ನೆರವೇರುವುದು.

ಭಕ್ತಿ ಗೀತೆಯ ಮೂಲಕ ಸಂಪನ್ನ

ಅದೇ ದಿನ ರಾತ್ರಿ ಹರಿವರಾಸನಂ ಹಾಡಿನೊಂದಿಗೆ ಗರ್ಭಗುಡಿ ಬಾಗಿಲು ಮುಚ್ಚಲಾಗುವುದು. ಡಿ. 30 ಕ್ಕೆ ಸಂಜೆ 5ಕ್ಕೆ ಮತ್ತೆ ಗರ್ಭಗುಡಿ ಬಾಗಿಲು ತೆರೆಯಕಲಾಗುವುದು.